ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
28 : 54

وَنَبِّئْهُمْ اَنَّ الْمَآءَ قِسْمَةٌ بَیْنَهُمْ ۚ— كُلُّ شِرْبٍ مُّحْتَضَرٌ ۟

ನೀರನ್ನು ಅವರ ಮಧ್ಯೆ (ಅವರಿಗೆ ಮತ್ತು ಒಂಟೆಗೆ) ಪಾಲು ಮಾಡಲಾಗಿದೆಯೆಂದು ಅವರಿಗೆ ತಿಳಿಸಿರಿ. ಪ್ರತಿಯೊಬ್ಬರೂ ತಮ್ಮ ಸರದಿ ಬಂದಾಗ ಉಪಸ್ಥಿತರಾಗಲಿ. info
التفاسير:

external-link copy
29 : 54

فَنَادَوْا صَاحِبَهُمْ فَتَعَاطٰی فَعَقَرَ ۟

ಆದರೆ ಅವರು ಅವರ ಗೆಳೆಯನನ್ನು ಕರೆದರು. ಅವನು ಆ ಒಂಟೆಯನ್ನು ಹಿಡಿದು ಅದರ ಕಾಲುಗಳನ್ನು ಕತ್ತರಿಸಿದನು. info
التفاسير:

external-link copy
30 : 54

فَكَیْفَ كَانَ عَذَابِیْ وَنُذُرِ ۟

ಆಗ ನನ್ನ ಶಿಕ್ಷೆ ಮತ್ತು ಎಚ್ಚರಿಕೆಯ ಮಾತುಗಳು ಹೇಗಿದ್ದವು? info
التفاسير:

external-link copy
31 : 54

اِنَّاۤ اَرْسَلْنَا عَلَیْهِمْ صَیْحَةً وَّاحِدَةً فَكَانُوْا كَهَشِیْمِ الْمُحْتَظِرِ ۟

ನಾವು ಅವರ ಮೇಲೆ ಒಂದೇ ಚೀತ್ಕಾರವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ನಿರ್ಮಿಸುವವನು ಎಸೆದ ಹುಲ್ಲಿನಂತಾಗಿ ಬಿಟ್ಟರು. info
التفاسير:

external-link copy
32 : 54

وَلَقَدْ یَسَّرْنَا الْقُرْاٰنَ لِلذِّكْرِ فَهَلْ مِنْ مُّدَّكِرٍ ۟

ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ? info
التفاسير:

external-link copy
33 : 54

كَذَّبَتْ قَوْمُ لُوْطٍۭ بِالنُّذُرِ ۟

ಲೂತ‌ರ ಜನರು ಎಚ್ಚರಿಕೆಗಳನ್ನು ನಿಷೇಧಿಸಿದರು. info
التفاسير:

external-link copy
34 : 54

اِنَّاۤ اَرْسَلْنَا عَلَیْهِمْ حَاصِبًا اِلَّاۤ اٰلَ لُوْطٍ ؕ— نَجَّیْنٰهُمْ بِسَحَرٍ ۟ۙ

ನಿಶ್ಚಯವಾಗಿಯೂ ನಾವು ಅವರ ಮೇಲೆ ಕಲ್ಲುಗಳ ಬಿರುಗಾಳಿಯನ್ನು ಕಳುಹಿಸಿದೆವು. ಲೂತ‌ರ ಕುಟುಂಬದ ಹೊರತು. ನಾವು ಅವರನ್ನು ಸಹರಿಯ ವೇಳೆಯಲ್ಲಿ (ರಾತ್ರಿಯ ಕೊನೆಯ ಸಮಯ) ರಕ್ಷಿಸಿದೆವು. info
التفاسير:

external-link copy
35 : 54

نِّعْمَةً مِّنْ عِنْدِنَا ؕ— كَذٰلِكَ نَجْزِیْ مَنْ شَكَرَ ۟

ನಮ್ಮ ಕಡೆಯ ಒಂದು ಉಪಕಾರವಾಗಿ. ಕೃತಜ್ಞರಾಗಿರುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು. info
التفاسير:

external-link copy
36 : 54

وَلَقَدْ اَنْذَرَهُمْ بَطْشَتَنَا فَتَمَارَوْا بِالنُّذُرِ ۟

ನಮ್ಮ ಹಿಡಿತದ ಬಗ್ಗೆ ಅವರು (ಲೂತ್) ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅವರು ಆ ಎಚ್ಚರಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. info
التفاسير:

external-link copy
37 : 54

وَلَقَدْ رَاوَدُوْهُ عَنْ ضَیْفِهٖ فَطَمَسْنَاۤ اَعْیُنَهُمْ فَذُوْقُوْا عَذَابِیْ وَنُذُرِ ۟

ಅವರು ಲೂತರನ್ನು ಅವರ ಅತಿಥಿಗಳ ವಿಷಯದಲ್ಲಿ ಪುಸಲಾಯಿಸಿದರು. ಆಗ ನಾವು ಅವರ ಕಣ್ಣುಗಳನ್ನು ಕುರುಡಾಗಿಸಿದೆವು. (ನಾವು ಹೇಳಿದೆವು): “ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳ ರುಚಿಯನ್ನು ನೋಡಿರಿ.” info
التفاسير:

external-link copy
38 : 54

وَلَقَدْ صَبَّحَهُمْ بُكْرَةً عَذَابٌ مُّسْتَقِرٌّ ۟ۚ

ಮುಂಜಾನೆಯೇ ಅವರನ್ನು ಒಂದೇ ಸ್ಥಳದಲ್ಲಿ ಹಿಡಿದಿಡುವ ಶಿಕ್ಷೆಯು ಅವರ ಮೇಲೆರಗಿಬಿಟ್ಟಿತು. info
التفاسير:

external-link copy
39 : 54

فَذُوْقُوْا عَذَابِیْ وَنُذُرِ ۟

(ನಾವು ಹೇಳಿದೆವು): “ನನ್ನ ಶಿಕ್ಷೆ ಮತ್ತು ಎಚ್ಚರಿಕೆಗಳ ರುಚಿಯನ್ನು ನೋಡಿರಿ.” info
التفاسير:

external-link copy
40 : 54

وَلَقَدْ یَسَّرْنَا الْقُرْاٰنَ لِلذِّكْرِ فَهَلْ مِنْ مُّدَّكِرٍ ۟۠

ನಾವು ಕುರ್‌ಆನನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಸರಳಗೊಳಿಸಿದ್ದೇವೆ. ಉಪದೇಶ ಸ್ವೀಕರಿಸುವವರು ಯಾರಾದರೂ ಇದ್ದಾರೆಯೇ? info
التفاسير:

external-link copy
41 : 54

وَلَقَدْ جَآءَ اٰلَ فِرْعَوْنَ النُّذُرُ ۟ۚ

ಫರೋಹನ ಜನರಿಗೂ ಎಚ್ಚರಿಕೆಗಳು ಬಂದಿದ್ದವು. info
التفاسير:

external-link copy
42 : 54

كَذَّبُوْا بِاٰیٰتِنَا كُلِّهَا فَاَخَذْنٰهُمْ اَخْذَ عَزِیْزٍ مُّقْتَدِرٍ ۟

ಅವರು ನಮ್ಮ ದೃಷ್ಟಾಂತಗಳೆಲ್ಲವನ್ನೂ ನಿಷೇಧಿಸಿದರು. ಆಗ ನಾವು ಮಹಾ ಪ್ರಬಲನು ಮತ್ತು ಶಕ್ತಿವಂತನು ಹಿಡಿಯುವಂತೆ ಅವರನ್ನು ಹಿಡಿದೆವು. info
التفاسير:

external-link copy
43 : 54

اَكُفَّارُكُمْ خَیْرٌ مِّنْ اُولٰٓىِٕكُمْ اَمْ لَكُمْ بَرَآءَةٌ فِی الزُّبُرِ ۟ۚ

(ಓ ಕುರೈಶರೇ) ನಿಮ್ಮ ಸತ್ಯನಿಷೇಧಿಗಳು ಇವರಿಗಿಂತ ಒಳ್ಳೆಯವರೇ? ಅಥವಾ ನಿಮಗೆ ಪೂರ್ವ ಗ್ರಂಥಗಳಲ್ಲಿ ವಿನಾಯಿತಿ ನಿಶ್ಚಯಿಸಲಾಗಿದೆಯೇ? info
التفاسير:

external-link copy
44 : 54

اَمْ یَقُوْلُوْنَ نَحْنُ جَمِیْعٌ مُّنْتَصِرٌ ۟

ಅಥವಾ, “ನಾವು ಗೆಲ್ಲುವ ಸಂಘವಾಗಿದ್ದೇವೆ” ಎಂದು ಅವರು ಹೇಳುತ್ತಿದ್ದಾರೆಯೇ? info
التفاسير:

external-link copy
45 : 54

سَیُهْزَمُ الْجَمْعُ وَیُوَلُّوْنَ الدُّبُرَ ۟

ಅವರ ಸಂಘವು ಸದ್ಯವೇ ಪರಾಭವಗೊಳ್ಳಲಿದೆ ಮತ್ತು ಅವರು ಬೆನ್ನು ತೋರಿಸಿ ಓಡಲಿದ್ದಾರೆ. info
التفاسير:

external-link copy
46 : 54

بَلِ السَّاعَةُ مَوْعِدُهُمْ وَالسَّاعَةُ اَدْهٰی وَاَمَرُّ ۟

ಅಲ್ಲ, ಅಂತ್ಯಸಮಯವು (ಪುನರುತ್ಥಾನ ದಿನವು) ಅವರಿಗೆ ವಾಗ್ದಾನ ಮಾಡಲಾದ ಸಮಯವಾಗಿದೆ. ಅಂತ್ಯಸಮಯವು ಅತ್ಯಂತ ಕಠೋರ ಮತ್ತು ಅತ್ಯಂತ ಕಹಿಯಾಗಿದೆ. info
التفاسير:

external-link copy
47 : 54

اِنَّ الْمُجْرِمِیْنَ فِیْ ضَلٰلٍ وَّسُعُرٍ ۟ۘ

ನಿಶ್ಚಯವಾಗಿಯೂ ಅಪರಾಧಿಗಳು ದುರ್ಮಾರ್ಗದಲ್ಲಿ ಮತ್ತು ಶಿಕ್ಷೆಯಲ್ಲಿದ್ದಾರೆ. info
التفاسير:

external-link copy
48 : 54

یَوْمَ یُسْحَبُوْنَ فِی النَّارِ عَلٰی وُجُوْهِهِمْ ؕ— ذُوْقُوْا مَسَّ سَقَرَ ۟

ಅವರನ್ನು ಅವರ ಮುಖದ ಮೇಲೆ ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ! (ಅವರೊಡನೆ ಹೇಳಲಾಗುವುದು): “ನೀವು ನರಕ ಸ್ಪರ್ಶದ ರುಚಿಯನ್ನು ನೋಡಿರಿ.” info
التفاسير:

external-link copy
49 : 54

اِنَّا كُلَّ شَیْءٍ خَلَقْنٰهُ بِقَدَرٍ ۟

ನಿಶ್ಚಯವಾಗಿಯೂ ನಾವು ಎಲ್ಲಾ ವಸ್ತುಗಳನ್ನು ಒಂದು (ನಿಶ್ಚಿತ) ನಿರ್ಣಯದಂತೆ ಸೃಷ್ಟಿಸಿದ್ದೇವೆ. info
التفاسير: