ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
7 : 58

اَلَمْ تَرَ اَنَّ اللّٰهَ یَعْلَمُ مَا فِی السَّمٰوٰتِ وَمَا فِی الْاَرْضِ ؕ— مَا یَكُوْنُ مِنْ نَّجْوٰی ثَلٰثَةٍ اِلَّا هُوَ رَابِعُهُمْ وَلَا خَمْسَةٍ اِلَّا هُوَ سَادِسُهُمْ وَلَاۤ اَدْنٰی مِنْ ذٰلِكَ وَلَاۤ اَكْثَرَ اِلَّا هُوَ مَعَهُمْ اَیْنَ مَا كَانُوْا ۚ— ثُمَّ یُنَبِّئُهُمْ بِمَا عَمِلُوْا یَوْمَ الْقِیٰمَةِ ؕ— اِنَّ اللّٰهَ بِكُلِّ شَیْءٍ عَلِیْمٌ ۟

ಆಕಾಶಗಳಲ್ಲಿರುವ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅಲ್ಲಾಹನು ಅರಿಯುತ್ತಾನೆ ಎಂದು ನೀವು ಕಾಣುವುದಿಲ್ಲವೇ? ಮೂವರ ಗೂಢಾಲೋಚನೆಯು ಅವರ ಪೈಕಿ ನಾಲ್ಕನೆಯವನಾಗಿ ಅಲ್ಲಾಹನಲ್ಲದೆ ನಡೆಯದು, ಮತ್ತು ಐವರ ಗೂಢಾಲೋಚನೆಯು ಅವರ ಪೈಕಿ ಆರನೇಯವನಾಗಿ ಅವನಿಲ್ಲದೆ ನಡೆಯದು. ಅದಕ್ಕಿಂತ ಕಡಿಮೆಯವರದ್ದಾಗಲಿ ಹೆಚ್ಚಿನವರದ್ದಾಗಲಿ ಅವರೆಲ್ಲೇ ಇರಲಿ ಅವನು ಅವರ ಜೊತೆಯಲ್ಲಿ ಇರುತ್ತಾನೆ. ಬಳಿಕ ಪುನರುತ್ಥಾನದಂದು ಅವನು ಅವರಿಗೆ ಅವರು ಮಾಡುತ್ತಿದ್ದುದ್ದನ್ನು ತಿಳಿಸಿ ಕೊಡುವನು. ನಿಸ್ಸಂಶಯವಾಗಿಯೂ ಅಲ್ಲಾಹನು ಎಲ್ಲ ಸಂಗತಿಗಳನ್ನು ಅರಿಯುವವನಾಗಿರುವನು. info
التفاسير:

external-link copy
8 : 58

اَلَمْ تَرَ اِلَی الَّذِیْنَ نُهُوْا عَنِ النَّجْوٰی ثُمَّ یَعُوْدُوْنَ لِمَا نُهُوْا عَنْهُ وَیَتَنٰجَوْنَ بِالْاِثْمِ وَالْعُدْوَانِ وَمَعْصِیَتِ الرَّسُوْلِ ؗ— وَاِذَا جَآءُوْكَ حَیَّوْكَ بِمَا لَمْ یُحَیِّكَ بِهِ اللّٰهُ ۙ— وَیَقُوْلُوْنَ فِیْۤ اَنْفُسِهِمْ لَوْلَا یُعَذِّبُنَا اللّٰهُ بِمَا نَقُوْلُ ؕ— حَسْبُهُمْ جَهَنَّمُ ۚ— یَصْلَوْنَهَا ۚ— فَبِئْسَ الْمَصِیْرُ ۟

ಗೂಢಾಲೋಚನೆ ನಡೆಸುವುದರಿಂದ ತಡೆಯಲ್ಪಟ್ಟವರೆಡೆಗೆ ನೀವು ನೋಡಲಿಲ್ಲವೇ ?ಅವರು ತಮ್ಮನ್ನು ತಡೆಯಲಾದ ಕೆಲಸಗಳಿಗೆ ಪುನಃ ಮರಳುತ್ತಿದ್ದಾರೆ, ಮತ್ತು ಪರಸ್ಪರ ಪಾಪ, ಅತಿರೇಕ ಹಾಗೂ ಸಂದೇಶವಾಹಕರ ಧಿಕ್ಕಾರದ ವಿಚಾರದಲ್ಲಿ ಗೂಢಾಲೋಚನೆ ನಡೆಸುತ್ತಾರೆ, ಅವರು ನಿಮ್ಮ ಬಳಿಗೆ ಬಂದಾಗ ಅಲ್ಲಾಹನು ನಿಮಗೆ ಸಲಾಂ ಹೇಳದ ರೀತಿಯಲ್ಲಿ ಸಲಾಂ ಹೇಳುತ್ತಾರೆ ಮತ್ತು ನಾವು ಹೇಳುತ್ತಿರುವುದರ ನಿಮಿತ್ತ ಅಲ್ಲಾಹನು ನಮ್ಮನ್ನು ಶಿಕ್ಷಿಸುವುದಿಲ್ಲವೇಕೆ ? ಎಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾರೆ. ಇವರಿಗೆ ನರಕವೇ ಸಾಕು, ಅವರು ಅದನ್ನು ಪ್ರವೇಶಿಸುವರು, ಹಾಗೆಯೇ ಅದೆಷ್ಟು ಕೆಟ್ಟ ನೆಲೆಯಾಗಿದೆ. info
التفاسير:

external-link copy
9 : 58

یٰۤاَیُّهَا الَّذِیْنَ اٰمَنُوْۤا اِذَا تَنَاجَیْتُمْ فَلَا تَتَنَاجَوْا بِالْاِثْمِ وَالْعُدْوَانِ وَمَعْصِیَتِ الرَّسُوْلِ وَتَنَاجَوْا بِالْبِرِّ وَالتَّقْوٰی ؕ— وَاتَّقُوا اللّٰهَ الَّذِیْۤ اِلَیْهِ تُحْشَرُوْنَ ۟

ಓ ಸತ್ಯ ವಿಶ್ವಾಸಿಗಳೇ ನೀವು ಪರಸ್ಪರ ಪಾಪ, ಅತಿರೇಕ, ಹಾಗೂ ಸಂದೇಶವಾಹಕನನ್ನು ಧಿಕ್ಕರಿಸುವ ವಿಚಾರದಲ್ಲಿ ಗೂಢಾಲೋಚನೆ ನಡೆಸದಿರಿ. ಬದಲಿಗೆ ನೀವು ಪುಣ್ಯ ಹಾಗೂ ಭಯ-ಭಕ್ತಿಯ ವಿಚಾರದಲ್ಲಿ ಗೂಢಾಲೋಚನೆ ನಡೆಸಿರಿ, ಮತ್ತು ನೀವು ಯಾರೆಡೆಗೆ ಒಟ್ಟುಗೂಡಿಸಲ್ಪಡುವಿರೋ ಆ ಅಲ್ಲಾಹನನ್ನು ಭಯಪಡಿರಿ. info
التفاسير:

external-link copy
10 : 58

اِنَّمَا النَّجْوٰی مِنَ الشَّیْطٰنِ لِیَحْزُنَ الَّذِیْنَ اٰمَنُوْا وَلَیْسَ بِضَآرِّهِمْ شَیْـًٔا اِلَّا بِاِذْنِ اللّٰهِ ؕ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟

ಖಂಡಿತ ಗೂಢಾಲೋಚನೆಯು ಶೈತಾನನ ಕೃತ್ಯವಾಗಿದೆ, ಇದರಿಂದ ಸತ್ಯ ವಿಶ್ವಾಸಿಗಳಿಗೆ ದುಃಖವನ್ನುಂಟು ಮಾಡಲೆಂದಾಗಿದೆ ಆದರೆ ಅವನು ಅಲ್ಲಾಹನ ಅನುಮತಿ ಇಲ್ಲದೆ ಅವರಿಗೆ ಯಾವ ಹಾನಿಯನ್ನು ಮಾಡಲಾರನು ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯನ್ನಿಡಲಿ. info
التفاسير:

external-link copy
11 : 58

یٰۤاَیُّهَا الَّذِیْنَ اٰمَنُوْۤا اِذَا قِیْلَ لَكُمْ تَفَسَّحُوْا فِی الْمَجٰلِسِ فَافْسَحُوْا یَفْسَحِ اللّٰهُ لَكُمْ ۚ— وَاِذَا قِیْلَ انْشُزُوْا فَانْشُزُوْا یَرْفَعِ اللّٰهُ الَّذِیْنَ اٰمَنُوْا مِنْكُمْ ۙ— وَالَّذِیْنَ اُوْتُوا الْعِلْمَ دَرَجٰتٍ ؕ— وَاللّٰهُ بِمَا تَعْمَلُوْنَ خَبِیْرٌ ۟

ಸತ್ಯ ವಿಶ್ವಾಸಿಗಳೇ ನೀವು ಸಭೆಗಳಲ್ಲಿ ಸ್ಥಳಾವಕಾಶ ಮಾಡಿಕೊಡಿರಿ ಎಂದು ನಿಮ್ಮೊಂದಿಗೆ ಹೇಳಲಾದರೆ ನೀವು ಸ್ಥಳಾವಕಾಶ ಮಾಡಿಕೊಡಿರಿ. ಅಲ್ಲಾಹನು ನಿಮಗೆ ಇಹಪರದಲ್ಲಿ) ವಿಶಾಲತೆಯನ್ನು ದಯಪಾಲಿಸುವನು ಮತ್ತು ನಿಮಗೆ ಎದ್ದು ಬಿಡಿರಿ ಎಂದು ಹೇಳಲಾದರೆ ನೀವು ಎದ್ದು ಬಿಡಿರಿ. ಅಲ್ಲಾಹನು ನಿಮ್ಮಲ್ಲಿ ಸತ್ಯ ವಿಶ್ವಾಸವಿರಿಸಿದವರ ಹಾಗೂ ಜ್ಞಾನ ನೀಡಲ್ಪಟ್ಟವರ ಪದವಿಗಳನ್ನು ಉನ್ನತಗೊಳಿಸುವನು ಮತ್ತು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ. info
التفاسير: