[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳೊಡನೆ ಶಾಂತಿಯಿಂದ ಉಮ್ರ ನಿರ್ವಹಿಸುವ ಕನಸನ್ನು ಕಂಡರು. ಆದ್ದರಿಂದ ಅವರು ಉಮ್ರ ನಿರ್ವಹಿಸುವುದಕ್ಕಾಗಿ ಮಕ್ಕಾಗೆ ಹೊರಟರು. ಆದರೆ ದಾರಿ ಮಧ್ಯೆ ಕುರೈಶರು ಅವರನ್ನು ಮಕ್ಕಾ ಪ್ರವೇಶಿಸದಂತೆ ತಡೆದರು. ಒಂದು ಯುದ್ಧದ ಹಂತಕ್ಕೆ ತಲುಪಿದ್ದ ಸಂಘರ್ಷವು ನಂತರ ಹುದೈಬಿಯಾ ಒಪ್ಪಂದದ ಮೂಲಕ ಕೊನೆಯಾಯಿತು. ಈ ಒಪ್ಪಂದದ ಪ್ರಕಾರ ಈ ವರ್ಷ ಮುಸ್ಲಿಮರು ಉಮ್ರ ನಿರ್ಹಹಿಸಬಾರದು. ಆದರೆ ಮುಂದಿನ ವರ್ಷ ನಿರ್ವಹಿಸಬಹುದು. ಮುಂದಿನ ವರ್ಷ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳೊಡನೆ ಶಾಂತಿಯಿಂದ ಉಮ್ರ ನಿರ್ವಹಿಸಿದರು.