ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
13 : 67

وَاَسِرُّوْا قَوْلَكُمْ اَوِ اجْهَرُوْا بِهٖ ؕ— اِنَّهٗ عَلِیْمٌۢ بِذَاتِ الصُّدُوْرِ ۟

ನೀವು ನಿಮ್ಮ ಮಾತನ್ನು ರಹಸ್ಯವಾಗಿರಿಸಿರಿ ಅಥವಾ ಬಹಿರಂಗಪಡಿಸಿರಿ. ನಿಶ್ಚಯವಾಗಿಯೂ ಅವನು ಹೃದಯಗಳೊಳಲ್ಲಿರುವುದನ್ನು ತಿಳಿಯುತ್ತಾನೆ. info
التفاسير:

external-link copy
14 : 67

اَلَا یَعْلَمُ مَنْ خَلَقَ ؕ— وَهُوَ اللَّطِیْفُ الْخَبِیْرُ ۟۠

ಸೃಷ್ಟಿಸಿದವನಿಗೆ ಅದು ತಿಳಿದಿಲ್ಲವೇ? ಅವನು ಅತ್ಯಂತ ನವಿರು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ. info
التفاسير:

external-link copy
15 : 67

هُوَ الَّذِیْ جَعَلَ لَكُمُ الْاَرْضَ ذَلُوْلًا فَامْشُوْا فِیْ مَنَاكِبِهَا وَكُلُوْا مِنْ رِّزْقِهٖ ؕ— وَاِلَیْهِ النُّشُوْرُ ۟

ಅವನೇ ನಿಮಗೆ ಭೂಮಿಯನ್ನು ವಿಧೇಯಗೊಳಿಸಿಕೊಟ್ಟವನು. ನೀವು ಅದರ ರಸ್ತೆಗಳಲ್ಲಿ ಚಲಿಸುವುದಕ್ಕಾಗಿ. ಅವನು ಒದಗಿಸಿದ ಉಪಜೀವನದಿಂದ ತಿನ್ನಿರಿ. ಪುನರುತ್ಥಾನವು ಅವನ ಬಳಿಗೇ ಆಗಿದೆ. info
التفاسير:

external-link copy
16 : 67

ءَاَمِنْتُمْ مَّنْ فِی السَّمَآءِ اَنْ یَّخْسِفَ بِكُمُ الْاَرْضَ فَاِذَا هِیَ تَمُوْرُ ۟ۙ

ಆಕಾಶದಲ್ಲಿರುವವನು (ಅಲ್ಲಾಹು) ನಿಮ್ಮನ್ನು ಭೂಮಿಯಲ್ಲಿ ಹುದುಗಿಸಲಾರನೆಂದು ನೀವು ನಿರ್ಭಯವಾಗಿದ್ದೀರಾ? ಆಗ ಅಗೋ ಭೂಮಿ ಓಲಾಡುತ್ತಿರುವುದು. info
التفاسير:

external-link copy
17 : 67

اَمْ اَمِنْتُمْ مَّنْ فِی السَّمَآءِ اَنْ یُّرْسِلَ عَلَیْكُمْ حَاصِبًا ؕ— فَسَتَعْلَمُوْنَ كَیْفَ نَذِیْرِ ۟

ಅಥವಾ ಆಕಾಶದಲ್ಲಿರುವವನು (ಅಲ್ಲಾಹು) ನಿಮ್ಮ ಮೇಲೆ ಕಲ್ಲಿನ ಮಳೆ ಸುರಿಸಲಾರನೆಂದು ನೀವು ನಿರ್ಭಯವಾಗಿದ್ದೀರಾ? ನಂತರ ನನ್ನ ಎಚ್ಚರಿಕೆ ಹೇಗಿತ್ತೆಂದು ನೀವು ಸದ್ಯವೇ ತಿಳಿದುಕೊಳ್ಳುವಿರಿ. info
التفاسير:

external-link copy
18 : 67

وَلَقَدْ كَذَّبَ الَّذِیْنَ مِنْ قَبْلِهِمْ فَكَیْفَ كَانَ نَكِیْرِ ۟

ಅವರಿಗಿಂತ ಮೊದಲಿನವರೂ ನಿಷೇಧಿಸಿದ್ದರು. ಆಗ ಅವರ ಮೇಲೆ ನನ್ನ ಶಿಕ್ಷೆ ಹೇಗಿತ್ತು? info
التفاسير:

external-link copy
19 : 67

اَوَلَمْ یَرَوْا اِلَی الطَّیْرِ فَوْقَهُمْ صٰٓفّٰتٍ وَّیَقْبِضْنَ ؕۘؔ— مَا یُمْسِكُهُنَّ اِلَّا الرَّحْمٰنُ ؕ— اِنَّهٗ بِكُلِّ شَیْءٍ بَصِیْرٌ ۟

ಅವರು ತಮ್ಮ ಮೇಲ್ಭಾಗದಲ್ಲಿ ರೆಕ್ಕೆಗಳನ್ನು ಚಾಚಿ ಹಾರಾಡುವ ಮತ್ತು ರೆಕ್ಕೆಗಳನ್ನು ಮಡಚುವ ಹಕ್ಕಿಗಳನ್ನು ನೋಡಿಲ್ಲವೇ? ಅವುಗಳನ್ನು ಪರಮ ದಯಾಳುವಾದ ಅಲ್ಲಾಹನಲ್ಲದೆ ಇನ್ನಾರೂ ಆಧರಿಸಿ ಹಿಡಿದಿಲ್ಲ. ನಿಶ್ಚಯವಾಗಿಯೂ ಅವನು ಎಲ್ಲವನ್ನೂ ನೋಡುತ್ತಿದ್ದಾನೆ. info
التفاسير:

external-link copy
20 : 67

اَمَّنْ هٰذَا الَّذِیْ هُوَ جُنْدٌ لَّكُمْ یَنْصُرُكُمْ مِّنْ دُوْنِ الرَّحْمٰنِ ؕ— اِنِ الْكٰفِرُوْنَ اِلَّا فِیْ غُرُوْرٍ ۟ۚ

ಪರಮ ದಯಾಳುವಾದ ಅಲ್ಲಾಹನ ಹೊರತು ನಿಮಗೆ ಸಹಾಯ ಮಾಡಬಹುದಾದ ಸೈನ್ಯವು ಯಾವುದು? ಸತ್ಯನಿಷೇಧಿಗಳು ಸಂಪೂರ್ಣ ವಂಚನೆಯಲ್ಲಿದ್ದಾರೆ. info
التفاسير:

external-link copy
21 : 67

اَمَّنْ هٰذَا الَّذِیْ یَرْزُقُكُمْ اِنْ اَمْسَكَ رِزْقَهٗ ۚ— بَلْ لَّجُّوْا فِیْ عُتُوٍّ وَّنُفُوْرٍ ۟

ಅಲ್ಲಾಹು ನಿಮಗೆ ಉಪಜೀವನವನ್ನು ತಡೆಹಿಡಿದರೆ, ನಿಮಗೆ ಉಪಜೀವನ ನೀಡಲು ಯಾರಿಗೆ ಸಾಧ್ಯವಿದೆ? ಅಲ್ಲ, ವಾಸ್ತವವಾಗಿ (ಸತ್ಯನಿಷೇಧಿಗಳು) ಸೊಕ್ಕು ಮತ್ತು ವಿದ್ವೇಷದಲ್ಲೇ ನಿರತರಾಗಿದ್ದಾರೆ. info
التفاسير:

external-link copy
22 : 67

اَفَمَنْ یَّمْشِیْ مُكِبًّا عَلٰی وَجْهِهٖۤ اَهْدٰۤی اَمَّنْ یَّمْشِیْ سَوِیًّا عَلٰی صِرَاطٍ مُّسْتَقِیْمٍ ۟

ಹಾಗಾದರೆ ಹೆಚ್ಚು ಸನ್ಮಾರ್ಗದಲ್ಲಿರುವವನು ತಲೆಕೆಳಗಾಗಿ ಮುಖದ ಮೇಲೆ ನಡೆಯುವವನೋ, ಅಥವಾ (ಕಾಲುಗಳ ಮೇಲೆ) ನೇರ ಮಾರ್ಗದಲ್ಲಿ ಸರಿಯಾಗಿ ನಡೆಯುವವನೋ? info
التفاسير:

external-link copy
23 : 67

قُلْ هُوَ الَّذِیْۤ اَنْشَاَكُمْ وَجَعَلَ لَكُمُ السَّمْعَ وَالْاَبْصَارَ وَالْاَفْـِٕدَةَ ؕ— قَلِیْلًا مَّا تَشْكُرُوْنَ ۟

ಹೇಳಿರಿ: “ಅವನೇ ನಿಮ್ಮನ್ನು ಸೃಷ್ಟಿಸಿದವನು ಮತ್ತು ನಿಮಗೆ ಶ್ರವಣ, ದೃಷ್ಟಿ ಹಾಗೂ ಹೃದಯವನ್ನು ನೀಡಿದವನು. ನೀವು ಸ್ವಲ್ಪ ಮಾತ್ರ ಕೃತಜ್ಞರಾಗುತ್ತೀರಿ.” info
التفاسير:

external-link copy
24 : 67

قُلْ هُوَ الَّذِیْ ذَرَاَكُمْ فِی الْاَرْضِ وَاِلَیْهِ تُحْشَرُوْنَ ۟

ಹೇಳಿರಿ: “ಅವನೇ ನಿಮ್ಮನ್ನು ಭೂಮಿಯಲ್ಲಿ ಸೃಷ್ಟಿಸಿದವನು. ನಿಮ್ಮನ್ನು ಅವನ ಬಳಿಯಲ್ಲೇ ಒಟ್ಟುಗೂಡಿಸಲಾಗುವುದು.” info
التفاسير:

external-link copy
25 : 67

وَیَقُوْلُوْنَ مَتٰی هٰذَا الْوَعْدُ اِنْ كُنْتُمْ صٰدِقِیْنَ ۟

ಅವರು ಕೇಳುತ್ತಾರೆ: “ಈ ವಾಗ್ದಾನವು ಸತ್ಯವಾಗುವುದು ಯಾವಾಗ? ನೀವು ಸತ್ಯವಂತರಾಗಿದ್ದರೆ (ಹೇಳಿರಿ).” info
التفاسير:

external-link copy
26 : 67

قُلْ اِنَّمَا الْعِلْمُ عِنْدَ اللّٰهِ ۪— وَاِنَّمَاۤ اَنَا نَذِیْرٌ مُّبِیْنٌ ۟

ಹೇಳಿರಿ: “ಆ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ. ನಿಶ್ಚಯವಾಗಿಯೂ ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರವಾಗಿದ್ದೇನೆ.” info
التفاسير: