ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

ಅಲ್ -ಜುಮುಅ

external-link copy
1 : 62

یُسَبِّحُ لِلّٰهِ مَا فِی السَّمٰوٰتِ وَمَا فِی الْاَرْضِ الْمَلِكِ الْقُدُّوْسِ الْعَزِیْزِ الْحَكِیْمِ ۟

ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುತ್ತಿವೆ. ಅವನು ಸಾಮ್ರಾಟನು, ಪರಮ ಪವಿತ್ರನು, ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
2 : 62

هُوَ الَّذِیْ بَعَثَ فِی الْاُمِّیّٖنَ رَسُوْلًا مِّنْهُمْ یَتْلُوْا عَلَیْهِمْ اٰیٰتِهٖ وَیُزَكِّیْهِمْ وَیُعَلِّمُهُمُ الْكِتٰبَ وَالْحِكْمَةَ ۗ— وَاِنْ كَانُوْا مِنْ قَبْلُ لَفِیْ ضَلٰلٍ مُّبِیْنٍ ۟ۙ

ಅವನೇ ಅನಕ್ಷರಸ್ಥ ಜನರಿಗೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಕಳುಹಿಸಿದವನು. ಆ ಸಂದೇಶವಾಹಕರು ಅವರಿಗೆ ಅಲ್ಲಾಹನ ವಚನಗಳನ್ನು ಓದಿಕೊಡುತ್ತಾರೆ, ಅವರನ್ನು ಶುದ್ಧೀಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ವಿವೇಕವನ್ನು ಕಲಿಸಿಕೊಡುತ್ತಾರೆ. ಇದಕ್ಕಿಂತ ಮೊದಲು ಅವರು ಸ್ಪಷ್ಟ ದುರ್ಮಾರ್ಗದಲ್ಲಿದ್ದರು. info
التفاسير:

external-link copy
3 : 62

وَّاٰخَرِیْنَ مِنْهُمْ لَمَّا یَلْحَقُوْا بِهِمْ ؕ— وَهُوَ الْعَزِیْزُ الْحَكِیْمُ ۟

ಅವರಲ್ಲಿ ಇನ್ನೂ ಅವರೊಡನೆ ಸೇರಿಕೊಳ್ಳದ ಜನರಿಗೂ ಕೂಡ (ಅವರು ಸಂದೇಶವಾಹಕರಾಗಿದ್ದಾರೆ). ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
4 : 62

ذٰلِكَ فَضْلُ اللّٰهِ یُؤْتِیْهِ مَنْ یَّشَآءُ ؕ— وَاللّٰهُ ذُو الْفَضْلِ الْعَظِیْمِ ۟

ಅದು ಅಲ್ಲಾಹನ ಔದಾರ್ಯವಾಗಿದ್ದು ಅವನು ಇಚ್ಛಿಸುವವರಿಗೆ ಅದನ್ನು ದಯಪಾಲಿಸುತ್ತಾನೆ. ಅಲ್ಲಾಹು ಮಹಾ ಔದಾರ್ಯವಂತನಾಗಿದ್ದಾನೆ. info
التفاسير:

external-link copy
5 : 62

مَثَلُ الَّذِیْنَ حُمِّلُوا التَّوْرٰىةَ ثُمَّ لَمْ یَحْمِلُوْهَا كَمَثَلِ الْحِمَارِ یَحْمِلُ اَسْفَارًا ؕ— بِئْسَ مَثَلُ الْقَوْمِ الَّذِیْنَ كَذَّبُوْا بِاٰیٰتِ اللّٰهِ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟

ತೌರಾತ್‌ನಲ್ಲಿರುವಂತೆ ನಡೆದುಕೊಳ್ಳಲು ಆದೇಶಿಸಲಾಗಿಯೂ ಸಹ ಅದರಂತೆ ನಡೆದುಕೊಳ್ಳದವರು ಯಾರೋ ಅವರ ಉದಾಹರಣೆಯು ಗ್ರಂಥಗಳನ್ನು ಹೊರುವ ಕತ್ತೆಯಂತೆ. ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುವ ಜನರ ಉದಾಹರಣೆಯು ಬಹಳ ನಿಕೃಷ್ಟವಾಗಿದೆ. ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. info
التفاسير:

external-link copy
6 : 62

قُلْ یٰۤاَیُّهَا الَّذِیْنَ هَادُوْۤا اِنْ زَعَمْتُمْ اَنَّكُمْ اَوْلِیَآءُ لِلّٰهِ مِنْ دُوْنِ النَّاسِ فَتَمَنَّوُا الْمَوْتَ اِنْ كُنْتُمْ صٰدِقِیْنَ ۟

ಹೇಳಿರಿ: “ಓ ಯಹೂದಿಗಳೇ! ಇತರ ಜನರ ಹೊರತಾಗಿ ನೀವು ಮಾತ್ರ ಅಲ್ಲಾಹನ ಮಿತ್ರರು ಎಂಬ ನಿಮ್ಮ ದಾವೆಯು ಸತ್ಯವಾಗಿದ್ದರೆ ನೀವು ಸಾವನ್ನು ಬಯಸಿರಿ. ನೀವು ಸತ್ಯವಂತರಾಗಿದ್ದರೆ.” info
التفاسير:

external-link copy
7 : 62

وَلَا یَتَمَنَّوْنَهٗۤ اَبَدًا بِمَا قَدَّمَتْ اَیْدِیْهِمْ ؕ— وَاللّٰهُ عَلِیْمٌۢ بِالظّٰلِمِیْنَ ۟

ಆದರೆ ಅವರ ಕೈಗಳು ಈಗಾಗಲೇ ಮಾಡಿಟ್ಟಿರುವ ದುಷ್ಕರ್ಮಗಳಿಂದಾಗಿ ಅವರೆಂದೂ ಸಾವನ್ನು ಬಯಸುವುದಿಲ್ಲ. ಅಲ್ಲಾಹು ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ. info
التفاسير:

external-link copy
8 : 62

قُلْ اِنَّ الْمَوْتَ الَّذِیْ تَفِرُّوْنَ مِنْهُ فَاِنَّهٗ مُلٰقِیْكُمْ ثُمَّ تُرَدُّوْنَ اِلٰی عٰلِمِ الْغَیْبِ وَالشَّهَادَةِ فَیُنَبِّئُكُمْ بِمَا كُنْتُمْ تَعْمَلُوْنَ ۟۠

ಹೇಳಿರಿ: “ಯಾವ ಸಾವನ್ನು ಹೆದರಿ ನೀವು ಓಡಿ ಹೋಗುತ್ತಿದ್ದೀರೋ ಅದು ನಿಮ್ಮನ್ನು ಖಂಡಿತ ಭೇಟಿಯಾಗಲಿದೆ. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದ ಅಲ್ಲಾಹನ ಬಳಿಗೆ ಮರಳಿಸಲಾಗುವುದು. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ನಿಮಗೆ ತಿಳಿಸಿಕೊಡುವನು.” info
التفاسير: