ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
10 : 48

اِنَّ الَّذِیْنَ یُبَایِعُوْنَكَ اِنَّمَا یُبَایِعُوْنَ اللّٰهَ ؕ— یَدُ اللّٰهِ فَوْقَ اَیْدِیْهِمْ ۚ— فَمَنْ نَّكَثَ فَاِنَّمَا یَنْكُثُ عَلٰی نَفْسِهٖ ۚ— وَمَنْ اَوْفٰی بِمَا عٰهَدَ عَلَیْهُ اللّٰهَ فَسَیُؤْتِیْهِ اَجْرًا عَظِیْمًا ۟۠

ನಿಮ್ಮ ಮುಂದೆ ಪ್ರತಿಜ್ಞೆ ಮಾಡುವವರು ನಿಶ್ಚಯವಾಗಿಯೂ ಅಲ್ಲಾಹನ ಮುಂದೆ ಪ್ರತಿಜ್ಞೆ ಮಾಡುತ್ತಿದ್ದಾರೆ. ಅವರ ಕೈಗಳ ಮೇಲೆ ಅಲ್ಲಾಹನ ಕೈ ಇದೆ. ಯಾರು ತನ್ನ ಪ್ರತಿಜ್ಞೆಯನ್ನು ಮುರಿಯುತ್ತಾನೋ ಅವನು ಅವನಿಗೆ ವಿರುದ್ಧವಾಗಿಯೇ ಅದನ್ನು ಮುರಿಯುತ್ತಾನೆ. ಯಾರು ಅಲ್ಲಾಹನ ಮುಂದೆ ಮಾಡಿದ ಕರಾರನ್ನು ಪೂರ್ಣಗೊಳಿಸುತ್ತಾನೋ ಅವನಿಗೆ ಅಲ್ಲಾಹು ಮಹಾ ಪ್ರತಿಫಲವನ್ನು ನೀಡುತ್ತಾನೆ. info
التفاسير:

external-link copy
11 : 48

سَیَقُوْلُ لَكَ الْمُخَلَّفُوْنَ مِنَ الْاَعْرَابِ شَغَلَتْنَاۤ اَمْوَالُنَا وَاَهْلُوْنَا فَاسْتَغْفِرْ لَنَا ۚ— یَقُوْلُوْنَ بِاَلْسِنَتِهِمْ مَّا لَیْسَ فِیْ قُلُوْبِهِمْ ؕ— قُلْ فَمَنْ یَّمْلِكُ لَكُمْ مِّنَ اللّٰهِ شَیْـًٔا اِنْ اَرَادَ بِكُمْ ضَرًّا اَوْ اَرَادَ بِكُمْ نَفْعًا ؕ— بَلْ كَانَ اللّٰهُ بِمَا تَعْمَلُوْنَ خَبِیْرًا ۟

ಮರುಭೂಮಿ ನಿವಾಸಿಗಳಲ್ಲಿ ಹಿಂದೆ ಉಳಿದವರು ನಿಮ್ಮೊಡನೆ ಹೇಳುತ್ತಾರೆ: “ನಮ್ಮ ಆಸ್ತಿ ಮತ್ತು ಕುಟುಂಬಗಳು ನಮ್ಮನ್ನು ಕಾರ್ಯಮಗ್ನಗೊಳಿಸಿವೆ. ಆದ್ದರಿಂದ ನೀವು ನಮಗೋಸ್ಕರ ಕ್ಷಮೆಯಾಚಿಸಿರಿ.” ಅವರು ತಮ್ಮ ಹೃದಯಗಳಲ್ಲಿ ಇಲ್ಲದಿರುವುದನ್ನು ತಮ್ಮ ನಾಲಗೆಗಳ ಮೂಲಕ ಹೇಳುತ್ತಾರೆ. ಹೇಳಿರಿ: “ಅಲ್ಲಾಹು ನಿಮಗೆ ಏನಾದರೂ ತೊಂದರೆ ಮಾಡಲು ಬಯಸಿದರೆ ಅಥವಾ ನಿಮಗೆ ಏನಾದರೂ ಪ್ರಯೋಜನ ನೀಡಲು ಬಯಸಿದರೆ ನಿಮಗೋಸ್ಕರ ಅಲ್ಲಾಹನ ಕಡೆಯಿಂದ ಬರುವ ಯಾವುದೇ ವಸ್ತುವಿನ ಮೇಲೆ ಅಧಿಕಾರ ಹೊಂದಿರುವವರು ಯಾರು?” ಅಲ್ಲ, ವಾಸ್ತವವಾಗಿ, ನೀವು ಮಾಡುತ್ತಿರುವ ಕರ್ಮಗಳನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ. info
التفاسير:

external-link copy
12 : 48

بَلْ ظَنَنْتُمْ اَنْ لَّنْ یَّنْقَلِبَ الرَّسُوْلُ وَالْمُؤْمِنُوْنَ اِلٰۤی اَهْلِیْهِمْ اَبَدًا وَّزُیِّنَ ذٰلِكَ فِیْ قُلُوْبِكُمْ وَظَنَنْتُمْ ظَنَّ السَّوْءِ ۖۚ— وَكُنْتُمْ قَوْمًا بُوْرًا ۟

ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ಎಂದಿಗೂ ಅವರ ಕುಟುಂಬಕ್ಕೆ ಮರಳಿ ಬರುವುದಿಲ್ಲ ಎಂದೇ ನೀವು ಭಾವಿಸಿದಿರಿ. ಅದನ್ನು ನಿಮ್ಮ ಹೃದಯಗಳಲ್ಲಿ ಅಂದವಾಗಿ ತೋರಿಸಿಕೊಡಲಾಗಿತ್ತು. ನೀವು ಕೆಟ್ಟ ಭಾವನೆಗಳನ್ನು ಹೊಂದಿದ್ದಿರಿ. ನೀವು ನಾಶಕ್ಕೆ ತುತ್ತಾದ ಜನರಾಗಿದ್ದೀರಿ. info
التفاسير:

external-link copy
13 : 48

وَمَنْ لَّمْ یُؤْمِنْ بِاللّٰهِ وَرَسُوْلِهٖ فَاِنَّاۤ اَعْتَدْنَا لِلْكٰفِرِیْنَ سَعِیْرًا ۟

ಯಾರು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದಿಲ್ಲವೋ ಅಂತಹ ಸತ್ಯನಿಷೇಧಿಗಳಿಗೆ ನಾವು ಜ್ವಲಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ. info
التفاسير:

external-link copy
14 : 48

وَلِلّٰهِ مُلْكُ السَّمٰوٰتِ وَالْاَرْضِ ؕ— یَغْفِرُ لِمَنْ یَّشَآءُ وَیُعَذِّبُ مَنْ یَّشَآءُ ؕ— وَكَانَ اللّٰهُ غَفُوْرًا رَّحِیْمًا ۟

ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info
التفاسير:

external-link copy
15 : 48

سَیَقُوْلُ الْمُخَلَّفُوْنَ اِذَا انْطَلَقْتُمْ اِلٰی مَغَانِمَ لِتَاْخُذُوْهَا ذَرُوْنَا نَتَّبِعْكُمْ ۚ— یُرِیْدُوْنَ اَنْ یُّبَدِّلُوْا كَلٰمَ اللّٰهِ ؕ— قُلْ لَّنْ تَتَّبِعُوْنَا كَذٰلِكُمْ قَالَ اللّٰهُ مِنْ قَبْلُ ۚ— فَسَیَقُوْلُوْنَ بَلْ تَحْسُدُوْنَنَا ؕ— بَلْ كَانُوْا لَا یَفْقَهُوْنَ اِلَّا قَلِیْلًا ۟

ನೀವು ಯುದ್ಧಾರ್ಜಿತ ಸೊತ್ತನ್ನು ವಶಪಡಿಸಲು ಹೋಗುವಾಗ ಹಿಂದೆ ಉಳಿದವರು ಹೇಳುತ್ತಾರೆ: “ನಾವು ಕೂಡ ನಿಮ್ಮೊಡನೆ ಬರಲು ಅನುಮತಿ ನೀಡಿರಿ.” ಅವರು ಅಲ್ಲಾಹನ ವಚನಗಳನ್ನು ಬದಲಾಯಿಸಲು ಬಯಸುತ್ತಾರೆ. ಹೇಳಿರಿ: “ನೀವು ಎಂದಿಗೂ ನಮ್ಮ ಜೊತೆಗೆ ಬರುವುದಿಲ್ಲ ಎಂದು ಅಲ್ಲಾಹು ಮೊದಲೇ ಹೇಳಿಬಿಟ್ಟಿದ್ದಾನೆ.” ಆಗ ಅವರು ಹೇಳುತ್ತಾರೆ: “ವಾಸ್ತವವಾಗಿ, ನಿಮಗೆ ನಮ್ಮ ಮೇಲೆ ಅಸೂಯೆಯಿದೆ.” ಅಲ್ಲ, ವಾಸ್ತವವಾಗಿ ಅವರು ಸ್ವಲ್ಪವೇ ಅರ್ಥಮಾಡಿಕೊಳ್ಳುತ್ತಾರೆ. info
التفاسير: