ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

ಅಲ್ -ಕಮರ್

external-link copy
1 : 54

اِقْتَرَبَتِ السَّاعَةُ وَانْشَقَّ الْقَمَرُ ۟

ಅಂತ್ಯಸಮಯವು ಹತ್ತಿರವಾಗಿದೆ ಮತ್ತು ಚಂದ್ರ ಇಬ್ಭಾಗವಾಗಿದೆ.[1] info

[1] ಮಕ್ಕಾದ ಸತ್ಯನಿಷೇಧಿಗಳ ಬೇಡಿಕೆಯ ಮೇರೆಗೆ ಈ ಪವಾಡವು ಸಂಭವಿಸಿತ್ತು. ಚಂದ್ರ ಇಬ್ಭಾಗವಾಗಿ ಅದರ ಎರಡು ಭಾಗಗಳನ್ನು ಜನರು ಹಿರಾ ಬೆಟ್ಟದ ಎರಡು ಬದಿಗಳಲ್ಲಿ ಕಂಡರು.

التفاسير:

external-link copy
2 : 54

وَاِنْ یَّرَوْا اٰیَةً یُّعْرِضُوْا وَیَقُوْلُوْا سِحْرٌ مُّسْتَمِرٌّ ۟

ಅವರು ಯಾವುದೇ ದೃಷ್ಟಾಂತವನ್ನು ನೋಡಿದರೂ ವಿಮುಖರಾಗುತ್ತಾರೆ ಮತ್ತು “ಇದು ಹಿಂದಿನಿಂದಲೇ ನಡೆದು ಬರುತ್ತಿರುವ ಮಾಟಗಾರಿಕೆ” ಎಂದು ಹೇಳುತ್ತಾರೆ. info
التفاسير:

external-link copy
3 : 54

وَكَذَّبُوْا وَاتَّبَعُوْۤا اَهْوَآءَهُمْ وَكُلُّ اَمْرٍ مُّسْتَقِرٌّ ۟

ಅವರು ನಿಷೇಧಿಸಿದರು ಮತ್ತು ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಎಲ್ಲಾ ವಿಷಯಗಳಿಗೂ ಒಂದು ನಿಶ್ಚಿತ ಸಮಯವನ್ನು ನಿರ್ಣಯಿಸಲಾಗಿದೆ. info
التفاسير:

external-link copy
4 : 54

وَلَقَدْ جَآءَهُمْ مِّنَ الْاَنْۢبَآءِ مَا فِیْهِ مُزْدَجَرٌ ۟ۙ

ನಿಶ್ಚಯವಾಗಿಯೂ ಅವರ ಬಳಿಗೆ ಗದರಿಕೆಯ (ಉಪದೇಶವಿರುವ) ಸಮಾಚಾರಗಳು ಬಂದಿವೆ. info
التفاسير:

external-link copy
5 : 54

حِكْمَةٌ بَالِغَةٌ فَمَا تُغْنِ النُّذُرُ ۟ۙ

ಪೂರ್ಣರೂಪದ ವಿವೇಕಯುಕ್ತ ಮಾತುಗಳು. ಆದರೂ ಆ ಮುನ್ನೆಚ್ಚರಿಕೆಗಳು ಪ್ರಯೋಜನ ನೀಡಲಿಲ್ಲ. info
التفاسير:

external-link copy
6 : 54

فَتَوَلَّ عَنْهُمْ ۘ— یَوْمَ یَدْعُ الدَّاعِ اِلٰی شَیْءٍ نُّكُرٍ ۟ۙ

ಆದ್ದರಿಂದ (ಪ್ರವಾದಿಯವರೇ!) ನೀವು ಅವರಿಂದ ವಿಮುಖರಾಗಿ ಬಿಡಿ. ಕರೆ ನೀಡುವವನು ಅನಿಷ್ಟಕರ ವಿಷಯದ ಕಡೆಗೆ ಕರೆ ನೀಡುವ ದಿನ. info
التفاسير: