وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری

external-link copy
85 : 7

وَاِلٰی مَدْیَنَ اَخَاهُمْ شُعَیْبًا ؕ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— قَدْ جَآءَتْكُمْ بَیِّنَةٌ مِّنْ رَّبِّكُمْ فَاَوْفُوا الْكَیْلَ وَالْمِیْزَانَ وَلَا تَبْخَسُوا النَّاسَ اَشْیَآءَهُمْ وَلَا تُفْسِدُوْا فِی الْاَرْضِ بَعْدَ اِصْلَاحِهَا ؕ— ذٰلِكُمْ خَیْرٌ لَّكُمْ اِنْ كُنْتُمْ مُّؤْمِنِیْنَ ۟ۚ

ಮತ್ತು ನಾವು ಮದ್‌ಯನ್ ಜನಾಂಗದೆಡೆಗೆ ಅವರ ಸಹೋದರ ಶುಐಬ್‌ರವರನ್ನು ಕಳುಹಿಸಿದೆವು. ಅವರು ಹೇಳಿದರು: ಓ ನನ್ನ ಜನರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ವತಿಯಿಂದ ಸ್ಪಷ್ಟವಾದ ಪುರಾವೆಯು ಬಂದಿರುತ್ತದೆ. ಆದ್ದರಿಂದ ನೀವು ಅಳತೆ ಮತ್ತು ತೂಕವನ್ನು ಪರಿಪೂರ್ಣವಾಗಿ ಕೊಡಿರಿ ಮತ್ತು ಜನರಿಗೆ ಅವರ ಸಾಮಗ್ರಿಗಳನ್ನು ನೀವು ಕಡಿತಗೊಳಿಸಿ ಕೊಡಬೇಡಿರಿ. ಭೂಮಿಯಲ್ಲಿ ಅದರ ವಾತಾವರಣ ಸುಧಾರಣೆಯಾದ ಬಳಿಕ ನೀವು ಕ್ಷೆÆÃಭೆಯನ್ನು ಹರಡಬೇಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇದು ನಿಮಗೆ ಉತ್ತಮವಾಗಿದೆ. info
التفاسير: