وه‌رگێڕانی ماناكانی قورئانی پیرۆز - وەرگێڕاوی کەنادی - بەشیر ميسوری

ژمارەی پەڕە: 556:556 close

external-link copy
10 : 64

وَالَّذِیْنَ كَفَرُوْا وَكَذَّبُوْا بِاٰیٰتِنَاۤ اُولٰٓىِٕكَ اَصْحٰبُ النَّارِ خٰلِدِیْنَ فِیْهَا ؕ— وَبِئْسَ الْمَصِیْرُ ۟۠

ಯಾರು ಸತ್ಯ ನಿಷೇಧಿಸಿ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದರು ಅವರೇ ನರಕವಾಸಿಗಳು. ಅವರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು ಅದು ಮರಳಲಿಕ್ಕಿರುವ ಅತಿ ನಿಕೃಷ್ಟ ತಾಣವಾಗಿದೆ. info
التفاسير:

external-link copy
11 : 64

مَاۤ اَصَابَ مِنْ مُّصِیْبَةٍ اِلَّا بِاِذْنِ اللّٰهِ ؕ— وَمَنْ یُّؤْمِنْ بِاللّٰهِ یَهْدِ قَلْبَهٗ ؕ— وَاللّٰهُ بِكُلِّ شَیْءٍ عَلِیْمٌ ۟

ಅಲ್ಲಾಹನ ಅಪ್ಪಣೆಯಿಲ್ಲದೆ ಯಾವ ವಿಪತ್ತು ಸಂಭವಿಸುವುದಿಲ್ಲ ಯಾರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾನೆ ಅವನ ಹೃದಯಕ್ಕೆ ಅಲ್ಲಾಹನು ಸನ್ಮರ‍್ಗವನ್ನು ಕರುಣಿಸುತ್ತಾನೆ ಅಲ್ಲಾಹನ ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲನು. info
التفاسير:

external-link copy
12 : 64

وَاَطِیْعُوا اللّٰهَ وَاَطِیْعُوا الرَّسُوْلَ ۚ— فَاِنْ تَوَلَّیْتُمْ فَاِنَّمَا عَلٰی رَسُوْلِنَا الْبَلٰغُ الْمُبِیْنُ ۟

ನೀವು ಅಲ್ಲಾಹನನ್ನು ಅನುಸರಿಸಿರಿ ಹಾಗೂ ಸಂದೇಶವಾಹಕರನ್ನು ಅನುಸರಿಸಿರಿ. ನೀವು ವಿಮುಖರಾಗಿ ಬಿಟ್ಟರೆ ನಮ್ಮ ಸಂದೇಶವಾಹಕರ ಮೇಲೆ ಸುಸ್ಪಷ್ಟವಾದ ಸಂದೇಶತಲುಪಿಸುವ ಹೊಣೆ ಮಾತ್ರವಿದೆ. info
التفاسير:

external-link copy
13 : 64

اَللّٰهُ لَاۤ اِلٰهَ اِلَّا هُوَ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟

ಅಲ್ಲಾಹನು ಅವನ ಹೊರತು ಬೇರಾವ ಆರಾಧ್ಯಾನಿಲ್ಲ ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆ ಇಡಬೇಕಾಗಿದೆ. info
التفاسير:

external-link copy
14 : 64

یٰۤاَیُّهَا الَّذِیْنَ اٰمَنُوْۤا اِنَّ مِنْ اَزْوَاجِكُمْ وَاَوْلَادِكُمْ عَدُوًّا لَّكُمْ فَاحْذَرُوْهُمْ ۚ— وَاِنْ تَعْفُوْا وَتَصْفَحُوْا وَتَغْفِرُوْا فَاِنَّ اللّٰهَ غَفُوْرٌ رَّحِیْمٌ ۟

ಓ ಸತ್ಯವಿಶ್ವಾಸಿಗಳೇ, ನಿಮ್ಮ ಪತ್ನಿಯರಲ್ಲಿ ನಿಮ್ಮ ಮಕ್ಕಳಲ್ಲಿ ಕೆಲವರು ನಿಮ್ಮ ಶತ್ರುಗಳಿದ್ದಾರೆ. ಆದ್ದರಿಂದ ನೀವು ಅವರಿಂದ ಜಾಗ್ರತೆ ವಹಿಸಿರಿ ಇನ್ನು ನೀವು ಮನ್ನಿಸುವುದಾದರೆ, ಅವರ ಪ್ರಮಾದಗಳನ್ನು ಅಲಕ್ಷಿಸುವುದಾದರೆ ಹಾಗೂ ಕ್ಷಮಿಸುವುದಾದರೆ ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
15 : 64

اِنَّمَاۤ اَمْوَالُكُمْ وَاَوْلَادُكُمْ فِتْنَةٌ ؕ— وَاللّٰهُ عِنْدَهٗۤ اَجْرٌ عَظِیْمٌ ۟

ನಿಮ್ಮ ಸಂಪತ್ತು ನಿಮ್ಮ ಸಂತಾನ ಒಂದು ಪರೀಕ್ಷೆಯಾಗಿದೆ ಮಹಾ ಪ್ರತಿಫಲವಂತು ಅಲ್ಲಾಹನ ಬಳಿಯಲ್ಲಿದೆ. info
التفاسير:

external-link copy
16 : 64

فَاتَّقُوا اللّٰهَ مَا اسْتَطَعْتُمْ وَاسْمَعُوْا وَاَطِیْعُوْا وَاَنْفِقُوْا خَیْرًا لِّاَنْفُسِكُمْ ؕ— وَمَنْ یُّوْقَ شُحَّ نَفْسِهٖ فَاُولٰٓىِٕكَ هُمُ الْمُفْلِحُوْنَ ۟

ಆದ್ದರಿಂದ ನೀವು ಅಲ್ಲಾಹನನ್ನು ನಿಮಗೆ ಸಾಧ್ಯವಿರುವಷ್ಟು ಭಯಪಡಿರಿ ಆಲಿಸಿರಿ ಮತ್ತು ಅನುಸರಿಸಿರಿ ಹಾಗೂ ನೀವು ಅಲ್ಲಾಹನ ಮರ‍್ಗದಲ್ಲಿ ದಾನರ‍್ಮ ಮಾಡಿರಿ. ಅದು ನಿಮ್ಮ ಪಾಲಿಗೆ ಅತ್ಯುತ್ತಮವಾಗಿರುತ್ತದೆ. ಯಾರು ತನ್ನಲ್ಲಿನ ಲೋಭ ತನದಿಂದ ಪಾರು ಮಾಡಲಾಗುತ್ತಾನೋ ಅವನೇ ಯಶಸ್ಸು ಪಡೆದವನಾಗಿರುತ್ತಾನೆ. info
التفاسير:

external-link copy
17 : 64

اِنْ تُقْرِضُوا اللّٰهَ قَرْضًا حَسَنًا یُّضٰعِفْهُ لَكُمْ وَیَغْفِرْ لَكُمْ ؕ— وَاللّٰهُ شَكُوْرٌ حَلِیْمٌ ۟ۙ

ನೀವು ಅಲ್ಲಾಹನಿಗೆ ಅತ್ಯುತ್ತಮ ಸಾಲವನ್ನು ನೀಡುವುದಾದರೆ ಅವನದನ್ನು ನಿಮಗೆ ಅನೇಕಪಟ್ಟು ವೃದ್ಧಿಸಿಕೊಡುವನು ಮತ್ತು ನಿಮ್ಮನ್ನು ಕ್ಷಮಿಸಿಬಿಡುವನು ಅಲ್ಲಾಹನು ಕೃತಜ್ಞನೂ ಸಹನಶೀಲನೂ ಆಗಿರುವನು. info
التفاسير:

external-link copy
18 : 64

عٰلِمُ الْغَیْبِ وَالشَّهَادَةِ الْعَزِیْزُ الْحَكِیْمُ ۟۠

ಗೋಚರ ಹಾಗೂ ಅಗೋಚರಜ್ಞಾನಿ ಯವನು ಪ್ರತಾಪಶಾಲಿಯೂ ಯುಕ್ತಿಪರ‍್ಣನೂ (ಆಗಿದ್ದಾನೆ). info
التفاسير: