ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

ಅಲ್ -ಮುಲ್ಕ್

external-link copy
1 : 67

تَبٰرَكَ الَّذِیْ بِیَدِهِ الْمُلْكُ ؗ— وَهُوَ عَلٰی كُلِّ شَیْءٍ قَدِیْرُ ۟ۙ

ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆಯೋ ಅವನು ಸಮೃದ್ಧಪೂರ್ಣನಾಗಿದ್ದಾನೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
2 : 67

١لَّذِیْ خَلَقَ الْمَوْتَ وَالْحَیٰوةَ لِیَبْلُوَكُمْ اَیُّكُمْ اَحْسَنُ عَمَلًا ؕ— وَهُوَ الْعَزِیْزُ الْغَفُوْرُ ۟ۙ

ಅವನೇ ಮರಣ ಮತ್ತು ಜೀವನವನ್ನು ಸೃಷ್ಟಿಸಿದವನು. ನಿಮ್ಮಲ್ಲಿ ಅತ್ಯುತ್ತಮ ಕರ್ಮವೆಸಗುವವರು ಯಾರೆಂದು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ. ಅವನು ಪ್ರಬಲನು ಮತ್ತು ಕ್ಷಮಿಸುವವನಾಗಿದ್ದಾನೆ. info
التفاسير:

external-link copy
3 : 67

الَّذِیْ خَلَقَ سَبْعَ سَمٰوٰتٍ طِبَاقًا ؕ— مَا تَرٰی فِیْ خَلْقِ الرَّحْمٰنِ مِنْ تَفٰوُتٍ ؕ— فَارْجِعِ الْبَصَرَ ۙ— هَلْ تَرٰی مِنْ فُطُوْرٍ ۟

ಅವನೇ ಏಳು ಆಕಾಶಗಳನ್ನು ಅಂತಸ್ತುಗಳಾಗಿ ಸೃಷ್ಟಿಸಿದವನು. ನೀವು ಪರಮ ದಯಾಮಯನ ಸೃಷ್ಟಿಯಲ್ಲಿ ಯಾವುದೇ ಕುಂದು-ಕೊರತೆಯನ್ನು ಕಾಣಲಾರಿರಿ. ಎರಡನೇ ಬಾರಿ ದೃಷ್ಟಿಯನ್ನು ಮರಳಿಸಿ ನೋಡಿ. ನೀವು ಯಾವುದಾದರೂ ಬಿರುಕುಗಳನ್ನು ಕಾಣುತ್ತೀರಾ? info
التفاسير:

external-link copy
4 : 67

ثُمَّ ارْجِعِ الْبَصَرَ كَرَّتَیْنِ یَنْقَلِبْ اِلَیْكَ الْبَصَرُ خَاسِئًا وَّهُوَ حَسِیْرٌ ۟

ನಂತರ ಪುನಃ ಎರಡೆರಡು ಬಾರಿ ದೃಷ್ಟಿ ಹಾಯಿಸಿ ನೋಡಿ. ನಿಮ್ಮ ದೃಷ್ಟಿಯು ನಿಮ್ಮ ಬಳಿಗೆ ದಯನೀಯ ಸ್ಥಿತಿಯಲ್ಲಿ ಸುಸ್ತಾಗಿ ಮರಳಿ ಬರುವುದು. info
التفاسير:

external-link copy
5 : 67

وَلَقَدْ زَیَّنَّا السَّمَآءَ الدُّنْیَا بِمَصَابِیْحَ وَجَعَلْنٰهَا رُجُوْمًا لِّلشَّیٰطِیْنِ وَاَعْتَدْنَا لَهُمْ عَذَابَ السَّعِیْرِ ۟

ನಾವು ಇಹಲೋಕದ ಆಕಾಶವನ್ನು ದೀಪಗಳಿಂದ (ನಕ್ಷತ್ರಗಳಿಂದ) ಅಲಂಕರಿಸಿದ್ದೇವೆ. ಅವುಗಳನ್ನು ಶೈತಾನರಿಗೆ ಹೊಡೆದೋಡಿಸುವ ಸಾಧನವಾಗಿ ಮಾಡಿದ್ದೇವೆ. ನಾವು ಅವರಿಗೆ ಧಗಧಗಿಸುವ ನರಕ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. info
التفاسير:

external-link copy
6 : 67

وَلِلَّذِیْنَ كَفَرُوْا بِرَبِّهِمْ عَذَابُ جَهَنَّمَ ؕ— وَبِئْسَ الْمَصِیْرُ ۟

ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರಿಗೆ ನರಕ ಶಿಕ್ಷೆಯಿದೆ. ಆ ಗಮ್ಯಸ್ಥಾನವು ಅತಿ ನಿಕೃಷ್ಟವಾಗಿದೆ. info
التفاسير:

external-link copy
7 : 67

اِذَاۤ اُلْقُوْا فِیْهَا سَمِعُوْا لَهَا شَهِیْقًا وَّهِیَ تَفُوْرُ ۟ۙ

ಅವರನ್ನು ಅದಕ್ಕೆ ಎಸೆಯಲಾದಾಗ ಅವರು ಅದರ ದೊಡ್ಡ ಗರ್ಜನೆಯನ್ನು ಕೇಳುವರು. info
التفاسير:

external-link copy
8 : 67

تَكَادُ تَمَیَّزُ مِنَ الْغَیْظِ ؕ— كُلَّمَاۤ اُلْقِیَ فِیْهَا فَوْجٌ سَاَلَهُمْ خَزَنَتُهَاۤ اَلَمْ یَاْتِكُمْ نَذِیْرٌ ۟

ಅದು (ಕ್ರೋಧದಿಂದ) ಇನ್ನೇನು ಸ್ಫೋಟಿಸುವಂತಿರುವುದು. ಅದಕ್ಕೆ ಒಂದೊಂದು ಗುಂಪನ್ನು ಎಸೆಯುವಾಗಲೆಲ್ಲಾ ಅದರ ಕಾವಲುಗಾರರು ಕೇಳುವರು: “ನಿಮ್ಮ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರನು ಬರಲಿಲ್ಲವೇ?” info
التفاسير:

external-link copy
9 : 67

قَالُوْا بَلٰی قَدْ جَآءَنَا نَذِیْرٌ ۙ۬— فَكَذَّبْنَا وَقُلْنَا مَا نَزَّلَ اللّٰهُ مِنْ شَیْءٍ ۖۚ— اِنْ اَنْتُمْ اِلَّا فِیْ ضَلٰلٍ كَبِیْرٍ ۟

ಅವರು ಉತ್ತರಿಸುವರು: “ಹೌದು, ನಮ್ಮ ಬಳಿಗೆ ಒಬ್ಬ ಮುನ್ನೆಚ್ಚರಿಕೆಗಾರ ಬಂದಿದ್ದರು. ಆದರೆ ನಾವು ಅವರನ್ನು ನಿಷೇಧಿಸಿದೆವು. ನಾವು ಹೇಳಿದೆವು: ಅಲ್ಲಾಹು ಏನನ್ನೂ ಅವತೀರ್ಣಗೊಳಿಸಿಲ್ಲ; ನೀವು ಬಹುದೊಡ್ಡ ದುರ್ಮಾರ್ಗದಲ್ಲಿದ್ದೀರಿ.” info
التفاسير:

external-link copy
10 : 67

وَقَالُوْا لَوْ كُنَّا نَسْمَعُ اَوْ نَعْقِلُ مَا كُنَّا فِیْۤ اَصْحٰبِ السَّعِیْرِ ۟

ಅವರು (ಸತ್ಯನಿಷೇಧಿಗಳು) ಹೇಳುವರು: “ನಾವು ಕಿವಿಗೊಡುತ್ತಿದ್ದರೆ ಅಥವಾ ಅರ್ಥಮಾಡಿಕೊಳ್ಳುತ್ತಿದ್ದರೆ ನಾವು ನರಕವಾಸಿಗಳಲ್ಲಿ ಸೇರುತ್ತಿರಲಿಲ್ಲ.” info
التفاسير:

external-link copy
11 : 67

فَاعْتَرَفُوْا بِذَنْۢبِهِمْ ۚ— فَسُحْقًا لِّاَصْحٰبِ السَّعِیْرِ ۟

ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವರು. ಆ ನರಕವಾಸಿಗಳು (ಅಲ್ಲಾಹನ ದಯೆಯಿಂದ) ದೂರವಾಗಲಿ. info
التفاسير:

external-link copy
12 : 67

اِنَّ الَّذِیْنَ یَخْشَوْنَ رَبَّهُمْ بِالْغَیْبِ لَهُمْ مَّغْفِرَةٌ وَّاَجْرٌ كَبِیْرٌ ۟

ನಿಶ್ಚಯವಾಗಿಯೂ ಅದೃಶ್ಯ ಸ್ಥಿತಿಯಲ್ಲಿ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವವರು ಯಾರೋ ಅವರಿಗೆ ಕ್ಷಮೆ ಮತ್ತು ಮಹಾ ಪ್ರತಿಫಲವಿದೆ. info
التفاسير: