وه‌رگێڕانی ماناكانی قورئانی پیرۆز - وەرگێڕاوی کەنادی - حەمزە بتور

ژمارەی پەڕە: 161:151 close

external-link copy
88 : 7

قَالَ الْمَلَاُ الَّذِیْنَ اسْتَكْبَرُوْا مِنْ قَوْمِهٖ لَنُخْرِجَنَّكَ یٰشُعَیْبُ وَالَّذِیْنَ اٰمَنُوْا مَعَكَ مِنْ قَرْیَتِنَاۤ اَوْ لَتَعُوْدُنَّ فِیْ مِلَّتِنَا ؕ— قَالَ اَوَلَوْ كُنَّا كٰرِهِیْنَ ۟ۚ

ಅವರ ಜನರಲ್ಲಿದ್ದ ಅಹಂಕಾರಿಗಳಾದ ಮುಖಂಡರು ಹೇಳಿದರು: “ಓ ಶುಐಬ್! ನಿಶ್ಚಯವಾಗಿಯೂ ನಿನ್ನನ್ನು ಮತ್ತು ನಿನ್ನ ಜೊತೆಗಿರುವ ಸತ್ಯವಿಶ್ವಾಸಿಗಳನ್ನು ನಾವು ನಮ್ಮ ಊರಿನಿಂದ ಓಡಿಸುವೆವು. ಅಥವಾ ನೀವು ನಮ್ಮ ಧರ್ಮಕ್ಕೆ ಮರಳಿ ಬರಬೇಕು.” ಶುಐಬ್ ಹೇಳಿದರು: “ನಾವು ಅದನ್ನು (ನಿಮ್ಮ ಧರ್ಮವನ್ನು) ದ್ವೇಷಿಸುವವರಾಗಿದ್ದರೂ ಸಹ (ಮರಳಿ ಬರಬೇಕೇ)? info
التفاسير:

external-link copy
89 : 7

قَدِ افْتَرَیْنَا عَلَی اللّٰهِ كَذِبًا اِنْ عُدْنَا فِیْ مِلَّتِكُمْ بَعْدَ اِذْ نَجّٰىنَا اللّٰهُ مِنْهَا ؕ— وَمَا یَكُوْنُ لَنَاۤ اَنْ نَّعُوْدَ فِیْهَاۤ اِلَّاۤ اَنْ یَّشَآءَ اللّٰهُ رَبُّنَا ؕ— وَسِعَ رَبُّنَا كُلَّ شَیْءٍ عِلْمًا ؕ— عَلَی اللّٰهِ تَوَكَّلْنَا ؕ— رَبَّنَا افْتَحْ بَیْنَنَا وَبَیْنَ قَوْمِنَا بِالْحَقِّ وَاَنْتَ خَیْرُ الْفٰتِحِیْنَ ۟

ಅಲ್ಲಾಹು ನಮ್ಮನ್ನು ನಿಮ್ಮ ಧರ್ಮದಿಂದ ರಕ್ಷಿಸಿದ ಬಳಿಕ ನಾವು ಪುನಃ ಅದಕ್ಕೆ ಮರಳಿದರೆ, ನಾವು ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿದವರಾಗುವೆವು. ನಿಮ್ಮ ಧರ್ಮಕ್ಕೆ ಮರಳಲು ನಮ್ಮಿಂದ ಸುತರಾಂ ಸಾಧ್ಯವಿಲ್ಲ. ನಮ್ಮ ಪರಿಪಾಲಕನಾದ ಅಲ್ಲಾಹು ಇಚ್ಛಿಸಿದರೆ ಹೊರತು. ನಮ್ಮ ಪರಿಪಾಲಕನ (ಅಲ್ಲಾಹನ) ಜ್ಞಾನವು ಎಲ್ಲಾ ವಿಷಯಗಳನ್ನು ಒಳಗೊಳ್ಳುವಷ್ಟು ವಿಶಾಲವಾಗಿದೆ. ನಾವು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪರಿಪಾಲಕನೇ! ನಮ್ಮ ಮತ್ತು ನಮ್ಮ ಜನರ ನಡುವೆ ಸತ್ಯವಾದ ತೀರ್ಪನ್ನು ನೀಡು. ತೀರ್ಪು ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ.” info
التفاسير:

external-link copy
90 : 7

وَقَالَ الْمَلَاُ الَّذِیْنَ كَفَرُوْا مِنْ قَوْمِهٖ لَىِٕنِ اتَّبَعْتُمْ شُعَیْبًا اِنَّكُمْ اِذًا لَّخٰسِرُوْنَ ۟

ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ನೀವು ಶುಐಬರ ಹಿಂದೆ ಹೋದರೆ ನಿಶ್ಚಯವಾಗಿಯೂ ನೀವು ನಷ್ಟಹೊಂದುವಿರಿ.” info
التفاسير:

external-link copy
91 : 7

فَاَخَذَتْهُمُ الرَّجْفَةُ فَاَصْبَحُوْا فِیْ دَارِهِمْ جٰثِمِیْنَ ۟

ಆಗ ಭೂಕಂಪವು ಅವರನ್ನು ಹಿಡಿದುಕೊಂಡಿತು. ಅವರು ತಮ್ಮ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು. info
التفاسير:

external-link copy
92 : 7

الَّذِیْنَ كَذَّبُوْا شُعَیْبًا كَاَنْ لَّمْ یَغْنَوْا فِیْهَا ۛۚ— اَلَّذِیْنَ كَذَّبُوْا شُعَیْبًا كَانُوْا هُمُ الْخٰسِرِیْنَ ۟

ಶುಐಬರನ್ನು ನಿಷೇಧಿಸಿದವರ ಸ್ಥಿತಿಯು ಅವರು ಅಲ್ಲಿ ವಾಸಿಸಲೇ ಇಲ್ಲ ಎಂಬಂತಾಯಿತು. ಶುಐಬರನ್ನು ನಿಷೇಧಿಸಿದವರೇ ನಷ್ಟಹೊಂದಿದರು. info
التفاسير:

external-link copy
93 : 7

فَتَوَلّٰی عَنْهُمْ وَقَالَ یٰقَوْمِ لَقَدْ اَبْلَغْتُكُمْ رِسٰلٰتِ رَبِّیْ وَنَصَحْتُ لَكُمْ ۚ— فَكَیْفَ اٰسٰی عَلٰی قَوْمٍ كٰفِرِیْنَ ۟۠

ಅವರಿಂದ ತಿರುಗಿ ನಡೆಯುತ್ತಾ ಶುಐಬ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶವನ್ನು ನಿಮಗೆ ತಲುಪಿಸಿದ್ದೇನೆ ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿದ್ದೇನೆ. ಹೀಗಿರುವಾಗ ಸತ್ಯವನ್ನು ನಿಷೇಧಿಸಿದ ಜನರಿಗಾಗಿ ನಾನೇಕೆ ಬೇಸರ ಮಾಡಿಕೊಳ್ಳಲಿ?” info
التفاسير:

external-link copy
94 : 7

وَمَاۤ اَرْسَلْنَا فِیْ قَرْیَةٍ مِّنْ نَّبِیٍّ اِلَّاۤ اَخَذْنَاۤ اَهْلَهَا بِالْبَاْسَآءِ وَالضَّرَّآءِ لَعَلَّهُمْ یَضَّرَّعُوْنَ ۟

ನಾವು ಯಾವುದೇ ಊರಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿದಾಗ, (ಅವರು ಆ ಪ್ರವಾದಿಯನ್ನು ನಿಷೇಧಿಸಿದರೆ) ಅಲ್ಲಿನ ನಿವಾಸಿಗಳನ್ನು (ಬಡತನ ಮುಂತಾದ) ಕಷ್ಟಗಳಿಂದ ಮತ್ತು (ಅನಾರೋಗ್ಯ ಮುಂತಾದ) ತೊಂದರೆಗಳಿಂದ ಹಿಡಿಯುತ್ತಿದ್ದೆವು. ಅವರು ವಿನಯವಂತರಾಗುವುದಕ್ಕಾಗಿ. info
التفاسير:

external-link copy
95 : 7

ثُمَّ بَدَّلْنَا مَكَانَ السَّیِّئَةِ الْحَسَنَةَ حَتّٰی عَفَوْا وَّقَالُوْا قَدْ مَسَّ اٰبَآءَنَا الضَّرَّآءُ وَالسَّرَّآءُ فَاَخَذْنٰهُمْ بَغْتَةً وَّهُمْ لَا یَشْعُرُوْنَ ۟

ನಂತರ ನಾವು ಕೆಡುಕಿನ ಸ್ಥಾನದಲ್ಲಿ (ಬಡತನ ಮತ್ತು ಅನಾರೋಗ್ಯದ ಸ್ಥಾನದಲ್ಲಿ) ಒಳಿತನ್ನು ನೀಡಿ ಬದಲಾಯಿಸುವೆವು. ಎಲ್ಲಿಯವರೆಗೆಂದರೆ, ಅವರು ಅಭಿವೃದ್ಧಿ ಪಡೆದು, “ನಮ್ಮ ಪೂರ್ವಜರಿಗೂ ಬಡತನ ಮತ್ತು ಅನಾರೋಗ್ಯ ಉಂಟಾಗಿತ್ತು” ಎಂದು ಹೇಳುವ ತನಕ. ಆಗ ನಾವು ಅವರಿಗೆ ತಿಳಿಯದ ರೀತಿಯಲ್ಲಿ ಹಠಾತ್ತನೆ ಅವರನ್ನು ಹಿಡಿದುಕೊಳ್ಳುವೆವು. info
التفاسير: