ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
118 : 9

وَّعَلَی الثَّلٰثَةِ الَّذِیْنَ خُلِّفُوْا ؕ— حَتّٰۤی اِذَا ضَاقَتْ عَلَیْهِمُ الْاَرْضُ بِمَا رَحُبَتْ وَضَاقَتْ عَلَیْهِمْ اَنْفُسُهُمْ وَظَنُّوْۤا اَنْ لَّا مَلْجَاَ مِنَ اللّٰهِ اِلَّاۤ اِلَیْهِ ؕ— ثُمَّ تَابَ عَلَیْهِمْ لِیَتُوْبُوْا ؕ— اِنَّ اللّٰهَ هُوَ التَّوَّابُ الرَّحِیْمُ ۟۠

ಮತ್ತು ವಿಷಯವನ್ನು ಮುಂದೂಡಲಾಗಿದ್ದ ಆ ಮೂವರು ವ್ಯಕ್ತಿಗಳನ್ನು ಕ್ಷಮಿಸಿದನು. ಭೂಮಿಯು ವಿಶಾಲವಾಗಿದ್ದರು ಅವರ ಪಾಲಿಗೆ ಇಕ್ಕಟ್ಟಾಗಿ ಮಾರ್ಪಟ್ಟಿತು. ಅವರ ಜೀವಗಳೇ ಅವರ ಮೇಲೆ ಹೊರೆಯಾಗಿ ಸಂಕುಚಿತವಾಗಿ ಬಿಟ್ಟವು. ಮತ್ತು ಅವರು ಅಲ್ಲಾಹನ ಹೊರತು ಎಲ್ಲೂ ರಕ್ಷಣೆ ಸಿಗಲಾರದೆಂದು ತಿಳಿದುಕೊಂಡರು. ಅನಂತರ ಅವನು ಅವರ ಸ್ಥಿತಿಯೆಡೆಗೆ ಪಶ್ಚಾತ್ತಾಪ ಪಟ್ಟುಕೊಳ್ಳಲೆಂದು ಗಮನಹರಿಸಿದನು. ನಿಸ್ಸಂಶಯವಾಗಿಯೂ ಅಲ್ಲಾಹನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
119 : 9

یٰۤاَیُّهَا الَّذِیْنَ اٰمَنُوا اتَّقُوا اللّٰهَ وَكُوْنُوْا مَعَ الصّٰدِقِیْنَ ۟

ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯಸಂಧರ ಜೊತೆಗೆ ಸೇರಿಕೊಳ್ಳಿರಿ. info
التفاسير:

external-link copy
120 : 9

مَا كَانَ لِاَهْلِ الْمَدِیْنَةِ وَمَنْ حَوْلَهُمْ مِّنَ الْاَعْرَابِ اَنْ یَّتَخَلَّفُوْا عَنْ رَّسُوْلِ اللّٰهِ وَلَا یَرْغَبُوْا بِاَنْفُسِهِمْ عَنْ نَّفْسِهٖ ؕ— ذٰلِكَ بِاَنَّهُمْ لَا یُصِیْبُهُمْ ظَمَاٌ وَّلَا نَصَبٌ وَّلَا مَخْمَصَةٌ فِیْ سَبِیْلِ اللّٰهِ وَلَا یَطَـُٔوْنَ مَوْطِئًا یَّغِیْظُ الْكُفَّارَ وَلَا یَنَالُوْنَ مِنْ عَدُوٍّ نَّیْلًا اِلَّا كُتِبَ لَهُمْ بِهٖ عَمَلٌ صَالِحٌ ؕ— اِنَّ اللّٰهَ لَا یُضِیْعُ اَجْرَ الْمُحْسِنِیْنَ ۟ۙ

ಮದೀನ ನಿವಾಸಿಗಳಿಗಾಗಲೀ, ಅವರ ಸುತ್ತುಮುತ್ತಲಲ್ಲಿರುವ ಗ್ರಾಮೀಣವಾಸಿಗಳಾಗಲಿ ಅಲ್ಲಾಹನ ಸಂದೇಶವಾಕರನ್ನುಬಿಟ್ಟು ಹಿಂದುಳಿದು ಬಿಡುವುದು ಮತ್ತು ತಮ್ಮ ಪ್ರಾಣವನ್ನು ಅವರ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯವಾಗಿ ತಿಳಿದುಕೊಳ್ಳುವುದು ಶೋಭಿಸುವುದಿಲ್ಲ. ಏಕೆಂದರೆ ಅಲ್ಲಾಹನ ಮಾರ್ಗದಲ್ಲಿ ಅವರಿಗುಂಟಾಗುವ ದಾಹ, ದಣಿವು, ಹಸಿವು ಮತ್ತು ಸತ್ಯನಿಷೇಧಿಗಳನ್ನು ಕೆರಳಿಸುವಂತಹ ಯಾವುದೇ ಹೆಜ್ಜೆಯನ್ನು ಮುಂದಿಡುವುದು ಮತ್ತು ಶತ್ರುಗಳ ಯಾವುದೇ ಸುದ್ದಿಯನ್ನು ಪಡೆದುಕೊಳ್ಳುವುದು, ಇವುಗಳೆಲ್ಲದರ ಮೇಲೆ ಅವರ ಹೆಸರಲ್ಲಿ (ಒಂದೊAದು)ಪುಣ್ಯ ಕರ್ಮವನ್ನು ಬರೆದಿಡಲಾಗುವುದು. ಖಂಡಿತವಾಗಿಯೂ ಅಲ್ಲಾಹನು ಏಕನಿಷ್ಠರ ಪ್ರತಿಫಲವನ್ನು ವ್ಯರ್ಥ ಗೊಳಿಸುವುದಿಲ್ಲ. info
التفاسير:

external-link copy
121 : 9

وَلَا یُنْفِقُوْنَ نَفَقَةً صَغِیْرَةً وَّلَا كَبِیْرَةً وَّلَا یَقْطَعُوْنَ وَادِیًا اِلَّا كُتِبَ لَهُمْ لِیَجْزِیَهُمُ اللّٰهُ اَحْسَنَ مَا كَانُوْا یَعْمَلُوْنَ ۟

ಮತ್ತು ಅವರು ಮಾಡಿದಂತಹ ಹೆಚ್ಚು ಕಡಿಮೆ ಅಥವಾ ಯಾವುದೇ ಖರ್ಚಾಗಲೀ ಮತ್ತು ಅವರು ಯಾವುದೇ ಕಣಿವೆಯನ್ನು ದಾಟಿ ಹೋಗಲಿ; ಅವೆಲ್ಲವೂ ಅವರ ಹೆಸರಲ್ಲಿ ಬರೆಯಲ್ಪಟ್ಟಿದೆ ಇದೇಕೆಂದರೆ ಅಲ್ಲಾಹನು ಅವರ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡಲೆಂದಾಗಿದೆ. info
التفاسير:

external-link copy
122 : 9

وَمَا كَانَ الْمُؤْمِنُوْنَ لِیَنْفِرُوْا كَآفَّةً ؕ— فَلَوْلَا نَفَرَ مِنْ كُلِّ فِرْقَةٍ مِّنْهُمْ طَآىِٕفَةٌ لِّیَتَفَقَّهُوْا فِی الدِّیْنِ وَلِیُنْذِرُوْا قَوْمَهُمْ اِذَا رَجَعُوْۤا اِلَیْهِمْ لَعَلَّهُمْ یَحْذَرُوْنَ ۟۠

ಮತ್ತು ಸತ್ಯವಿಶ್ವಾಸಿಗಳೆಲ್ಲರೂ ಒಟ್ಟಾಗಿ ಯುದ್ಧಕ್ಕೆ ಹೊರಡುವುದು ಯೋಗ್ಯವಲ್ಲ. ಆದರೆ ಪ್ರತಿಯೊಂದು ತಂಡದಿAದ ಒಂದು ಗುಂಪು ಧರ್ಮಜ್ಞಾನವನ್ನು ಪಡೆದು ತಮ್ಮ ಜನರೆಡೆಗೆ ಮರಳಿ ಅವರನ್ನು ಕೆಡುಕಿನಿಂದ ರಕ್ಷಿಸಿಕೊಳ್ಳಲು ಎಚ್ಚರಿಸಲಿಕ್ಕೆ ಹೊರಡುವುದಿಲ್ಲವೇಕೆ? ಹೀಗೆ ಅವರು ಭಯಪಟ್ಟುಕೊಳ್ಳಬಹುದೆಂಬುದಾಗಿದೆ. info
التفاسير: