وه‌رگێڕانی ماناكانی قورئانی پیرۆز - وەرگێڕاوی کەنادی - حەمزە بتور

external-link copy
21 : 16

اَمْوَاتٌ غَیْرُ اَحْیَآءٍ ؕۚ— وَمَا یَشْعُرُوْنَ ۙ— اَیَّانَ یُبْعَثُوْنَ ۟۠

ಅವರು ನಿರ್ಜೀವಿಗಳು; ಜೀವವಿರುವವರಲ್ಲ. ಅವರನ್ನು ಯಾವಾಗ ಜೀವ ನೀಡಿ ಎಬ್ಬಿಸಲಾಗುವುದೆಂದು ಕೂಡ ಅವರು ತಿಳಿದಿಲ್ಲ.[1] info

[1] ನಿರ್ಜೀವಿಗಳು ಎಂದರೆ ಕಲ್ಲುಗಳು, ವಿಗ್ರಹಗಳು ಇತ್ಯಾದಿ. ಮೃತ ಮಹಾಪುರುಷರು ಕೂಡ ಇದರಲ್ಲಿ ಸೇರುತ್ತಾರೆ. ಏಕೆಂದರೆ ನಿರ್ಜೀವಿಗಳು ಎಂದು ಹೇಳಿದ ಬಳಿಕ ಅವರನ್ನು ಜೀವವಿರುವವರಲ್ಲ ಎಂದು ವರ್ಣಿಸಲಾಗಿದೆ. ಇದರಿಂದ ತಿಳಿದುಬರುವ ಪ್ರಕಾರ ಮರಣದ ನಂತರ ಯಾರಿಗೂ ಇಹಲೋಕದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಅವರು ಪ್ರವಾದಿಗಳು ಅಥವಾ ಮಹಾಪುರುಷರಾಗಿದ್ದರೂ ಸಹ. ಅವರನ್ನು ಯಾವಾಗ ಜೀವ ನೀಡಿ ಎಬ್ಬಿಸಲಾಗುವುದೆಂದೂ ಅವರು ತಿಳಿದಿಲ್ಲ. ಹೀಗಿರುವಾಗ, ಉಪಕಾರ ಮಾಡಲು ಮತ್ತು ತೊಂದರೆ ನಿವಾರಿಸಲು ಅವರನ್ನು ಕರೆದು ಪ್ರಾರ್ಥಿಸುವುದು ವ್ಯರ್ಥ ಮಾತ್ರವಲ್ಲ, ಅದು ಅರ್ಥಶೂನ್ಯವೂ ಆಗಿದೆ.

التفاسير: