ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
55 : 36

اِنَّ اَصْحٰبَ الْجَنَّةِ الْیَوْمَ فِیْ شُغُلٍ فٰكِهُوْنَ ۟ۚ

ನಿಶ್ಚಯವಾಗಿಯೂ ಅಂದು ಸ್ವರ್ಗವಾಸಿಗಳು (ಆನಂದದಾಯಕ) ಕೆಲಸ-ಕಾರ್ಯಗಳಲ್ಲಿ ನಿರತರಾಗಿರುವರು. info
التفاسير:

external-link copy
56 : 36

هُمْ وَاَزْوَاجُهُمْ فِیْ ظِلٰلٍ عَلَی الْاَرَآىِٕكِ مُتَّكِـُٔوْنَ ۟ۚ

ಅವರು ಮತ್ತು ಅವರ ಮಡದಿಯರು ನೆರಳುಗಳಲ್ಲಿ ಮಂಚಗಳ ಮೇಲೆ ಒರಗಿ ಕುಳಿತಿರುವರು. info
التفاسير:

external-link copy
57 : 36

لَهُمْ فِیْهَا فَاكِهَةٌ وَّلَهُمْ مَّا یَدَّعُوْنَ ۟ۚ

ಅಲ್ಲಿ ಅವರಿಗೆ ಅನೇಕ ತರಹದ ಹಣ್ಣು-ಹಂಪಲುಗಳಿರುವುವು. ಅವರು ಕೇಳುವುದೆಲ್ಲವೂ ಅಲ್ಲಿ ಅವರಿಗೆ ದೊರೆಯುವುದು. info
التفاسير:

external-link copy
58 : 36

سَلٰمٌ ۫— قَوْلًا مِّنْ رَّبٍّ رَّحِیْمٍ ۟

ಕರುಣಾನಿಧಿಯಾದ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವರಿಗೆ ಸಲಾಂ ಹೇಳಲಾಗುವುದು. info
التفاسير:

external-link copy
59 : 36

وَامْتَازُوا الْیَوْمَ اَیُّهَا الْمُجْرِمُوْنَ ۟

“ಅಪರಾಧಿಗಳೇ! ಇಂದು ನೀವು ಬೇರ್ಪಟ್ಟು ನಿಲ್ಲಿರಿ” (ಎಂದು ಘೋಷಿಸಲಾಗುವುದು). info
التفاسير:

external-link copy
60 : 36

اَلَمْ اَعْهَدْ اِلَیْكُمْ یٰبَنِیْۤ اٰدَمَ اَنْ لَّا تَعْبُدُوا الشَّیْطٰنَ ۚ— اِنَّهٗ لَكُمْ عَدُوٌّ مُّبِیْنٌ ۟ۙ

ಓ ಆದಮ್ ಸಂತತಿಗಳೇ! ನೀವು ಶೈತಾನನನ್ನು ಆರಾಧಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಸ್ಪಷ್ಟ ವೈರಿಯಾಗಿದ್ದಾನೆ ಎಂದು ನಾನು ನಿಮಗೆ ಆದೇಶಿಸಿರಲಿಲ್ಲವೇ? info
التفاسير:

external-link copy
61 : 36

وَّاَنِ اعْبُدُوْنِیْ ؔؕ— هٰذَا صِرَاطٌ مُّسْتَقِیْمٌ ۟

ನನ್ನನ್ನು ಮಾತ್ರ ಆರಾಧಿಸಿರಿ. ಇದೇ ನೇರ ಮಾರ್ಗ ಎಂದು. info
التفاسير:

external-link copy
62 : 36

وَلَقَدْ اَضَلَّ مِنْكُمْ جِبِلًّا كَثِیْرًا ؕ— اَفَلَمْ تَكُوْنُوْا تَعْقِلُوْنَ ۟

ನಿಶ್ಚಯವಾಗಿಯೂ ನಿಮ್ಮಲ್ಲಿ ಸೇರಿದ ಎಷ್ಟೋ ಜನರನ್ನು ಅವನು ದಾರಿತಪ್ಪಿಸಿದ್ದಾನೆ. ಆದರೂ ನೀವು ಅರ್ಥಮಾಡಿಕೊಳ್ಳುವುದಿಲ್ಲವೇ? info
التفاسير:

external-link copy
63 : 36

هٰذِهٖ جَهَنَّمُ الَّتِیْ كُنْتُمْ تُوْعَدُوْنَ ۟

ಇದೇ ನಿಮಗೆ ಎಚ್ಚರಿಕೆ ನೀಡಲಾದ ಆ ನರಕಾಗ್ನಿ! info
التفاسير:

external-link copy
64 : 36

اِصْلَوْهَا الْیَوْمَ بِمَا كُنْتُمْ تَكْفُرُوْنَ ۟

ನಿಮ್ಮ ಸತ್ಯನಿಷೇಧದ ಪ್ರತಿಫಲ ಪಡೆಯಲು ನೀವು ಇಂದು ಅದನ್ನು ಪ್ರವೇಶಿಸಿರಿ. info
التفاسير:

external-link copy
65 : 36

اَلْیَوْمَ نَخْتِمُ عَلٰۤی اَفْوَاهِهِمْ وَتُكَلِّمُنَاۤ اَیْدِیْهِمْ وَتَشْهَدُ اَرْجُلُهُمْ بِمَا كَانُوْا یَكْسِبُوْنَ ۟

ಇಂದು ನಾವು ಅವರ ಬಾಯಿಗಳಿಗೆ ಮೊಹರು ಹಾಕುವೆವು, ಅವರ ಕೈಗಳು ನಮ್ಮೊಡನೆ ಮಾತನಾಡುವುವು ಮತ್ತು ಅವರ ಕಾಲುಗಳು ಅವರು ಮಾಡಿದ ದುಷ್ಕರ್ಮಗಳಿಗೆ ಸಾಕ್ಷಿ ಹೇಳುವುವು. info
التفاسير:

external-link copy
66 : 36

وَلَوْ نَشَآءُ لَطَمَسْنَا عَلٰۤی اَعْیُنِهِمْ فَاسْتَبَقُوا الصِّرَاطَ فَاَنّٰی یُبْصِرُوْنَ ۟

ನಾವು ಬಯಸಿದರೆ ಅವರ ಕಣ್ಣುಗಳನ್ನು ಕುರುಡಾಗಿಸುವೆವು. ಆದರೂ ಅವರು ಮಾರ್ಗದ ಕಡೆಗೆ ಧಾವಿಸುವರು. ಆದರೆ ಅವರಿಗೆ ನೋಡಲು ಸಾಧ್ಯವಾಗುವುದು ಹೇಗೆ? info
التفاسير:

external-link copy
67 : 36

وَلَوْ نَشَآءُ لَمَسَخْنٰهُمْ عَلٰی مَكَانَتِهِمْ فَمَا اسْتَطَاعُوْا مُضِیًّا وَّلَا یَرْجِعُوْنَ ۟۠

ನಾವು ಬಯಸಿದರೆ ಅವರು ನಿಂತ ಸ್ಥಳದಲ್ಲಿಯೇ ಅವರ ರೂಪವನ್ನು ವಿರೂಪಗೊಳಿಸುವೆವು. ಆಗ ಅವರಿಗೆ ಮುಂದಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹಿಂದಕ್ಕೆ ಮರಳಲೂ ಸಾಧ್ಯವಾಗುವುದಿಲ್ಲ. info
التفاسير:

external-link copy
68 : 36

وَمَنْ نُّعَمِّرْهُ نُنَكِّسْهُ فِی الْخَلْقِ ؕ— اَفَلَا یَعْقِلُوْنَ ۟

ನಾವು ಯಾರಿಗೆ ದೀರ್ಘಾಯುಷ್ಯ ನೀಡುತ್ತೇವೆಯೋ ಅವನ ಸೃಷ್ಟಿಯನ್ನು ನಾವು ತಿರುಗುಮುರುಗು ಮಾಡುತ್ತೇವೆ. ಆದರೂ ಅವರು ಅರ್ಥಮಾಡಿಕೊಳ್ಳುವುದಿಲ್ಲವೇ? info
التفاسير:

external-link copy
69 : 36

وَمَا عَلَّمْنٰهُ الشِّعْرَ وَمَا یَنْۢبَغِیْ لَهٗ ؕ— اِنْ هُوَ اِلَّا ذِكْرٌ وَّقُرْاٰنٌ مُّبِیْنٌ ۟ۙ

ನಾವು ಅವರಿಗೆ (ಪ್ರವಾದಿಗೆ) ಕಾವ್ಯವನ್ನು ಕಲಿಸಿಕೊಟ್ಟಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಕೇವಲ ಒಂದು ಉಪದೇಶ ಮತ್ತು ಸ್ಪಷ್ಟ ಕುರ್‌ಆನ್ ಆಗಿದೆ. info
التفاسير:

external-link copy
70 : 36

لِّیُنْذِرَ مَنْ كَانَ حَیًّا وَّیَحِقَّ الْقَوْلُ عَلَی الْكٰفِرِیْنَ ۟

ಇದು ಜೀವಂತವಿರುವವರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಮತ್ತು ಸತ್ಯನಿಷೇಧಿಗಳ ಮೇಲೆ (ಶಿಕ್ಷೆಯ) ವಚನವು ಖಾತ್ರಿಯಾಗುವುದಕ್ಕಾಗಿದೆ. info
التفاسير: