ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
120 : 9

مَا كَانَ لِاَهْلِ الْمَدِیْنَةِ وَمَنْ حَوْلَهُمْ مِّنَ الْاَعْرَابِ اَنْ یَّتَخَلَّفُوْا عَنْ رَّسُوْلِ اللّٰهِ وَلَا یَرْغَبُوْا بِاَنْفُسِهِمْ عَنْ نَّفْسِهٖ ؕ— ذٰلِكَ بِاَنَّهُمْ لَا یُصِیْبُهُمْ ظَمَاٌ وَّلَا نَصَبٌ وَّلَا مَخْمَصَةٌ فِیْ سَبِیْلِ اللّٰهِ وَلَا یَطَـُٔوْنَ مَوْطِئًا یَّغِیْظُ الْكُفَّارَ وَلَا یَنَالُوْنَ مِنْ عَدُوٍّ نَّیْلًا اِلَّا كُتِبَ لَهُمْ بِهٖ عَمَلٌ صَالِحٌ ؕ— اِنَّ اللّٰهَ لَا یُضِیْعُ اَجْرَ الْمُحْسِنِیْنَ ۟ۙ

ಮದೀನ ನಿವಾಸಿಗಳಿಗಾಗಲೀ, ಅವರ ಸುತ್ತುಮುತ್ತಲಲ್ಲಿರುವ ಗ್ರಾಮೀಣವಾಸಿಗಳಾಗಲಿ ಅಲ್ಲಾಹನ ಸಂದೇಶವಾಕರನ್ನುಬಿಟ್ಟು ಹಿಂದುಳಿದು ಬಿಡುವುದು ಮತ್ತು ತಮ್ಮ ಪ್ರಾಣವನ್ನು ಅವರ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯವಾಗಿ ತಿಳಿದುಕೊಳ್ಳುವುದು ಶೋಭಿಸುವುದಿಲ್ಲ. ಏಕೆಂದರೆ ಅಲ್ಲಾಹನ ಮಾರ್ಗದಲ್ಲಿ ಅವರಿಗುಂಟಾಗುವ ದಾಹ, ದಣಿವು, ಹಸಿವು ಮತ್ತು ಸತ್ಯನಿಷೇಧಿಗಳನ್ನು ಕೆರಳಿಸುವಂತಹ ಯಾವುದೇ ಹೆಜ್ಜೆಯನ್ನು ಮುಂದಿಡುವುದು ಮತ್ತು ಶತ್ರುಗಳ ಯಾವುದೇ ಸುದ್ದಿಯನ್ನು ಪಡೆದುಕೊಳ್ಳುವುದು, ಇವುಗಳೆಲ್ಲದರ ಮೇಲೆ ಅವರ ಹೆಸರಲ್ಲಿ (ಒಂದೊAದು)ಪುಣ್ಯ ಕರ್ಮವನ್ನು ಬರೆದಿಡಲಾಗುವುದು. ಖಂಡಿತವಾಗಿಯೂ ಅಲ್ಲಾಹನು ಏಕನಿಷ್ಠರ ಪ್ರತಿಫಲವನ್ನು ವ್ಯರ್ಥ ಗೊಳಿಸುವುದಿಲ್ಲ. info
التفاسير: