ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
71 : 36

اَوَلَمْ یَرَوْا اَنَّا خَلَقْنَا لَهُمْ مِّمَّا عَمِلَتْ اَیْدِیْنَاۤ اَنْعَامًا فَهُمْ لَهَا مٰلِكُوْنَ ۟

ನಮ್ಮ ಕೈಗಳು ನಿರ್ಮಿಸಿದ ವಸ್ತುಗಳಲ್ಲಿ ಸೇರಿದ ಜಾನುವಾರುಗಳನ್ನು ನಾವು ಅವರಿಗೋಸ್ಕರ ಸೃಷ್ಟಿಸಿದ್ದೇವೆಂದು ಅವರು ನೋಡಿಲ್ಲವೇ? ಅವರು ಅವುಗಳ ಮಾಲಿಕರಾಗಿದ್ದಾರೆ. info
التفاسير:

external-link copy
72 : 36

وَذَلَّلْنٰهَا لَهُمْ فَمِنْهَا رَكُوْبُهُمْ وَمِنْهَا یَاْكُلُوْنَ ۟

ನಾವು ಅವುಗಳನ್ನು ಅವರಿಗೆ ಪಳಗಿಸಿಕೊಟ್ಟಿದ್ದೇವೆ. ಅವುಗಳಲ್ಲಿ ಕೆಲವು ಪ್ರಾಣಿಗಳ ಮೇಲೆ ಅವರ ಸವಾರಿ ಮಾಡುತ್ತಾರೆ ಮತ್ತು ಕೆಲವು ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ. info
التفاسير:

external-link copy
73 : 36

وَلَهُمْ فِیْهَا مَنَافِعُ وَمَشَارِبُ ؕ— اَفَلَا یَشْكُرُوْنَ ۟

ಅವುಗಳಲ್ಲಿ ಅವರಿಗೆ ಅನೇಕ ಪ್ರಯೋಜನಗಳಿವೆ; ಪಾನೀಯವೂ ಇದೆ. ಆದರೂ ಅವರು ಕೃತಜ್ಞರಾಗುವುದಿಲ್ಲವೇ? info
التفاسير:

external-link copy
74 : 36

وَاتَّخَذُوْا مِنْ دُوْنِ اللّٰهِ اٰلِهَةً لَّعَلَّهُمْ یُنْصَرُوْنَ ۟ؕ

ಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಆ ದೇವರುಗಳು ಅವರಿಗೆ ಸಹಾಯ ಮಾಡುವುದಕ್ಕಾಗಿ. info
التفاسير:

external-link copy
75 : 36

لَا یَسْتَطِیْعُوْنَ نَصْرَهُمْ وَهُمْ لَهُمْ جُنْدٌ مُّحْضَرُوْنَ ۟

ಆದರೆ ಅವರಿಗೆ ಸಹಾಯ ಮಾಡಲು ಆ ದೇವರುಗಳಿಗೆ ಸಾಧ್ಯವಿಲ್ಲ. (ಆದರೂ) ಅವರು ಆ ದೇವರುಗಳಿಗಿರುವ ಸನ್ನದ್ಧ ಸೈನ್ಯವಾಗಿ ಬಿಟ್ಟಿದ್ದಾರೆ. info
التفاسير:

external-link copy
76 : 36

فَلَا یَحْزُنْكَ قَوْلُهُمْ ۘ— اِنَّا نَعْلَمُ مَا یُسِرُّوْنَ وَمَا یُعْلِنُوْنَ ۟

ಆದ್ದರಿಂದ ಅವರು ಹೇಳುವ ಮಾತುಗಳು ನಿಮ್ಮನ್ನು ಬೇಸರಗೊಳಿಸದಿರಲಿ. ಅವರು ರಹಸ್ಯವಾಗಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ನಾವು ಖಂಡಿತ ತಿಳಿಯುತ್ತೇವೆ. info
التفاسير:

external-link copy
77 : 36

اَوَلَمْ یَرَ الْاِنْسَانُ اَنَّا خَلَقْنٰهُ مِنْ نُّطْفَةٍ فَاِذَا هُوَ خَصِیْمٌ مُّبِیْنٌ ۟

ಮನುಷ್ಯನು ನೋಡಿಲ್ಲವೇ? ನಾವು ಅವನನ್ನು ಒಂದು ವೀರ್ಯದಿಂದ ಸೃಷ್ಟಿಸಿದ್ದೇವೆಂದು? ನಂತರ ಇದ್ದಕ್ಕಿದ್ದಂತೆ ಅವನು ಸ್ಪಷ್ಟ ಎದುರಾಳಿಯಾಗಿ ಬಿಟ್ಟಿದ್ದಾನೆ. info
التفاسير:

external-link copy
78 : 36

وَضَرَبَ لَنَا مَثَلًا وَّنَسِیَ خَلْقَهٗ ؕ— قَالَ مَنْ یُّحْیِ الْعِظَامَ وَهِیَ رَمِیْمٌ ۟

ಅವನು ನಮಗೆ ಒಂದು ಉದಾಹರಣೆಯನ್ನು ತಿಳಿಸುತ್ತಾನೆ. ಆದರೆ ಸ್ವತಃ ತನ್ನ ಸೃಷ್ಟಿಯನ್ನೇ ಅವನು ಮರೆತು ಬಿಟ್ಟಿದ್ದಾನೆ. ಅವನು ಕೇಳುತ್ತಾನೆ: “ಕೊಳೆತ ಮೂಳೆಗಳಿಗೆ ಜೀವ ನೀಡುವುದು ಯಾರು?” info
التفاسير:

external-link copy
79 : 36

قُلْ یُحْیِیْهَا الَّذِیْۤ اَنْشَاَهَاۤ اَوَّلَ مَرَّةٍ ؕ— وَهُوَ بِكُلِّ خَلْقٍ عَلِیْمُ ۟ۙ

ಹೇಳಿರಿ: “ಅದನ್ನು ಪ್ರಥಮ ಬಾರಿ ಸೃಷ್ಟಿಸಿದವನೇ ಅದಕ್ಕೆ ಜೀವವನ್ನು ನೀಡುತ್ತಾನೆ. ಅವನು ಎಲ್ಲಾ ಸೃಷ್ಟಿಗಳ ಬಗ್ಗೆ ಸ್ಪಷ್ಟ ಜ್ಞಾನವುಳ್ಳವನಾಗಿದ್ದಾನೆ.” info
التفاسير:

external-link copy
80 : 36

١لَّذِیْ جَعَلَ لَكُمْ مِّنَ الشَّجَرِ الْاَخْضَرِ نَارًا فَاِذَاۤ اَنْتُمْ مِّنْهُ تُوْقِدُوْنَ ۟

ಅವನು ಯಾರೆಂದರೆ, ನಿಮಗೆ ಹಸಿರು ಮರದಿಂದ ಬೆಂಕಿಯನ್ನು ನಿರ್ಮಿಸಿ ಕೊಟ್ಟವನು. ಆಗ ಅಗೋ! ನೀವು ಅದರಿಂದ ಬೆಂಕಿ ಉರಿಸುತ್ತೀರಿ. info
التفاسير:

external-link copy
81 : 36

اَوَلَیْسَ الَّذِیْ خَلَقَ السَّمٰوٰتِ وَالْاَرْضَ بِقٰدِرٍ عَلٰۤی اَنْ یَّخْلُقَ مِثْلَهُمْ ؔؕ— بَلٰی ۗ— وَهُوَ الْخَلّٰقُ الْعَلِیْمُ ۟

ಭೂಮ್ಯಾಕಾಶಗಳನ್ನು ಸೃಷ್ಟಿಸಿದವನಿಗೆ ಅವರಂತಿರುವ ಮನುಷ್ಯರನ್ನು ಸೃಷ್ಟಿಸುವ ಸಾಮರ್ಥ್ಯವಿಲ್ಲವೇ? ಹೌದು (ಖಂಡಿತ ಸಾಮರ್ಥ್ಯವಿದೆ)! ಅವನು ಎಲ್ಲವನ್ನು ಸೃಷ್ಟಿಸುವವನು ಮತ್ತು ಸರ್ವಜ್ಞನಾಗಿದ್ದಾನೆ. info
التفاسير:

external-link copy
82 : 36

اِنَّمَاۤ اَمْرُهٗۤ اِذَاۤ اَرَادَ شَیْـًٔا اَنْ یَّقُوْلَ لَهٗ كُنْ فَیَكُوْنُ ۟

ಅವನು ಯಾವುದೇ ವಸ್ತುವನ್ನು ಬಯಸಿದರೆ, ಅದಕ್ಕೆ “ಉಂಟಾಗು” ಎಂಬ ಆಜ್ಞೆಯನ್ನು ಮಾತ್ರ ನೀಡುತ್ತಾನೆ. ತಕ್ಷಣ ಅದು ಉಂಟಾಗುತ್ತದೆ! info
التفاسير:

external-link copy
83 : 36

فَسُبْحٰنَ الَّذِیْ بِیَدِهٖ مَلَكُوْتُ كُلِّ شَیْءٍ وَّاِلَیْهِ تُرْجَعُوْنَ ۟۠

ಎಲ್ಲ ವಸ್ತುಗಳ ಸಾರ್ವಭೌಮತ್ವವು ಯಾರ ಕೈಯ್ಯಲ್ಲಿದೆಯೋ ಅವನು ಪರಮ ಪರಿಶುದ್ಧನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು. info
التفاسير: