ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
11 : 62

وَاِذَا رَاَوْا تِجَارَةً اَوْ لَهْوَا ١نْفَضُّوْۤا اِلَیْهَا وَتَرَكُوْكَ قَآىِٕمًا ؕ— قُلْ مَا عِنْدَ اللّٰهِ خَیْرٌ مِّنَ اللَّهْوِ وَمِنَ التِّجَارَةِ ؕ— وَاللّٰهُ خَیْرُ الرّٰزِقِیْنَ ۟۠

ಅವರು ವ್ಯಾಪಾರದ ಸರಕು ಮಾರಾಟವಾಗುವುದನ್ನು ಕಂಡರೆ ಅಥವಾ ಮನೋರಂಜನೆಯನ್ನು ಕಂಡರೆ ಅದರ ಕಡೆಗೆ ಓಡುತ್ತಾರೆ ಮತ್ತು ನಿಮ್ಮನ್ನು ನಿಂತ ಸ್ಥಿತಿಯಲ್ಲೇ ಬಿಟ್ಟುಬಿಡುತ್ತಾರೆ.[1] ಹೇಳಿರಿ: “ಅಲ್ಲಾಹನ ಬಳಿ ಏನಿದೆಯೋ ಅದು ವ್ಯಾಪಾರ ಮತ್ತು ಮನೋರಂಜನೆಗಿಂತಲೂ ಶ್ರೇಷ್ಠವಾಗಿದೆ. ಅಲ್ಲಾಹು ಉಪಜೀವನ ನೀಡುವುದರಲ್ಲಿ ಅತ್ಯುತ್ತಮನಾಗಿದ್ದಾನೆ.” info

[1] ಒಮ್ಮೆ ಒಂದು ಶುಕ್ರವಾರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಖುತ್ಬಾ (ಪ್ರವಚನ) ನಿರ್ವಹಿಸುತ್ತಿದ್ದಾಗ ವ್ಯಾಪಾರ ತಂಡವು ಮದೀನ ಮಾರುಕಟ್ಟೆಗೆ ಆಗಮಿಸಿತು. ಸದ್ದುಗದ್ದಲ ಕೇಳಿ ಮಸೀದಿಯಲ್ಲಿದ್ದ ಜನರೆಲ್ಲರೂ ಸರಕು ಖರೀದಿಸಲು ಮಾರುಕಟ್ಟೆಗೆ ಓಡಿದರು. ಕೇವಲ 12 ಮಂದಿ ಮಾತ್ರ ಮಸೀದಿಯಲ್ಲಿ ಉಳಿದರು. ಇದರ ಬಗ್ಗೆ ಈ ವಚನವು ಅವತೀರ್ಣವಾಯಿತು.

التفاسير: