Kilniojo Korano reikšmių vertimas - Vertimas į kanadiečių k. - Bašyr Meisuri

Puslapio numeris:close

external-link copy
3 : 25

وَاتَّخَذُوْا مِنْ دُوْنِهٖۤ اٰلِهَةً لَّا یَخْلُقُوْنَ شَیْـًٔا وَّهُمْ یُخْلَقُوْنَ وَلَا یَمْلِكُوْنَ لِاَنْفُسِهِمْ ضَرًّا وَّلَا نَفْعًا وَّلَا یَمْلِكُوْنَ مَوْتًا وَّلَا حَیٰوةً وَّلَا نُشُوْرًا ۟

ಅವರು ಅಲ್ಲಾಹನ ಹೊರತು ಇತರರನ್ನುಆರಾಧ್ಯರನ್ನಾಗಿ ಮಾಡಿಕೊಂಡಿದ್ದಾರೆ. ವಸ್ತುತಃ ಅವರು ಏನನ್ನೂ ಸೃಷ್ಟಿಸಿಲ್ಲ, ಸ್ವತಃ ಅವರೇ ಸೃಷ್ಟಿಗಳು. ಮತ್ತು ಅವರು ತಮಗೂ ಯಾವುದೇ ಲಾಭ ಅಥವಾ ಹಾನಿಯ ಅಧಿಕಾರ ಹೊಂದಿಲ್ಲ ಮತ್ತು ಅವರು ಮರಣವನ್ನಾಗಲೀ, ಜೀವನವನ್ನಾಗಲೀ, ಪುನರುತ್ಥಾನಗೊಳಿಸುವುದನ್ನಾಗಲೀ ತಮ್ಮ ಅಧಿನದಲ್ಲಿ ಹೊಂದಿಲ್ಲ. info
التفاسير:

external-link copy
4 : 25

وَقَالَ الَّذِیْنَ كَفَرُوْۤا اِنْ هٰذَاۤ اِلَّاۤ اِفْكُ ١فْتَرٰىهُ وَاَعَانَهٗ عَلَیْهِ قَوْمٌ اٰخَرُوْنَ ۛۚ— فَقَدْ جَآءُوْ ظُلْمًا وَّزُوْرًا ۟ۚۛ

ಸತ್ಯ ನಿಷೇಧಿಗಳು ಹೇಳಿದರು: ಈ ಕುರ್‌ಆನಂತು ಅವನು ಸ್ವತಃ ರಚಿಸಿರುವಂತಹ ಒಂದು ಸುಳ್ಳಾಗಿದೆ ಮತ್ತು ಇದಕ್ಕೆ ಇತರ ಜನರು ಅವನ ಸಹಾಯ ಮಾಡಿರುತ್ತಾರೆ. ವಾಸ್ತವದಲ್ಲಿ ಸತ್ಯನಿಷೇಧಿಗಳು ಮಹಾ ಅನ್ಯಾಯ ಮತ್ತು ಅಪ್ಪಟ ಸುಳ್ಳಿಗೆ ಇಳಿದಿದ್ದಾರೆ. info
التفاسير:

external-link copy
5 : 25

وَقَالُوْۤا اَسَاطِیْرُ الْاَوَّلِیْنَ اكْتَتَبَهَا فَهِیَ تُمْلٰی عَلَیْهِ بُكْرَةً وَّاَصِیْلًا ۟

ಮತ್ತು ಅವರು ಹೇಳಿದರು: ಇವು ಪೂರ್ವಿಕರ ಕಟ್ಟು ಕಥೆಗಳಾಗಿವೆ. ಇವುಗಳನ್ನು ಅವನು ಬರೆಸಿರುತ್ತಾನೆ. ಸಂಜೆ ಮುಂಜಾನೆಯಲ್ಲಿ ಇದನ್ನು ಅವನ ಮುಂದೆ ಓದಿ ಹೇಳಲಾಗುತ್ತವೆ. info
التفاسير:

external-link copy
6 : 25

قُلْ اَنْزَلَهُ الَّذِیْ یَعْلَمُ السِّرَّ فِی السَّمٰوٰتِ وَالْاَرْضِ ؕ— اِنَّهٗ كَانَ غَفُوْرًا رَّحِیْمًا ۟

ಹೇಳಿರಿ: ಇದನ್ನು ಆಕಾಶಗಳ ಮತ್ತು ಭೂಮಿಯ ರಹಸ್ಯವನ್ನು ಬಲ್ಲವನೇ ಅವತೀರ್ಣಗೊಳಿಸಿದ್ದಾನೆ. ನಿಸ್ಸಂಶಯವಾಗಿಯು ಅವನು ಮಹಾ ಕ್ಷಮಾಶೀಲನು, ಕರುಣಾನಿಧಿಯು ಆಗಿರುತ್ತಾನೆ. info
التفاسير:

external-link copy
7 : 25

وَقَالُوْا مَالِ هٰذَا الرَّسُوْلِ یَاْكُلُ الطَّعَامَ وَیَمْشِیْ فِی الْاَسْوَاقِ ؕ— لَوْلَاۤ اُنْزِلَ اِلَیْهِ مَلَكٌ فَیَكُوْنَ مَعَهٗ نَذِیْرًا ۟ۙ

ಮತ್ತು ಅವರು (ಸತ್ಯನಿಷೇಧಿಗಳು) ಹೇಳಿದರು: “ಇವನು ಎಂತಹ ಸಂದೇಶವಾಹಕ? ಇವನು ಆಹಾರ ಸೇವಿಸುತ್ತಾನೆ. ಹಾಗೂ ಪೇಟೆಗಳಲ್ಲಿ ನಡೆದಾಡುತ್ತಾನೆ! ಮತ್ತು ಇವನ ಜೊತೆ ಮುನ್ನೆಚ್ಚರಿಕೆ ನೀಡುವ ದೇವದೂತನನ್ನು ಏಕೆ ಕಳುಹಿಸಲಾಗಿಲ್ಲ”. info
التفاسير:

external-link copy
8 : 25

اَوْ یُلْقٰۤی اِلَیْهِ كَنْزٌ اَوْ تَكُوْنُ لَهٗ جَنَّةٌ یَّاْكُلُ مِنْهَا ؕ— وَقَالَ الظّٰلِمُوْنَ اِنْ تَتَّبِعُوْنَ اِلَّا رَجُلًا مَّسْحُوْرًا ۟

ಅಥವಾ ಇವನೆಡೆಗೆ ಒಂದು ನಿಧಿಯನ್ನು ಇಳಿಸಬಹುದಿತ್ತಲ್ಲ! ಅಥವಾ ಇವನಿಗೆ ಯಾವುದಾದರೂ ಒಂದು ತೋಟವಿದ್ದು ಅದರಿಂದ ಇವನು ತಿನ್ನಬಹುದಿತ್ತಲ್ಲ ಮತ್ತು ಅಕ್ರಮಿಗಳು ಹೀಗೂ ಹೇಳಿದರು: ನೀವು ಮಾಟ ಬಾಧೆಗೊಳಗಾದಂತಹ ವ್ಯಕ್ತಿಯನ್ನು ಅನುಸರಿಸುತ್ತಿರುವಿರಿ. info
التفاسير:

external-link copy
9 : 25

اُنْظُرْ كَیْفَ ضَرَبُوْا لَكَ الْاَمْثَالَ فَضَلُّوْا فَلَا یَسْتَطِیْعُوْنَ سَبِیْلًا ۟۠

(ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ. info
التفاسير:

external-link copy
10 : 25

تَبٰرَكَ الَّذِیْۤ اِنْ شَآءَ جَعَلَ لَكَ خَیْرًا مِّنْ ذٰلِكَ جَنّٰتٍ تَجْرِیْ مِنْ تَحْتِهَا الْاَنْهٰرُ ۙ— وَیَجْعَلْ لَّكَ قُصُوْرًا ۟

(ಓ ಪೈಗಂಬರರೇ) ನೋಡಿರಿ: ಅವರು ನಿಮ್ಮ ಕುರಿತು ಎಂತೆAತಹ ಉಪಮೆಗಳನ್ನು ಕೊಡುತ್ತಾರೆ. ಸ್ವತಃ ಅವರೇ ದಾರಿತಪ್ಪಿದವರಾಗಿದ್ದಾರೆ ಮತ್ತು ಅವರು ಸನ್ಮಾರ್ಗಕ್ಕೆ ಬರಲು ಸಾಧ್ಯವಿಲ್ಲ. info
التفاسير:

external-link copy
11 : 25

بَلْ كَذَّبُوْا بِالسَّاعَةِ وَاَعْتَدْنَا لِمَنْ كَذَّبَ بِالسَّاعَةِ سَعِیْرًا ۟ۚ

ವಾಸ್ತವದಲ್ಲಿ ಅವರು ಅಂತ್ಯ ದಿನವನ್ನು ಸುಳ್ಳಾಗಿಸಿದ್ದಾರೆ ಮತ್ತು ನಾವು ಅಂತ್ಯ ದಿನವನ್ನು ಸುಳ್ಳಾಗಿಸಿದವರಿಗೆ ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ. info
التفاسير: