ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
12 : 19

یٰیَحْیٰی خُذِ الْكِتٰبَ بِقُوَّةٍ ؕ— وَاٰتَیْنٰهُ الْحُكْمَ صَبِیًّا ۟ۙ

“ಓ ಯಹ್ಯಾ! ಗ್ರಂಥವನ್ನು ಬಿಗಿಯಾಗಿ ಹಿಡಿದುಕೊಳ್ಳಿ.” ನಾವು ಅವರಿಗೆ ಬಾಲ್ಯದಲ್ಲೇ ವಿವೇಕವನ್ನು ನೀಡಿದೆವು. info
التفاسير:

external-link copy
13 : 19

وَّحَنَانًا مِّنْ لَّدُنَّا وَزَكٰوةً ؕ— وَكَانَ تَقِیًّا ۟ۙ

ಅವರಿಗೆ ನಮ್ಮ ಕಡೆಯ ವಾತ್ಸಲ್ಯ ಮತ್ತು ಪರಿಶುದ್ಧತೆಯನ್ನೂ ನೀಡಿದೆವು. ಅವರು ದೇವಭಯವುಳ್ಳವರಾಗಿದ್ದರು. info
التفاسير:

external-link copy
14 : 19

وَّبَرًّا بِوَالِدَیْهِ وَلَمْ یَكُنْ جَبَّارًا عَصِیًّا ۟

ಅವರು ತಂದೆ-ತಾಯಿಗೆ ಒಳಿತು ಮಾಡುತ್ತಿದ್ದರು. ಅವರು ನಿರಂಕುಶರೋ ವಿಧೇಯತೆಯಿಲ್ಲದವರೋ ಆಗಿರಲಿಲ್ಲ. info
التفاسير:

external-link copy
15 : 19

وَسَلٰمٌ عَلَیْهِ یَوْمَ وُلِدَ وَیَوْمَ یَمُوْتُ وَیَوْمَ یُبْعَثُ حَیًّا ۟۠

ಅವರು ಜನಿಸಿದ ದಿನ, ನಿಧನವಾಗುವ ದಿನ ಮತ್ತು ಅವರಿಗೆ ಪುನಃ ಜೀವ ನೀಡಿ ಎಬ್ಬಿಸಲಾಗುವ ದಿನ ಅವರ ಮೇಲೆ ಶಾಂತಿಯಿರುವುದು. info
التفاسير:

external-link copy
16 : 19

وَاذْكُرْ فِی الْكِتٰبِ مَرْیَمَ ۘ— اِذِ انْتَبَذَتْ مِنْ اَهْلِهَا مَكَانًا شَرْقِیًّا ۟ۙ

ಈ ಗ್ರಂಥದಲ್ಲಿ ಮರ್ಯಮರ ಬಗ್ಗೆ ತಿಳಿಸಿರಿ. ಅವರು ತಮ್ಮ ಮನೆಯವರಿಂದ ದೂರವಾಗಿ ಪೂರ್ವದಲ್ಲಿರುವ ಒಂದು ಸ್ಥಳಕ್ಕೆ ತೆರಳಿದ ಸಂದರ್ಭ. info
التفاسير:

external-link copy
17 : 19

فَاتَّخَذَتْ مِنْ دُوْنِهِمْ حِجَابًا ۫— فَاَرْسَلْنَاۤ اِلَیْهَا رُوْحَنَا فَتَمَثَّلَ لَهَا بَشَرًا سَوِیًّا ۟

ಜನರು ನೋಡದಿರಲು ಅವರು ಒಂದು ಪರದೆಯನ್ನು ಹಾಕಿಕೊಂಡರು. ನಂತರ ನಾವು ಅವರ ಬಳಿಗೆ ನಮ್ಮ ಆತ್ಮವನ್ನು (ಜಿಬ್ರೀಲರನ್ನು) ಕಳುಹಿಸಿದೆವು. ಜಿಬ್ರೀಲ್ ಅವರ ಮುಂದೆ ಪೂರ್ಣ ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು. info
التفاسير:

external-link copy
18 : 19

قَالَتْ اِنِّیْۤ اَعُوْذُ بِالرَّحْمٰنِ مِنْكَ اِنْ كُنْتَ تَقِیًّا ۟

ಮರ್ಯಮ್ ಹೇಳಿದರು: “ನಾನು ನಿನ್ನ ಕೆಡುಕಿನಿಂದ ಪರಮ ದಯಾಮಯನಲ್ಲಿ (ಅಲ್ಲಾಹನಲ್ಲಿ) ಅಭಯಕೋರುತ್ತೇನೆ. ನೀನು ದೇವಭಯವುಳ್ಳವನಾದರೆ (ನನ್ನಿಂದ ದೂರವಾಗು).”[1] info

[1] ಮನುಷ್ಯರೂಪದಲ್ಲಿ ಬಂದದ್ದು ಜಿಬ್ರೀಲ್ ಎಂದು ಮರ್ಯಮರಿಗೆ ತಿಳಿಯಲಿಲ್ಲ.

التفاسير:

external-link copy
19 : 19

قَالَ اِنَّمَاۤ اَنَا رَسُوْلُ رَبِّكِ ۖۗ— لِاَهَبَ لَكِ غُلٰمًا زَكِیًّا ۟

ಜಿಬ್ರೀಲ್ ಹೇಳಿದರು: “ನಾನು ನಿಮ್ಮ ಪರಿಪಾಲಕನ (ಅಲ್ಲಾಹನ) ದೂತನಾಗಿದ್ದೇನೆ. ನಿಮಗೆ ಒಬ್ಬ ಪರಿಶುದ್ಧ ಪುತ್ರನನ್ನು ನೀಡಲು ನಾನು ಬಂದಿದ್ದೇನೆ.” info
التفاسير:

external-link copy
20 : 19

قَالَتْ اَنّٰی یَكُوْنُ لِیْ غُلٰمٌ وَّلَمْ یَمْسَسْنِیْ بَشَرٌ وَّلَمْ اَكُ بَغِیًّا ۟

ಮರ್ಯಮ್ ಹೇಳಿದರು: “ನನಗೆ ಪುತ್ರ ಉಂಟಾಗುವುದು ಹೇಗೆ? ಯಾವುದೇ ಮನುಷ್ಯನು ನನ್ನನ್ನು ಮುಟ್ಟಿಲ್ಲ. ನಾನು ಶೀಲಗೆಟ್ಟವಳೂ ಅಲ್ಲ.” info
التفاسير:

external-link copy
21 : 19

قَالَ كَذٰلِكِ ۚ— قَالَ رَبُّكِ هُوَ عَلَیَّ هَیِّنٌ ۚ— وَلِنَجْعَلَهٗۤ اٰیَةً لِّلنَّاسِ وَرَحْمَةً مِّنَّا ۚ— وَكَانَ اَمْرًا مَّقْضِیًّا ۟

ಜಿಬ್ರೀಲ್ ಹೇಳಿದರು: “ಸಂಗತಿ ನೀವು ಹೇಳಿದಂತೆಯೇ ಆಗಿದೆ. ಆದರೆ, ಅದು ನನಗೆ ಬಹಳ ಸುಲಭವಾಗಿದೆಯೆಂದು ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳುತ್ತಾನೆ. ನಾವು ಆ ಮಗುವನ್ನು ಮನುಷ್ಯರಿಗೆ ಒಂದು ದೃಷ್ಟಾಂತವಾಗಿ ಮಾಡಲು ಬಯಸುತ್ತೇವೆ. ಆ ಮಗು ನಮ್ಮ ಕಡೆಯ ವಿಶೇಷ ದಯೆಯಾಗಿದ್ದಾರೆ. ಇದು ತೀರ್ಮಾನಿಸಲಾದ ಸಂಗತಿಯಾಗಿದೆ.” info
التفاسير:

external-link copy
22 : 19

فَحَمَلَتْهُ فَانْتَبَذَتْ بِهٖ مَكَانًا قَصِیًّا ۟

ಮರ್ಯಮ್ ಮಗುವಿನ ಗರ್ಭ ಧರಿಸಿದರು. ನಂತರ ಆ ಗರ್ಭದೊಂದಿಗೆ ವಿದೂರ ಸ್ಥಳದಲ್ಲಿ ವಾಸಿಸತೊಡಗಿದರು. info
التفاسير:

external-link copy
23 : 19

فَاَجَآءَهَا الْمَخَاضُ اِلٰی جِذْعِ النَّخْلَةِ ۚ— قَالَتْ یٰلَیْتَنِیْ مِتُّ قَبْلَ هٰذَا وَكُنْتُ نَسْیًا مَّنْسِیًّا ۟

ನಂತರ ಹೆರಿಗೆ ನೋವು ಅವರನ್ನು ಖರ್ಜೂರದ ಮರದ ಬಳಿಗೆ ತಲುಪಿಸಿತು. ಅವರು ಹೇಳಿದರು: “ಇದಕ್ಕಿಂತ ಮೊದಲೇ ನಾನು ತೀರಿ ಹೋಗಿದ್ದರೆ ಮತ್ತು ಜನರ ನೆನಪಿನಿಂದ ನಾನು ಸಂಪೂರ್ಣ ಮಾಸಿ ಹೋಗಿದ್ದರೆ ಎಷ್ಟು ಚೆನ್ನಾಗಿತ್ತು!”[1] info

[1] ನಾನು ಈ ಮಗುವನ್ನು ಹೆತ್ತರೆ ಜನರಿಗೆ ಏನು ಉತ್ತರ ಕೊಡಲಿ? ನನ್ನ ಮಾತನ್ನು ಅವರು ನಂಬುವರೇ? ಅವರನ್ನು ನಾನು ಹೇಗೆ ಸಮಾಧಾನಪಡಿಸಲಿ? ಎಂಬ ಚಿಂತೆಯಿಂದ ಅವರು ಈ ಮಾತು ಹೇಳಿದ್ದರು.

التفاسير:

external-link copy
24 : 19

فَنَادٰىهَا مِنْ تَحْتِهَاۤ اَلَّا تَحْزَنِیْ قَدْ جَعَلَ رَبُّكِ تَحْتَكِ سَرِیًّا ۟

ಆಗ ಮರ್ಯಮರ ತಳಭಾಗದಿಂದ ಒಂದು ಕೂಗು ಕೇಳಿಸಿತು: “ಬೇಸರ ಪಡಬೇಡಿ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮ ತಳಭಾಗದಲ್ಲಿ ಒಂದು ತೊರೆಯನ್ನು ಹರಿಸಿದ್ದಾನೆ. info
التفاسير:

external-link copy
25 : 19

وَهُزِّیْۤ اِلَیْكِ بِجِذْعِ النَّخْلَةِ تُسٰقِطْ عَلَیْكِ رُطَبًا جَنِیًّا ۟ؗ

ಖರ್ಜೂರದ ಮರವನ್ನು ನಿಮ್ಮ ಕಡೆಗೆ ಎಳೆದು ಕುಲುಕಿರಿ. ಆಗ ಅದು ನಿಮಗೆ ಹಣ್ಣಾದ ತಾಜಾ ಖರ್ಜೂರವನ್ನು ಬೀಳಿಸುತ್ತದೆ. info
التفاسير: