ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
20 : 47

وَیَقُوْلُ الَّذِیْنَ اٰمَنُوْا لَوْلَا نُزِّلَتْ سُوْرَةٌ ۚ— فَاِذَاۤ اُنْزِلَتْ سُوْرَةٌ مُّحْكَمَةٌ وَّذُكِرَ فِیْهَا الْقِتَالُ ۙ— رَاَیْتَ الَّذِیْنَ فِیْ قُلُوْبِهِمْ مَّرَضٌ یَّنْظُرُوْنَ اِلَیْكَ نَظَرَ الْمَغْشِیِّ عَلَیْهِ مِنَ الْمَوْتِ ؕ— فَاَوْلٰى لَهُمْ ۟ۚ

ಸತ್ಯವಿಶ್ವಾಸಿಗಳು ಕೇಳುತ್ತಾರೆ: “ಒಂದು ಅಧ್ಯಾಯವು ಏಕೆ ಅವತೀರ್ಣವಾಗಿಲ್ಲ?” ಆದರೆ ಖಚಿತ ನಿಯಮಗಳಿರುವ ಒಂದು ಅಧ್ಯಾಯವು ಅವತೀರ್ಣವಾಗಿ ಅದರಲ್ಲಿ ಯುದ್ಧದ ಬಗ್ಗೆ ಉಲ್ಲೇಖಿಸಲಾದರೆ ಮೃತ್ಯು ಆವರಿಸಿ ಪ್ರಜ್ಞೆ ಕಳಕೊಂಡ ವ್ಯಕ್ತಿಯು ನೋಡುವಂತೆ, ಹೃದಯಗಳಲ್ಲಿ ರೋಗವಿರುವವರು ನಿಮ್ಮ ಕಡೆಗೆ ನೋಡುವುದನ್ನು ನೀವು ಕಾಣುವಿರಿ. ಅವರಿಗೆ ಅದು ಅತ್ಯಂತ ಅರ್ಹವಾಗಿದೆ. info
التفاسير:

external-link copy
21 : 47

طَاعَةٌ وَّقَوْلٌ مَّعْرُوْفٌ ۫— فَاِذَا عَزَمَ الْاَمْرُ ۫— فَلَوْ صَدَقُوا اللّٰهَ لَكَانَ خَیْرًا لَّهُمْ ۟ۚ

ಆಜ್ಞಾಪಾಲನೆ ಮಾಡುವುದು ಹಾಗೂ ಉತ್ತಮ ಮಾತನ್ನು ಹೇಳುವುದು. ನಂತರ ವಿಷಯವನ್ನು ತೀರ್ಮಾನಿಸಲಾದಾಗ ಅವರು ಅಲ್ಲಾಹನಿಗೆ ನಿಷ್ಠೆಯನ್ನು ತೋರಿಸಿದರೆ ಅದು ಅವರಿಗೆ ಶ್ರೇಷ್ಠವಾಗಿದೆ. info
التفاسير:

external-link copy
22 : 47

فَهَلْ عَسَیْتُمْ اِنْ تَوَلَّیْتُمْ اَنْ تُفْسِدُوْا فِی الْاَرْضِ وَتُقَطِّعُوْۤا اَرْحَامَكُمْ ۟

ನೀವು (ಯುದ್ಧದಿಂದ) ವಿಮುಖರಾದರೆ ಬಹುಶಃ ನೀವು ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಲೂ ಮತ್ತು ನಿಮ್ಮ ಕುಟುಂಬ ಸಂಬಂಧಗಳನ್ನು ಕಡಿಯುತ್ತಲೂ ಇರುವಿರಾ? info
التفاسير:

external-link copy
23 : 47

اُولٰٓىِٕكَ الَّذِیْنَ لَعَنَهُمُ اللّٰهُ فَاَصَمَّهُمْ وَاَعْمٰۤی اَبْصَارَهُمْ ۟

ಅಂತಹ ಜನರನ್ನು ಅಲ್ಲಾಹು ಶಪಿಸಿದ್ದಾನೆ, ಅವರನ್ನು ಕಿವುಡರನ್ನಾಗಿ ಮಾಡಿದ್ದಾನೆ ಮತ್ತು ಅವರನ್ನು ಕಣ್ಣು ಕಾಣದವರಂತೆ ಮಾಡಿದ್ದಾನೆ. info
التفاسير:

external-link copy
24 : 47

اَفَلَا یَتَدَبَّرُوْنَ الْقُرْاٰنَ اَمْ عَلٰی قُلُوْبٍ اَقْفَالُهَا ۟

ಅವರು ಕುರ್‌ಆನನ್ನು ಮನನ ಮಾಡುವುದಿಲ್ಲವೇ? ಅಥವಾ (ಅವರ) ಹೃದಯಗಳಿಗೆ ಬೀಗ ಜಡಿಯಲಾಗಿದೆಯೇ? info
التفاسير:

external-link copy
25 : 47

اِنَّ الَّذِیْنَ ارْتَدُّوْا عَلٰۤی اَدْبَارِهِمْ مِّنْ بَعْدِ مَا تَبَیَّنَ لَهُمُ الْهُدَی ۙ— الشَّیْطٰنُ سَوَّلَ لَهُمْ ؕ— وَاَمْلٰی لَهُمْ ۟

ನಿಶ್ಚಯವಾಗಿಯೂ ಸನ್ಮಾರ್ಗವು ಸ್ಪಷ್ಟವಾದ ಬಳಿಕ ಅದರಿಂದ ಮುಖ ತಿರುಗಿಸಿ ನಡೆದವರು ಯಾರೋ ಅವರಿಗೆ ಶೈತಾನನು (ಅವರ ಕೃತ್ಯಗಳನ್ನು) ಸುಂದರವಾಗಿ ತೋರಿಸಿದ್ದಾನೆ ಮತ್ತು ಅವರಿಗೆ (ವ್ಯರ್ಥ ನಿರೀಕ್ಷೆಗಳನ್ನು) ದೀರ್ಘಗೊಳಿಸಿಕೊಟ್ಟಿದ್ದಾನೆ. info
التفاسير:

external-link copy
26 : 47

ذٰلِكَ بِاَنَّهُمْ قَالُوْا لِلَّذِیْنَ كَرِهُوْا مَا نَزَّلَ اللّٰهُ سَنُطِیْعُكُمْ فِیْ بَعْضِ الْاَمْرِ ۚ— وَاللّٰهُ یَعْلَمُ اِسْرَارَهُمْ ۟

ಅದೇಕೆಂದರೆ ಅವರು (ಕಪಟವಿಶ್ವಾಸಿಗಳು) ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ದ್ವೇಷಿಸುವವರೊಡನೆ (ಯಹೂದಿಗಳೊಡನೆ) ಹೇಳಿದರು: “ಕೆಲವು ವಿಷಯಗಳಲ್ಲಿ ನಾವು ನಿಮ್ಮ ಮಾತನ್ನು ಕೇಳುತ್ತೇವೆ.” ಅವರು ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ. info
التفاسير:

external-link copy
27 : 47

فَكَیْفَ اِذَا تَوَفَّتْهُمُ الْمَلٰٓىِٕكَةُ یَضْرِبُوْنَ وُجُوْهَهُمْ وَاَدْبَارَهُمْ ۟

ಹಾಗಾದರೆ ದೇವದೂತರು‍ಗಳು ಅವರ ಮುಖ ಮತ್ತು ಬೆನ್ನುಗಳಿಗೆ ಥಳಿಸುತ್ತಾ ಅವರನ್ನು ಆತ್ಮವನ್ನು ವಶಪಡಿಸುವಾಗ ಅವರ ಸ್ಥಿತಿ ಹೇಗಿರಬಹುದು? info
التفاسير:

external-link copy
28 : 47

ذٰلِكَ بِاَنَّهُمُ اتَّبَعُوْا مَاۤ اَسْخَطَ اللّٰهَ وَكَرِهُوْا رِضْوَانَهٗ فَاَحْبَطَ اَعْمَالَهُمْ ۟۠

ಅದೇಕೆಂದರೆ ಅವರು ಅಲ್ಲಾಹನಿಗೆ ಕೋಪ ತರುವ ವಿಷಯಗಳನ್ನು ಅನುಸರಿಸಿದರು ಮತ್ತು ಅವನು ಇಷ್ಟಪಡುವುದನ್ನು ದ್ವೇಷಿಸಿದರು. ಆದ್ದರಿಂದ ಅವನು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು. info
التفاسير:

external-link copy
29 : 47

اَمْ حَسِبَ الَّذِیْنَ فِیْ قُلُوْبِهِمْ مَّرَضٌ اَنْ لَّنْ یُّخْرِجَ اللّٰهُ اَضْغَانَهُمْ ۟

ಹೃದಯಗಳಲ್ಲಿ ರೋಗವಿರುವವರು ಅಲ್ಲಾಹು ಅವರ ಆಂತರ್ಯದಲ್ಲಿರುವ ಹಗೆಯನ್ನು ಬಹಿರಂಗಪಡಿಸುವುದಿಲ್ಲವೆಂದು ಭಾವಿಸಿದ್ದಾರೆಯೇ? info
التفاسير: