وه‌رگێڕانی ماناكانی قورئانی پیرۆز - وەرگێڕاوی کەنادی - حەمزە بتور

external-link copy
77 : 11

وَلَمَّا جَآءَتْ رُسُلُنَا لُوْطًا سِیْٓءَ بِهِمْ وَضَاقَ بِهِمْ ذَرْعًا وَّقَالَ هٰذَا یَوْمٌ عَصِیْبٌ ۟

ನಮ್ಮ ದೂತರು ಲೂತರ ಬಳಿಗೆ ಬಂದಾಗ, ಅವರಿಗೆ ಅವರ (ದೂತರ) ಬಗ್ಗೆ ಕಳವಳವಾಯಿತು. ಅವರ ಹೃದಯದಲ್ಲಿ ಇಕ್ಕಟ್ಟು ಅನುಭವವಾಯಿತು. ಅವರು ಹೇಳಿದರು: “ಇದೊಂದು ಕಠಿಣ ಪರೀಕ್ಷೆಯ ದಿನವಾಗಿದೆ.”[1] info

[1] ಲೂತರ (ಅವರ ಮೇಲೆ ಶಾಂತಿಯಿರಲಿ) ಜನರು ಸಲಿಂಗಕಾಮಿಗಳಾಗಿದ್ದರು. ದೇವದೂತರುಗಳು ಸ್ಫುರದ್ರೂಪಿ ಯುವಕರ ರೂಪದಲ್ಲಿ ಅಲ್ಲಿಗೆ ಬಂದಿದ್ದರು. ಇವರನ್ನು ಕಂಡಾಗ ಲೂತರಿಗೆ (ಅವರ ಮೇಲೆ ಶಾಂತಿಯಿರಲಿ) ಕಳವಳವಾಯಿತು. ಎಲ್ಲಿ ತನ್ನ ಜನರು ಇವರನ್ನು ದುರುಪಯೋಗಪಡಿಸುತ್ತಾರೋ ಎಂದು ಅವರಿಗೆ ಗಾಬರಿಯಾಯಿತು. ಅವರ ಹೃದಯ ಬಡಿತ ಹೆಚ್ಚಾಯಿತು.

التفاسير: