Kilniojo Korano reikšmių vertimas - Vertimas į kanadiečių k. - Bašyr Meisuri

Puslapio numeris:close

external-link copy
171 : 4

یٰۤاَهْلَ الْكِتٰبِ لَا تَغْلُوْا فِیْ دِیْنِكُمْ وَلَا تَقُوْلُوْا عَلَی اللّٰهِ اِلَّا الْحَقَّ ؕ— اِنَّمَا الْمَسِیْحُ عِیْسَی ابْنُ مَرْیَمَ رَسُوْلُ اللّٰهِ وَكَلِمَتُهٗ ۚ— اَلْقٰىهَاۤ اِلٰی مَرْیَمَ وَرُوْحٌ مِّنْهُ ؗ— فَاٰمِنُوْا بِاللّٰهِ وَرُسُلِهٖ ۫— وَلَا تَقُوْلُوْا ثَلٰثَةٌ ؕ— اِنْتَهُوْا خَیْرًا لَّكُمْ ؕ— اِنَّمَا اللّٰهُ اِلٰهٌ وَّاحِدٌ ؕ— سُبْحٰنَهٗۤ اَنْ یَّكُوْنَ لَهٗ وَلَدٌ ۘ— لَهٗ مَا فِی السَّمٰوٰتِ وَمَا فِی الْاَرْضِ ؕ— وَكَفٰی بِاللّٰهِ وَكِیْلًا ۟۠

ಓ ಗ್ರಂಥದವರೇ, ನೀವು ನಿಮ್ಮ ಧರ್ಮದ ವಿಷಯದಲ್ಲಿ ಮಿತಿಮೀರದಿರಿ. ಅಲ್ಲಾಹನ ಹೆಸರಿನಲ್ಲಿ ಸತ್ಯವನ್ನಲ್ಲದೇ ಇನ್ನೇನನ್ನೂ ಹೇಳಬೇಡಿರಿ. ಮರ್ಯಮರ ಮಗನಾದ ಮಸೀಹ ಈಸಾ ಕೇವಲ ಅಲ್ಲಾಹನ ಸಂದೇಶವಾಹಕರೂ, ಮತ್ತು ಮರ್ಯಮರ ಕಡೆಗೆ ಹಾಕಲಾದ ಅವನ ವಚನವೂ ಮತ್ತು ಅವನ ಕಡೆಯ ಒಂದು ಆತ್ಮವೂ ಮಾತ್ರ ಆಗಿರುವರು. ಆದ್ದರಿಂದ ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಡಿರಿ ಮತ್ತು ತ್ರೀಏಕತ್ವ ಎಂದು ಹೇಳಬೇಡಿರಿ. ನೀವು (ಹಾಗೆ ಹೇಳುವುದನ್ನು) ಬಿಟ್ಟುಬಿಡಿರಿ ಅದುವೇ ನಿಮಗೆ ಉತ್ತಮವಾಗಿದೆ, ಅಲ್ಲಾಹನು ಮಾತ್ರ ಏಕಮೇವ ಆರಾಧ್ಯನಾಗಿದ್ದಾನೆ. ತನಗೆ ಸಂತಾನವು ಉಂಟಾಗುವುದರಿAದ ಅವನು ಅದೆಷ್ಟೋ ಪಾವನನು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದೇ ಆಗಿದೆ. ಕಾರ್ಯ ನಿರ್ವಾಹಕನಾಗಿ ಅಲ್ಲಾಹನೇ ಸಾಕು. info
التفاسير:

external-link copy
172 : 4

لَنْ یَّسْتَنْكِفَ الْمَسِیْحُ اَنْ یَّكُوْنَ عَبْدًا لِّلّٰهِ وَلَا الْمَلٰٓىِٕكَةُ الْمُقَرَّبُوْنَ ؕ— وَمَنْ یَّسْتَنْكِفْ عَنْ عِبَادَتِهٖ وَیَسْتَكْبِرْ فَسَیَحْشُرُهُمْ اِلَیْهِ جَمِیْعًا ۟

ಮಸೀಹ ಈಸಾರಿಗೆ ಅಲ್ಲಾಹನ ದಾಸರಾಗಿರುವುದರಲ್ಲಿ ಯಾವುದೇ ಸಂಕೋಚ ಉಂಟಾಗಲಾರದು ಮತ್ತು ಸಾಮಿಪ್ಯಗಳಿಸಿದ ಮಲಕ್‌ಗಳಿಗೂ ಸಹ ಇನ್ನು ಯಾರಾದರೂ ಅಲ್ಲಾಹನ ಆರಾಧನೆಯಲ್ಲಿ ತನಗಾಗಿ ವೈಮನಸ್ಸು ತಾಳುತ್ತಾರೋ ಹಾಗೂ ದರ್ಪ ತೋರುತ್ತಾರೋ ಅವರನ್ನು ಅವನು ತನ್ನೆಡೆಗೆ ಒಟ್ಟುಗೂಡಿಸಲಿರುವನು. info
التفاسير:

external-link copy
173 : 4

فَاَمَّا الَّذِیْنَ اٰمَنُوْا وَعَمِلُوا الصّٰلِحٰتِ فَیُوَفِّیْهِمْ اُجُوْرَهُمْ وَیَزِیْدُهُمْ مِّنْ فَضْلِهٖ ۚ— وَاَمَّا الَّذِیْنَ اسْتَنْكَفُوْا وَاسْتَكْبَرُوْا فَیُعَذِّبُهُمْ عَذَابًا اَلِیْمًا ۙ۬— وَّلَا یَجِدُوْنَ لَهُمْ مِّنْ دُوْنِ اللّٰهِ وَلِیًّا وَّلَا نَصِیْرًا ۟

ಇನ್ನು ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮ ಮಾಡಿದರೋ ಅವರ ಪ್ರತಿಫಲವನ್ನು ಅವನು ಅವರಿಗೆ ಸಂಪೂರ್ಣವಾಗಿ ನೀಡುವನು ಮತ್ತು ತನ್ನ ಅನುಗ್ರಹದಿಂದ ಅವರಿಗೆ ಅಧಿಕವಾಗಿ ನೀಡುವನು. ಆದರೆ ದರ್ಪ ಹಾಗೂ ವೈಮನಸ್ಸು ತೋರಿಸುವವರಿಗೆ ಅವನು ವೇದನಾಜನಕ ಶಿಕ್ಷೆಯನ್ನು ನೀಡುವನು ಮತ್ತು ಅವರು ತಮಗೆ ಅಲ್ಲಾಹನ ಹೊರತು ಯಾವೊಬ್ಬ ಮಿತ್ರನನ್ನಾಗಲೀ, ಸಹಾಯಕನನ್ನಾಗಲೀ ಪಡೆಯಲಾರರು. info
التفاسير:

external-link copy
174 : 4

یٰۤاَیُّهَا النَّاسُ قَدْ جَآءَكُمْ بُرْهَانٌ مِّنْ رَّبِّكُمْ وَاَنْزَلْنَاۤ اِلَیْكُمْ نُوْرًا مُّبِیْنًا ۟

ಓ ಜನರೇ, ಖಂಡಿತವಾಗಿಯು ನಿಮ್ಮ ಪ್ರಭುವಿನ ಬಳಿಯಿಂದ ನಿಮಗೆ ಸ್ಪಷ್ಟವಾದ ಪುರಾವೆ (ಕುರ್‌ಆನ್) ಬಂದಿರುತ್ತದೆ ಮತ್ತು ನಾವು ನಿಮ್ಮೆಡೆಗೆ ಸ್ಪಷ್ಟವಾದ ಪ್ರಕಾಶವನ್ನು ಇಳಿಸಿಕೊಟ್ಟಿದ್ದೇವೆ. info
التفاسير:

external-link copy
175 : 4

فَاَمَّا الَّذِیْنَ اٰمَنُوْا بِاللّٰهِ وَاعْتَصَمُوْا بِهٖ فَسَیُدْخِلُهُمْ فِیْ رَحْمَةٍ مِّنْهُ وَفَضْلٍ ۙ— وَّیَهْدِیْهِمْ اِلَیْهِ صِرَاطًا مُّسْتَقِیْمًا ۟ؕ

ಇನ್ನು ಯಾರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೋ-ಮತ್ತು ಅವನ ಪಾಶವನ್ನು ದೃಢವಾಗಿ ಹಿಡಿದು ಕೊಳ್ಳುತ್ತಾನೋ ಅವರನ್ನು ಅವನು ತನ್ನ ಕಾರುಣ್ಯದಲ್ಲೂ, ಅನುಗ್ರಹದಲ್ಲೂ ಪ್ರವೇಶಗೊಳಿಸುವನು. ಮತ್ತು ಅವನು ಅವರಿಗೆ ತನ್ನ ಕಡೆಯ ನೇರಮಾರ್ಗವನ್ನು ತೋರಿಸಿಕೊಡುವನು. info
التفاسير: