ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
30 : 47

وَلَوْ نَشَآءُ لَاَرَیْنٰكَهُمْ فَلَعَرَفْتَهُمْ بِسِیْمٰهُمْ ؕ— وَلَتَعْرِفَنَّهُمْ فِیْ لَحْنِ الْقَوْلِ ؕ— وَاللّٰهُ یَعْلَمُ اَعْمَالَكُمْ ۟

ನಾವು ಇಚ್ಛಿಸಿದರೆ ಅವರನ್ನು ನಿಮಗೆ ತೋರಿಸುತ್ತಿದ್ದೆವು. ಆಗ ಅವರ ಲಕ್ಷಣಗಳಿಂದ ನೀವು ಅವರನ್ನು ಗುರುತಿಸುತ್ತಿದ್ದಿರಿ. ಅವರು ಮಾತನಾಡುವ ಶೈಲಿಯಿಂದಲೂ ನಿಮಗೆ ಖಂಡಿತ ಅವರನ್ನು ಗುರುತಿಸಬಹುದು. ಅಲ್ಲಾಹು ನಿಮ್ಮ ಎಲ್ಲಾ ಕರ್ಮಗಳನ್ನು ತಿಳಿಯುತ್ತಾನೆ. info
التفاسير:

external-link copy
31 : 47

وَلَنَبْلُوَنَّكُمْ حَتّٰی نَعْلَمَ الْمُجٰهِدِیْنَ مِنْكُمْ وَالصّٰبِرِیْنَ ۙ— وَنَبْلُوَاۡ اَخْبَارَكُمْ ۟

ನಿಶ್ಚಯವಾಗಿಯೂ ನಾವು ನಿಮ್ಮನ್ನು ಪರೀಕ್ಷಿಸುವೆವು. ನಿಮ್ಮಲ್ಲಿರುವ ಹೋರಾಟಗಾರರು ಯಾರು ಮತ್ತು ಸಹಿಷ್ಣುತೆಯುಳ್ಳವರು ಯಾರು ಎಂದು ಗುರುತಿಸಿ ತಿಳಿಯುವ ತನಕ ಮತ್ತು ನಿಮ್ಮ ವಿಚಾರಗಳನ್ನು ಪರೀಕ್ಷಿಸಿ ತಿಳಿಯುವ ತನಕ. info
التفاسير:

external-link copy
32 : 47

اِنَّ الَّذِیْنَ كَفَرُوْا وَصَدُّوْا عَنْ سَبِیْلِ اللّٰهِ وَشَآقُّوا الرَّسُوْلَ مِنْ بَعْدِ مَا تَبَیَّنَ لَهُمُ الْهُدٰی ۙ— لَنْ یَّضُرُّوا اللّٰهَ شَیْـًٔا ؕ— وَسَیُحْبِطُ اَعْمَالَهُمْ ۟

ನಿಶ್ಚಯವಾಗಿಯೂ ಸತ್ಯನಿಷೇಧಿಗಳು, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಮತ್ತು ಸನ್ಮಾರ್ಗವು ಸ್ಪಷ್ಟವಾದ ಬಳಿಕ ಸಂದೇಶವಾಹಕರಿಗೆ ವಿರುದ್ಧವಾಗಿ ಚಲಿಸಿದವರು ಯಾರೋ ಅವರು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡಲಾರರು. ಅಲ್ಲಾಹು ಅವರ ಕರ್ಮಗಳನ್ನು ಸದ್ಯವೇ ನಿಷ್ಫಲಗೊಳಿಸುವನು. info
التفاسير:

external-link copy
33 : 47

یٰۤاَیُّهَا الَّذِیْنَ اٰمَنُوْۤا اَطِیْعُوا اللّٰهَ وَاَطِیْعُوا الرَّسُوْلَ وَلَا تُبْطِلُوْۤا اَعْمَالَكُمْ ۟

ಓ ಸತ್ಯವಿಶ್ವಾಸಿಗಳೇ! ಅಲ್ಲಾಹನ ಆಜ್ಞೆಗಳನ್ನು ಅನುಸರಿಸಿರಿ ಮತ್ತು ಸಂದೇಶವಾಹಕರ ಆಜ್ಞೆಗಳನ್ನು ಅನುಸರಿಸಿರಿ. ನಿಮ್ಮ ಕರ್ಮಗಳನ್ನು ನಿಷ್ಫಲಗೊಳಿಸಬೇಡಿ. info
التفاسير:

external-link copy
34 : 47

اِنَّ الَّذِیْنَ كَفَرُوْا وَصَدُّوْا عَنْ سَبِیْلِ اللّٰهِ ثُمَّ مَاتُوْا وَهُمْ كُفَّارٌ فَلَنْ یَّغْفِرَ اللّٰهُ لَهُمْ ۟

ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಹಾಗೂ ನಂತರ ಸತ್ಯನಿಷೇಧಿಗಳಾಗಿಯೇ ಸಾವನ್ನಪ್ಪಿದವರು ಯಾರೋ ಅವರಿಗೆ ಅಲ್ಲಾಹು ಎಂದೂ ಕ್ಷಮಿಸುವುದಿಲ್ಲ. info
التفاسير:

external-link copy
35 : 47

فَلَا تَهِنُوْا وَتَدْعُوْۤا اِلَی السَّلْمِ ۖۗ— وَاَنْتُمُ الْاَعْلَوْنَ ۖۗ— وَاللّٰهُ مَعَكُمْ وَلَنْ یَّتِرَكُمْ اَعْمَالَكُمْ ۟

ಆದ್ದರಿಂದ ನೀವು ಬಲಹೀನರಂತೆ ಶಾಂತಿ-ಸಂಧಾನಕ್ಕೆ ಮುಂದಾಗಬೇಡಿ. ವಾಸ್ತವವಾಗಿ ನೀವೇ ಶ್ರೇಷ್ಠರು. ಅಲ್ಲಾಹು ನಿಮ್ಮ ಜೊತೆಗಿದ್ದಾನೆ. ಅವನು ನಿಮ್ಮ ಕರ್ಮಗಳನ್ನು ಎಂದಿಗೂ ವ್ಯರ್ಥಗೊಳಿಸುವುದಿಲ್ಲ. info
التفاسير:

external-link copy
36 : 47

اِنَّمَا الْحَیٰوةُ الدُّنْیَا لَعِبٌ وَّلَهْوٌ ؕ— وَاِنْ تُؤْمِنُوْا وَتَتَّقُوْا یُؤْتِكُمْ اُجُوْرَكُمْ وَلَا یَسْـَٔلْكُمْ اَمْوَالَكُمْ ۟

ನಿಶ್ಚಯವಾಗಿಯೂ ಇಹಲೋಕ ಜೀವನವು ಆಟ ಮತ್ತು ಮನೋರಂಜನೆಯಾಗಿದೆ. ನೀವು ವಿಶ್ವಾಸವಿಟ್ಟು ದೇವಭಯದಿಂದ ಜೀವಿಸುವುದಾದರೆ ಅವನು ನಿಮ್ಮ ಪ್ರತಿಫಲವನ್ನು ನಿಮಗೆ ಕೊಡುವನು. ಅವನು ನಿಮ್ಮಿಂದ ನಿಮ್ಮ ಆಸ್ತಿಯನ್ನು ಕೇಳುವುದಿಲ್ಲ. info
التفاسير:

external-link copy
37 : 47

اِنْ یَّسْـَٔلْكُمُوْهَا فَیُحْفِكُمْ تَبْخَلُوْا وَیُخْرِجْ اَضْغَانَكُمْ ۟

ಅವನೇನಾದರೂ ನಿಮ್ಮಿಂದ ನಿಮ್ಮ ಸಂಪತ್ತನ್ನು ಕೇಳಿದರೆ ಮತ್ತು ಒತ್ತಾಯಪಡಿಸಿದರೆ, ನೀವು ಜಿಪುಣತನ ತೋರುತ್ತೀರಿ ಮತ್ತು ನಿಮ್ಮ ಆಂತರ್ಯದಲ್ಲಿರುವ ಹಗೆಯನ್ನು ಹೊರಹಾಕುತ್ತೀರಿ. info
التفاسير:

external-link copy
38 : 47

هٰۤاَنْتُمْ هٰۤؤُلَآءِ تُدْعَوْنَ لِتُنْفِقُوْا فِیْ سَبِیْلِ اللّٰهِ ۚ— فَمِنْكُمْ مَّنْ یَّبْخَلُ ۚ— وَمَنْ یَّبْخَلْ فَاِنَّمَا یَبْخَلُ عَنْ نَّفْسِهٖ ؕ— وَاللّٰهُ الْغَنِیُّ وَاَنْتُمُ الْفُقَرَآءُ ۚ— وَاِنْ تَتَوَلَّوْا یَسْتَبْدِلْ قَوْمًا غَیْرَكُمْ ۙ— ثُمَّ لَا یَكُوْنُوْۤا اَمْثَالَكُمْ ۟۠

ತಿಳಿಯಿರಿ! ನಿಮ್ಮನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಲು ಕರೆಯಲಾಗುತ್ತದೆ. ಆಗ ನಿಮ್ಮಲ್ಲಿ ಕೆಲವರು ಜಿಪುಣತನ ತೋರುತ್ತಾರೆ. ಯಾರಾದರೂ ಜಿಪುಣತನ ತೋರಿದರೆ ಅವನು ಜಿಪುಣತನ ತೋರುವುದು ಸ್ವಯಂ ಅವನ ವಿರುದ್ಧವೇ ಆಗಿದೆ. ಅಲ್ಲಾಹನಿಗೆ ಯಾರ ಅಗತ್ಯವೂ ಇಲ್ಲ. ಆದರೆ ನಿಮಗೆ ಅಲ್ಲಾಹನ ಅಗತ್ಯವಿದೆ. ನೀವೇನಾದರೂ ತಿರುಗಿ ನಡೆದರೆ ಅವನು ನಿಮಗೆ ಬದಲಿಯಾಗಿ ನಿಮ್ಮ ಹೊರತಾದ ಬೇರೆ ಜನರನ್ನು ತರುವನು. ನಂತರ ಅವರು ನಿಮ್ಮಂತೆ ಆಗಿರಲಾರರು. info
التفاسير: