وه‌رگێڕانی ماناكانی قورئانی پیرۆز - وەرگێڕاوی کەنادی - حەمزە بتور

ژمارەی پەڕە:close

external-link copy
32 : 9

یُرِیْدُوْنَ اَنْ یُّطْفِـُٔوْا نُوْرَ اللّٰهِ بِاَفْوَاهِهِمْ وَیَاْبَی اللّٰهُ اِلَّاۤ اَنْ یُّتِمَّ نُوْرَهٗ وَلَوْ كَرِهَ الْكٰفِرُوْنَ ۟

ಅವರು ತಮ್ಮ ಬಾಯಿಗಳಿಂದ ಅಲ್ಲಾಹನ ಬೆಳಕನ್ನು ನಂದಿಸಲು ಬಯಸುತ್ತಾರೆ. ಆದರೆ ಅಲ್ಲಾಹು ತನ್ನ ಬೆಳಕನ್ನು ಪೂರ್ಣಗೊಳಿಸದೆ ಬಿಡಲು ಅಸಮ್ಮತಿ ಸೂಚಿಸಿದ್ದಾನೆ. ಸತ್ಯನಿಷೇಧಿಗಳು ಎಷ್ಟು ದ್ವೇಷಿಸಿದರೂ ಸಹ. info
التفاسير:

external-link copy
33 : 9

هُوَ الَّذِیْۤ اَرْسَلَ رَسُوْلَهٗ بِالْهُدٰی وَدِیْنِ الْحَقِّ لِیُظْهِرَهٗ عَلَی الدِّیْنِ كُلِّهٖ ۙ— وَلَوْ كَرِهَ الْمُشْرِكُوْنَ ۟

ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ತನ್ನ ಸಂದೇಶವಾಹಕರನ್ನು ಕಳುಹಿಸಿದ್ದು ಅವನೇ. ಎಲ್ಲಾ ಧರ್ಮಗಳ ಮೇಲೆ ಅದು ಜಯಗಳಿಸುವಂತೆ ಮಾಡುವುದಕ್ಕಾಗಿ. ಬಹುದೇವವಿಶ್ವಾಸಿಗಳು ಎಷ್ಟು ದ್ವೇಷಿಸಿದರೂ ಸಹ. info
التفاسير:

external-link copy
34 : 9

یٰۤاَیُّهَا الَّذِیْنَ اٰمَنُوْۤا اِنَّ كَثِیْرًا مِّنَ الْاَحْبَارِ وَالرُّهْبَانِ لَیَاْكُلُوْنَ اَمْوَالَ النَّاسِ بِالْبَاطِلِ وَیَصُدُّوْنَ عَنْ سَبِیْلِ اللّٰهِ ؕ— وَالَّذِیْنَ یَكْنِزُوْنَ الذَّهَبَ وَالْفِضَّةَ وَلَا یُنْفِقُوْنَهَا فِیْ سَبِیْلِ اللّٰهِ ۙ— فَبَشِّرْهُمْ بِعَذَابٍ اَلِیْمٍ ۟ۙ

ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ವಿದ್ವಾಂಸರು ಮತ್ತು ಸಂತರಲ್ಲಿ ಹೆಚ್ಚಿನವರು ಅನ್ಯಾಯವಾಗಿ ಜನರ ಧನವನ್ನು ತಿನ್ನುತ್ತಾರೆ ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಯಾರು ಚಿನ್ನ ಮತ್ತು ಬೆಳ್ಳಿಯನ್ನು ದಾಸ್ತಾನು ಮಾಡುತ್ತಾರೋ ಮತ್ತು ಅದನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲವೋ ಅವರಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ನೀಡಿರಿ. info
التفاسير:

external-link copy
35 : 9

یَّوْمَ یُحْمٰی عَلَیْهَا فِیْ نَارِ جَهَنَّمَ فَتُكْوٰی بِهَا جِبَاهُهُمْ وَجُنُوْبُهُمْ وَظُهُوْرُهُمْ ؕ— هٰذَا مَا كَنَزْتُمْ لِاَنْفُسِكُمْ فَذُوْقُوْا مَا كُنْتُمْ تَكْنِزُوْنَ ۟

ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಸಿ, ನಂತರ ಅದರಿಂದ ಅವರ ಹಣೆ, ಪಾರ್ಶ್ವ ಮತ್ತು ಬೆನ್ನುಗಳಿಗೆ ಬರೆ ಹಾಕುವ ದಿನ. (ಅವರೊಡನೆ ಹೇಳಲಾಗುವುದು): “ಇದು ನೀವು ನಿಮಗಾಗಿ ದಾಸ್ತಾನು ಮಾಡಿಟ್ಟ ಆಸ್ತಿಯಾಗಿದೆ. ನೀವು ದಾಸ್ತಾನು ಮಾಡಿದ ಆಸ್ತಿಯ ರುಚಿಯನ್ನು ನೋಡಿರಿ.” info
التفاسير:

external-link copy
36 : 9

اِنَّ عِدَّةَ الشُّهُوْرِ عِنْدَ اللّٰهِ اثْنَا عَشَرَ شَهْرًا فِیْ كِتٰبِ اللّٰهِ یَوْمَ خَلَقَ السَّمٰوٰتِ وَالْاَرْضَ مِنْهَاۤ اَرْبَعَةٌ حُرُمٌ ؕ— ذٰلِكَ الدِّیْنُ الْقَیِّمُ ۙ۬— فَلَا تَظْلِمُوْا فِیْهِنَّ اَنْفُسَكُمْ ۫— وَقَاتِلُوا الْمُشْرِكِیْنَ كَآفَّةً كَمَا یُقَاتِلُوْنَكُمْ كَآفَّةً ؕ— وَاعْلَمُوْۤا اَنَّ اللّٰهَ مَعَ الْمُتَّقِیْنَ ۟

ನಿಶ್ಚಯವಾಗಿಯೂ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡು. ಭೂಮ್ಯಾಕಾಶಗಳನ್ನು ಸೃಷ್ಟಿಸಿದ ದಿನದಂದಲೇ ಇದು ಅಲ್ಲಾಹನ ಗ್ರಂಥದಲ್ಲಿದೆ. ಅವುಗಳಲ್ಲಿ ನಾಲ್ಕು ಪವಿತ್ರ ತಿಂಗಳುಗಳು.[1] ಅದೇ ನೇರವಾದ ಧರ್ಮ. ಆದ್ದರಿಂದ ಆ ತಿಂಗಳುಗಳಲ್ಲಿ ನೀವು ನಿಮ್ಮ ಮೇಲೆಯೇ ಅಕ್ರಮವೆಸಗಬೇಡಿ. ಬಹುದೇವವಿಶ್ವಾಸಿಗಳು ಒಟ್ಟಾಗಿ ನಿಮ್ಮ ವಿರುದ್ಧ ಯುದ್ಧ ಮಾಡುವಂತೆ ನೀವೂ ಕೂಡ ಒಟ್ಟಾಗಿ ಅವರ ವಿರುದ್ಧ ಯುದ್ಧ ಮಾಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಇದ್ದಾನೆ. info

[1] ಅಂದರೆ ಮುಹರ್‍ರಂ, ರಜಬ್, ದುಲ್‌ಕಅದ ಮತ್ತು ದುಲ್‌ಹಿಜ್ಜ ತಿಂಗಳುಗಳು.

التفاسير: