ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
12 : 58

یٰۤاَیُّهَا الَّذِیْنَ اٰمَنُوْۤا اِذَا نَاجَیْتُمُ الرَّسُوْلَ فَقَدِّمُوْا بَیْنَ یَدَیْ نَجْوٰىكُمْ صَدَقَةً ؕ— ذٰلِكَ خَیْرٌ لَّكُمْ وَاَطْهَرُ ؕ— فَاِنْ لَّمْ تَجِدُوْا فَاِنَّ اللّٰهَ غَفُوْرٌ رَّحِیْمٌ ۟

ಓ ಸತ್ಯ ವಿಶ್ವಾಸಿಗಳೇ ನೀವು ಸಂದೇಶವಾಹಕರೊAದಿಗೆ ಗೂಢಾಲೋಚನೆ ನಡೆಸಲು ಇಚ್ಚಿಸಿದಾಗ ನೀವು ನಿಮ್ಮ ಗೂಢಾಲೋಚನೆಯ ಮೊದಲು ಏನಾದರೂ ದಾನವನ್ನು ನೀಡಿರಿ. ಇದು ನಿಮ್ಮ ಪಾಲಿಗೆ ಅತ್ಯುತ್ತಮವೂ ಅತಿ ಪರಿಶುದ್ಧವೂ ಆಗಿದೆ, ಇನ್ನು ನಿಮ್ಮ ಬಳಿಗೆ ಏನೂ ಇಲ್ಲದಿದ್ದರೆ ನಿಸ್ಸಂಶಯವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
13 : 58

ءَاَشْفَقْتُمْ اَنْ تُقَدِّمُوْا بَیْنَ یَدَیْ نَجْوٰىكُمْ صَدَقٰتٍ ؕ— فَاِذْ لَمْ تَفْعَلُوْا وَتَابَ اللّٰهُ عَلَیْكُمْ فَاَقِیْمُوا الصَّلٰوةَ وَاٰتُوا الزَّكٰوةَ وَاَطِیْعُوا اللّٰهَ وَرَسُوْلَهٗ ؕ— وَاللّٰهُ خَبِیْرٌ بِمَا تَعْمَلُوْنَ ۟۠

ಗೂಢಾಲೋಚನೆಯ ಮೊದಲು ದಾನವನ್ನು ನೀಡುವುದರಿಂದ ನೀವು ಭಯಪಟ್ಟಿರಾ ? ಇನ್ನು ನೀವು ಅದನ್ನು ಮಾಡದಿದ್ದಾಗ ಅಲ್ಲಾಹನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿಕೊಂಡನು. ಇನ್ನು ನೀವು ನಮಾಜ್ ಸಂಸ್ಥಾಪಿಸಿರಿ ಹಾಗೂ ಝಕಾತನ್ನು ಪಾವತಿಸಿರಿ ಮತ್ತು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಅನುಸರಿಸಿರಿ, ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು. info
التفاسير:

external-link copy
14 : 58

اَلَمْ تَرَ اِلَی الَّذِیْنَ تَوَلَّوْا قَوْمًا غَضِبَ اللّٰهُ عَلَیْهِمْ ؕ— مَا هُمْ مِّنْكُمْ وَلَا مِنْهُمْ ۙ— وَیَحْلِفُوْنَ عَلَی الْكَذِبِ وَهُمْ یَعْلَمُوْنَ ۟ۚ

ಅಲ್ಲಾಹನ ಕ್ರೋಧಕ್ಕೊಳಗಾಗಿರುವ ಒಂದು(ಯಹೂದಿ) ಸಮೂಹದೊಂದಿಗೆ ಮೈತ್ರಿ ಮಾಡಿಕೊಂಡ ಕಪಟ ವಿಶ್ವಾಸಿಗಳೆಡೆಗೆ ನೀವು ನೋಡಲಿಲ್ಲವೇ? ಅವರು ನಿಮ್ಮವರೂ ಅಲ್ಲ ಅಥವ ಅವರಕಡೆಯವರೂ ಅಲ್ಲ, ಅವರು ತಿಳಿದೂ ತಿಳಿದೂ ಸುಳ್ಳು ಆಣೆ ಹಾಕುತ್ತಾರೆ. info
التفاسير:

external-link copy
15 : 58

اَعَدَّ اللّٰهُ لَهُمْ عَذَابًا شَدِیْدًا ؕ— اِنَّهُمْ سَآءَ مَا كَانُوْا یَعْمَلُوْنَ ۟

ಅಲ್ಲಾಹನು ಅವರಿಗಾಗಿ ಕಠಿಣಯಾತನೆಯನ್ನು ಸಿದ್ಧಪಡಿಸಿಟ್ಟಿರುವನು. ನಿಜವಾಗಿಯೂ ಅವರು ಮಾಡುತ್ತಿರುವುದೆಲ್ಲವೂ ಅತಿ ನಿಕೃಷ್ಟವಾದುದು. info
التفاسير:

external-link copy
16 : 58

اِتَّخَذُوْۤا اَیْمَانَهُمْ جُنَّةً فَصَدُّوْا عَنْ سَبِیْلِ اللّٰهِ فَلَهُمْ عَذَابٌ مُّهِیْنٌ ۟

ಅವರು ತಮ್ಮ ಆಣೆಗಳನ್ನು ಗುರಾಣಿಯನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ, ಅವರಿಗೆ ಅಪಮಾನಕರ ಯಾತನೆ ಇದೆ. info
التفاسير:

external-link copy
17 : 58

لَنْ تُغْنِیَ عَنْهُمْ اَمْوَالُهُمْ وَلَاۤ اَوْلَادُهُمْ مِّنَ اللّٰهِ شَیْـًٔا ؕ— اُولٰٓىِٕكَ اَصْحٰبُ النَّارِ ؕ— هُمْ فِیْهَا خٰلِدُوْنَ ۟

ಅವರ ಸಂಪತ್ತುಗಳಾಗಲಿ ಅವರ ಸಂತಾನಗಳಾಗಲಿ ಅಲ್ಲಾಹನ ಶಿಕ್ಷೆಯಿಂದ ಸ್ವಲ್ಪವೂ ಪ್ರಯೋಜನವನ್ನು ನೀಡಲಾರವು. ಅವರು ನರಕವಾಸಿಗಳಾಗಿದ್ದಾರೆ ಮತ್ತು ಅದರಲ್ಲಿ ಅವರು ಶಾಶ್ವತವಾಗಿರುವರು. info
التفاسير:

external-link copy
18 : 58

یَوْمَ یَبْعَثُهُمُ اللّٰهُ جَمِیْعًا فَیَحْلِفُوْنَ لَهٗ كَمَا یَحْلِفُوْنَ لَكُمْ وَیَحْسَبُوْنَ اَنَّهُمْ عَلٰی شَیْءٍ ؕ— اَلَاۤ اِنَّهُمْ هُمُ الْكٰذِبُوْنَ ۟

ಅಲ್ಲಾಹನು ಅವರೆಲ್ಲರನ್ನೂ ಜೀವಂತಗೊಳಿಸಿ ಎಬ್ಬಿಸುವ ದಿನ ಅವರು ನಿಮ್ಮ ಮುಂದೆ ಆಣೆಹಾಕುವಂತೆ ಅಲ್ಲಾಹನ ಮುಂದೆಯೂ ಆಣೆ ಹಾಕಲಿದ್ದಾರೆ ಮತ್ತು ಅವರು ತಾವು ಯಾವುದೊ ಕಾರ್ಯ ಸಾಧಿಸಿಬಿಡುವೆವೆಂದು ಭಾವಿಸಿಕೊಳ್ಳುವರು ನಿಜವಾಗಿಯೂ ಅವರು ಸುಳ್ಳುಗಾರರಾಗಿದ್ದಾರೆ. info
التفاسير:

external-link copy
19 : 58

اِسْتَحْوَذَ عَلَیْهِمُ الشَّیْطٰنُ فَاَنْسٰىهُمْ ذِكْرَ اللّٰهِ ؕ— اُولٰٓىِٕكَ حِزْبُ الشَّیْطٰنِ ؕ— اَلَاۤ اِنَّ حِزْبَ الشَّیْطٰنِ هُمُ الْخٰسِرُوْنَ ۟

ಶೈತಾನನು ಅವರ ಮೇಲೆ ಹಿಡಿತವನ್ನು ಸಾಧಿಸಿದ್ದಾನೆ ಮತ್ತು ಅವರಿಂದ ಅಲ್ಲಾಹನ ಸ್ಮರಣೆಯನ್ನು ಮರೆಸಿದ್ದಾನೆ ಅವರು ಶೈತಾನನ ಪಕ್ಷದವರಾಗಿದ್ದಾರೆ ನಿಸ್ಸಂದೇಹವಾಗಿಯೂ ಶೈತಾನನ ಪಕ್ಷವೇ ನಷ್ಟಹೊಂದುವAತಹದ್ದಾಗಿದೆ. info
التفاسير:

external-link copy
20 : 58

اِنَّ الَّذِیْنَ یُحَآدُّوْنَ اللّٰهَ وَرَسُوْلَهٗۤ اُولٰٓىِٕكَ فِی الْاَذَلِّیْنَ ۟

ಖಂಡಿತವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೇ ಅತ್ಯಂತ ನಿಂದ್ಯರಲ್ಲಿ ಸೇರಿದವರಾಗಿದ್ದಾರೆ. info
التفاسير:

external-link copy
21 : 58

كَتَبَ اللّٰهُ لَاَغْلِبَنَّ اَنَا وَرُسُلِیْ ؕ— اِنَّ اللّٰهَ قَوِیٌّ عَزِیْزٌ ۟

ನಾನು ಮತ್ತು ನನ್ನ ಸಂದೇಶವಾಕರೇ ವಿಜಯ ಸಾಧಿಸುವೆವೆಂದು ಅಲ್ಲಾಹನು ದಾಖಲಿಸಿದ್ದಾನೆ. ವಾಸ್ತವದಲ್ಲಿ ಅಲ್ಲಾಹನು ಸರ್ವಶಕ್ತನು ಪ್ರತಾಪಶಾಲಿಯು ಆಗಿದ್ದಾನೆ. info
التفاسير: