وه‌رگێڕانی ماناكانی قورئانی پیرۆز - وەرگێڕاوی کەنادی - حەمزە بتور

ಅಲ್ -ಮುದ್ದಸ್ಸಿರ್

external-link copy
1 : 74

یٰۤاَیُّهَا الْمُدَّثِّرُ ۟ۙ

ಓ ಹೊದಿಕೆಯನ್ನು ಹೊದ್ದುಕೊಂಡವರೇ![1] info

[1] ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೊಟ್ಟಮೊದಲು ಸೂರ ಅಲಕ್‌ನ ಪ್ರಥಮ 5 ವಚನಗಳು ಅವತೀರ್ಣವಾದವು. ನಂತರ ದೀರ್ಘ ಸಮಯದ ತನಕ ಅವರಿಗೆ ಕುರ್‌ಆನ್ ಅವತೀರ್ಣವಾಗಲಿಲ್ಲ. ಒಂದಿನ ಇದ್ದಕ್ಕಿದ್ದಂತೆ ಹಿರಾ ಗುಹೆಯಲ್ಲಿ ನೋಡಿದ ಅದೇ ದೇವದೂತರು ಆಕಾಶ ಮತ್ತು ಭೂಮಿಯ ಮಧ್ಯೆ ಸಂಪೂರ್ಣ ದಿಗಂತವನ್ನು ಮುಚ್ಚುವ ರೀತಿಯಲ್ಲಿ ಕುಳಿತಿರುವುದನ್ನು ಕಂಡರು. ಅವರು ಭಯದಿಂದ ಮನೆಗೆ ಓಡಿ ನನ್ನನ್ನು ಹೊದಿಯಿರಿ; ನನ್ನನ್ನು ಹೊದಿಯಿರಿ ಎಂದರು. ಅವರನ್ನು ಹೊದಿಕೆಯಿಂದ ಹೊದಿಯಲಾಯಿತು. ಆಗ ಈ ವಚನಗಳು ಅವತೀರ್ಣವಾದವು.

التفاسير:

external-link copy
2 : 74

قُمْ فَاَنْذِرْ ۟ۙ

ಎದ್ದೇಳಿರಿ ಮತ್ತು ಎಚ್ಚರಿಕೆ ನೀಡಿರಿ. info
التفاسير:

external-link copy
3 : 74

وَرَبَّكَ فَكَبِّرْ ۟ۙ

ನಿಮ್ಮ ಪರಿಪಾಲಕನ (ಅಲ್ಲಾಹನ) ಮಹಾತ್ಮೆಯನ್ನು ಕೊಂಡಾಡಿರಿ. info
التفاسير:

external-link copy
4 : 74

وَثِیَابَكَ فَطَهِّرْ ۟ۙ

ನಿಮ್ಮ ಬಟ್ಟೆಗಳನ್ನು ಶುದ್ಧವಾಗಿಡಿರಿ. info
التفاسير:

external-link copy
5 : 74

وَالرُّجْزَ فَاهْجُرْ ۟ۙ

ಅಶುದ್ಧವನ್ನು ವರ್ಜಿಸಿರಿ. info
التفاسير:

external-link copy
6 : 74

وَلَا تَمْنُنْ تَسْتَكْثِرُ ۟ۙ

ಉಪಕಾರ ಮಾಡಿ ಹೆಚ್ಚು ಗಳಿಸುವ ವ್ಯಾಮೋಹ ಬಿಟ್ಟುಬಿಡಿ. info
التفاسير:

external-link copy
7 : 74

وَلِرَبِّكَ فَاصْبِرْ ۟ؕ

ನಿಮ್ಮ ಪರಿಪಾಲಕನ (ಅಲ್ಲಾಹನ) ಮಾರ್ಗದಲ್ಲಿ ತಾಳ್ಮೆಯಿಂದಿರಿ. info
التفاسير:

external-link copy
8 : 74

فَاِذَا نُقِرَ فِی النَّاقُوْرِ ۟ۙ

ಕಹಳೆಯಲ್ಲಿ ಊದಲಾಗುವಾಗ. info
التفاسير:

external-link copy
9 : 74

فَذٰلِكَ یَوْمَىِٕذٍ یَّوْمٌ عَسِیْرٌ ۟ۙ

ಆ ದಿನವು ಅತ್ಯಂತ ಕಠಿಣ ದಿನವಾಗಿರುವುದು. info
التفاسير:

external-link copy
10 : 74

عَلَی الْكٰفِرِیْنَ غَیْرُ یَسِیْرٍ ۟

ಅದು ಸತ್ಯನಿಷೇಧಿಗಳಿಗೆ ಸುಗಮವಾಗಿರುವುದಿಲ್ಲ. info
التفاسير:

external-link copy
11 : 74

ذَرْنِیْ وَمَنْ خَلَقْتُ وَحِیْدًا ۟ۙ

ನನ್ನನ್ನು ಹಾಗೂ ನಾನು ಏಕಾಂಗಿಯಾಗಿ ಸೃಷ್ಟಿದವನನ್ನು ಬಿಟ್ಟುಬಿಡಿ.[1] info

[1] ಅಂದರೆ ಅವನ ವಿಷಯವನ್ನು ನಾನು ನೋಡಿಕೊಳ್ಳುವೆನು. ಅವನು ಅವನ ತಾಯಿಯ ಹೊಟ್ಟೆಯಿಂದ ಹೊರಬರುವಾಗ ಅವನಲ್ಲಿ ಐಶ್ವರ್ಯ ಅಥವಾ ಮಕ್ಕಳಿರಲಿಲ್ಲ. ಇವೆಲ್ಲವೂ ನಾನು ಅವನಿಗೆ ನೀಡಿದ ಅನುಗ್ರಹಗಳು. ಆದರೂ ಅವನು ಈಗ ನನ್ನ ವಿರುದ್ಧ ಸೆಟೆದು ನಿಂತಿದ್ದಾನೆ. — ಇಲ್ಲಿ ಹೇಳಲಾಗಿರುವುದು ಕುರೈಷಿ ಮುಖಂಡ ವಲೀದ್ ಬಿನ್ ಮುಗೀರ ಎಂಬವನ ಬಗ್ಗೆಯಾಗಿದೆ.

التفاسير:

external-link copy
12 : 74

وَّجَعَلْتُ لَهٗ مَالًا مَّمْدُوْدًا ۟ۙ

ನಾನು ಅವನಿಗೆ ಹೇರಳ ಐಶ್ವರ್ಯವನ್ನು ನೀಡಿದೆನು. info
التفاسير:

external-link copy
13 : 74

وَّبَنِیْنَ شُهُوْدًا ۟ۙ

ಸನ್ನದ್ಧರಾಗಿರುವ ಗಂಡು ಮಕ್ಕಳನ್ನು ನೀಡಿದೆನು. info
التفاسير:

external-link copy
14 : 74

وَّمَهَّدْتُّ لَهٗ تَمْهِیْدًا ۟ۙ

ನಾನು ಅವನಿಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಟ್ಟೆನು. info
التفاسير:

external-link copy
15 : 74

ثُمَّ یَطْمَعُ اَنْ اَزِیْدَ ۟ۙ

ಆದರೂ ನಾನು ಅವನಿಗೆ ಇನ್ನೂ ಹೆಚ್ಚು ನೀಡಬೇಕೆಂದು ಅವನು ಹಾತೊರೆಯುತ್ತಾನೆ. info
التفاسير:

external-link copy
16 : 74

كَلَّا ؕ— اِنَّهٗ كَانَ لِاٰیٰتِنَا عَنِیْدًا ۟ؕ

ಖಂಡಿತ ಇಲ್ಲ. ಅವನು ನಮ್ಮ ವಚನಗಳ ವಿರೋಧಿಯಾಗಿದ್ದಾನೆ. info
التفاسير:

external-link copy
17 : 74

سَاُرْهِقُهٗ صَعُوْدًا ۟ؕ

ಸದ್ಯವೇ ನಾನು ಅವನನ್ನು ಒಂದು ಪ್ರಯಾಸಕರ ಏರುವಿಕೆಯನ್ನು ಏರುವಂತೆ ಮಾಡುವೆನು.[1] info

[1] ಅಂದರೆ ಅವನಿಗೆ ಸಹಿಸಲು ಅಸಾಧ್ಯವಾದ ಶಿಕ್ಷೆಯನ್ನು ನೀಡುವೆನು. ಇತರ ಕೆಲವು ವ್ಯಾಖ್ಯಾನಕಾರರು ಹೇಳುವಂತೆ ನರಕದಲ್ಲಿ ಒಂದು ಅಗ್ನಿಯ ಪರ್ವತವಿದ್ದು ಈತ ಅದನ್ನು ಏರುತ್ತಲೇ ಇರುವನು.

التفاسير:

external-link copy
18 : 74

اِنَّهٗ فَكَّرَ وَقَدَّرَ ۟ۙ

ಅವನು ಯೋಚಿಸಿದನು ಮತ್ತು ನಿರ್ಣಯಿಸಿದನು. info
التفاسير: