Kilniojo Korano reikšmių vertimas - Vertimas į kanadiečių k. - Bašyr Meisuri

ಅಲ್- ಹಜ್ಜ್

external-link copy
1 : 22

یٰۤاَیُّهَا النَّاسُ اتَّقُوْا رَبَّكُمْ ۚ— اِنَّ زَلْزَلَةَ السَّاعَةِ شَیْءٌ عَظِیْمٌ ۟

ಓ ಜನರೇ, ನೀವು ನಿಮ್ಮ ಪ್ರಭುವಿನ ಯಾತನೆಯಿಂದ, ಭಯಪಡಿರಿ. ನಿಸ್ಸಂದೇಹವಾಗಿಯೂ ಪ್ರಳಯದ ಅಂತ್ಯ ಘಳಿಗೆಯ ಕಂಪನವು ಒಂದು ಭಯಂಕರ ಸಂಗತಿಯಾಗಿದೆ. info
التفاسير:

external-link copy
2 : 22

یَوْمَ تَرَوْنَهَا تَذْهَلُ كُلُّ مُرْضِعَةٍ عَمَّاۤ اَرْضَعَتْ وَتَضَعُ كُلُّ ذَاتِ حَمْلٍ حَمْلَهَا وَتَرَی النَّاسَ سُكٰرٰی وَمَا هُمْ بِسُكٰرٰی وَلٰكِنَّ عَذَابَ اللّٰهِ شَدِیْدٌ ۟

ಅದನ್ನು ನೀವು ಕಾಣುವ ದಿನ ಪ್ರತಿಯೊಬ್ಬ ಹಾಲುಣಿಸುವವಳು ತಾನು ಹಾಲುಣಿಸುವ ಮಗುವನ್ನು ಮರೆತುಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯ ಗರ್ಭ ಪಾತವಾಗಿ ಬಿಡುವುದು ಮತ್ತು ನೀವು ಜನರನ್ನು ಅಮಲೇರಿದವರನ್ನಾಗಿ ಕಾಣುವಿರಿ ವಾಸ್ತವದಲ್ಲಿ ಅವರು ಅಮಲೇರಿದವರಲ್ಲ. ಆದರೆ ಅಲ್ಲಾಹನ ಯಾತನೆಯು ಅತ್ಯಂತ ಕಠೋರವಾಗಿರುತ್ತದೆ. info
التفاسير:

external-link copy
3 : 22

وَمِنَ النَّاسِ مَنْ یُّجَادِلُ فِی اللّٰهِ بِغَیْرِ عِلْمٍ وَّیَتَّبِعُ كُلَّ شَیْطٰنٍ مَّرِیْدٍ ۟ۙ

ಅದನ್ನು ನೀವು ಕಾಣುವ ದಿನ ಪ್ರತಿಯೊಬ್ಬ ಹಾಲುಣಿಸುವವಳು ತಾನು ಹಾಲುಣಿಸುವ ಮಗುವನ್ನು ಮರೆತುಬಿಡುವಳು ಮತ್ತು ಪ್ರತಿಯೊಬ್ಬ ಗರ್ಭಿಣಿಯ ಗರ್ಭ ಪಾತವಾಗಿ ಬಿಡುವುದು ಮತ್ತು ನೀವು ಜನರನ್ನು ಅಮಲೇರಿದವರನ್ನಾಗಿ ಕಾಣುವಿರಿ ವಾಸ್ತವದಲ್ಲಿ ಅವರು ಅಮಲೇರಿದವರಲ್ಲ. ಆದರೆ ಅಲ್ಲಾಹನ ಯಾತನೆಯು ಅತ್ಯಂತ ಕಠೋರವಾಗಿರುತ್ತದೆ. info
التفاسير:

external-link copy
4 : 22

كُتِبَ عَلَیْهِ اَنَّهٗ مَنْ تَوَلَّاهُ فَاَنَّهٗ یُضِلُّهٗ وَیَهْدِیْهِ اِلٰی عَذَابِ السَّعِیْرِ ۟

ಯಾರು ಆ ಶೈತಾನನ್ನು ಆಪ್ತನನ್ನಾಗಿ ಮಾಡುತ್ತಾನೋ ಅವನು ಅವನನ್ನು ದಾರಿಗೆಡಿಸುತ್ತಾನೆ ಮತ್ತು ಅವನನ್ನು ನರಕ ಯಾತನೆಯೆಡೆಗೆ ಮುನ್ನಡೆಸುತ್ತಾನೆ ಎಂದು ಅವನ (ಶೈತಾನನ) ಅದೃಷ್ಟದಲ್ಲೇ ಬರೆಯಲಾಗಿದೆ. info
التفاسير:

external-link copy
5 : 22

یٰۤاَیُّهَا النَّاسُ اِنْ كُنْتُمْ فِیْ رَیْبٍ مِّنَ الْبَعْثِ فَاِنَّا خَلَقْنٰكُمْ مِّنْ تُرَابٍ ثُمَّ مِنْ نُّطْفَةٍ ثُمَّ مِنْ عَلَقَةٍ ثُمَّ مِنْ مُّضْغَةٍ مُّخَلَّقَةٍ وَّغَیْرِ مُخَلَّقَةٍ لِّنُبَیِّنَ لَكُمْ ؕ— وَنُقِرُّ فِی الْاَرْحَامِ مَا نَشَآءُ اِلٰۤی اَجَلٍ مُّسَمًّی ثُمَّ نُخْرِجُكُمْ طِفْلًا ثُمَّ لِتَبْلُغُوْۤا اَشُدَّكُمْ ۚ— وَمِنْكُمْ مَّنْ یُّتَوَفّٰی وَمِنْكُمْ مَّنْ یُّرَدُّ اِلٰۤی اَرْذَلِ الْعُمُرِ لِكَیْلَا یَعْلَمَ مِنْ بَعْدِ عِلْمٍ شَیْـًٔا ؕ— وَتَرَی الْاَرْضَ هَامِدَةً فَاِذَاۤ اَنْزَلْنَا عَلَیْهَا الْمَآءَ اهْتَزَّتْ وَرَبَتْ وَاَنْۢبَتَتْ مِنْ كُلِّ زَوْجٍ بَهِیْجٍ ۟

ಓ ಜನರೇ, ನಿಮಗೆ ಪುನರುತ್ಥಾನದ ಬಗ್ಗೆ ಸಂದೇಹವಿದ್ದರೆ ಚಿಂತಿಸಿ ನೋಡಿರಿ: ನಾವು ನಿಮ್ಮನ್ನು ಮಣ್ಣಿನಿಂದ, ಆ ಬಳಿಕ ವೀರ್ಯದಿಂದ, ನಂತರ ರಕ್ತ ಪಿಂಡದಿAದ, ತರುವಾಯ ರೂಪವಿರುವ, ಸ್ವರೂಪವಿಲ್ಲದ ಮಾಂಸ ಪಿಂಡದಿAದ ಸೃಷ್ಟಿಸಿರುತ್ತೇವೆ. (ಇದೆಕೆಂದರೆ) ವಸ್ತುಸ್ಥಿತಿಯನ್ನು ವಿವರಿಸಲಿಕ್ಕಾಗಿ ನಾವಿದನ್ನು ನಿಮಗೆ (ನಮ್ಮ ಸಾಮರ್ಥ್ಯವನ್ನು) ತಿಳಿಸುತ್ತಿದ್ದೇವೆ ಮತ್ತು ನಾವು ಇಚ್ಛಿಸಿದವರನ್ನು ಗರ್ಭಾಶಯಗಳಲ್ಲಿ ಒಂದು ನಿರ್ಧಿಷ್ಟಾವಧಿಯವರೆಗೆ ನೆಲೆಗೊಳಿಸುತ್ತೇವೆ. ತರುವಾಯ ನಿಮ್ಮನ್ನು ಶಿಶುವಿನ ರೂಪದಲ್ಲಿ ಹೊರ ತರುತ್ತೇವೆ. ಇದು ಆ ಬಳಿಕ ನೀವು ನಿಮ್ಮ ಪರಿಪೂರ್ಣ ಯವ್ವನಕ್ಕೆ ತಲುಪಲೆಂದಾಗಿರುತ್ತದೆ. ನಿಮ್ಮ ಪೈಕಿ ಕೆಲವರು ಮೊದಲೇ ಮರಣ ಹೊಂದುವವರಿದ್ದಾರೆ ಮತ್ತು ಕೆಲವರು ಒಂದು ವಸ್ತುವಿನ ಜ್ಞಾನ ಪಡೆದ ನಂತರ ಅರಿವಿಲ್ಲದಾಗುವಷ್ಟು ಮುಪ್ಪಿನ ಪ್ರಾಯಕ್ಕೆ ಮರಳಿಸಲ್ಪಡುವವರೂ ಇದ್ದಾರೆ ಮತ್ತು ನೀವು ಭೂಮಿಯನ್ನು ಒಣಗಿ ಬಂಜರು ಆಗಿರುವುದಾಗಿ ಕಾಣುತ್ತೀರಿ. ಇನ್ನು ನಾವು ಅದರ ಮೇಲೆ ಮಳೆಯನ್ನು ಸುರಿಸಿದಾಗ ಅದು ಗರಿಗೆದರಿ ಮೊಳೆಯುತ್ತದೆ ಮತ್ತು ಸಕಲ ವಿಧದ ಮನ ಮೋಹಕ ಬೆಳೆಯನ್ನು ಬೆಳೆಯುತ್ತದೆ. info
التفاسير: