ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
32 : 5

مِنْ اَجْلِ ذٰلِكَ ؔۛۚ— كَتَبْنَا عَلٰی بَنِیْۤ اِسْرَآءِیْلَ اَنَّهٗ مَنْ قَتَلَ نَفْسًا بِغَیْرِ نَفْسٍ اَوْ فَسَادٍ فِی الْاَرْضِ فَكَاَنَّمَا قَتَلَ النَّاسَ جَمِیْعًا ؕ— وَمَنْ اَحْیَاهَا فَكَاَنَّمَاۤ اَحْیَا النَّاسَ جَمِیْعًا ؕ— وَلَقَدْ جَآءَتْهُمْ رُسُلُنَا بِالْبَیِّنٰتِ ؗ— ثُمَّ اِنَّ كَثِیْرًا مِّنْهُمْ بَعْدَ ذٰلِكَ فِی الْاَرْضِ لَمُسْرِفُوْنَ ۟

ಇದೇ ಕಾರಣದಿಂದ ನಾವು ಇಸ್ರಾಯೀಲ್ ಸಂತತಿಗಳಿಗೆ (ತೌರಾತ್‌ನಲ್ಲಿ) ಹೀಗೆ ಆದೇಶಿಸಿದೆವು. ಯಾರಾದರೂ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುವುದಕ್ಕಾಗಿ ಅಥವಾ ಭೂಮಿಯಲ್ಲಿ ಕ್ಷೆÆÃಭೆ ಹರಡಿರುವುದಕ್ಕಾಗಿಯೇ ಹೊರತು ಯಾರನ್ನಾದರು ಕೊಂದರೆ ಅವನು ಇಡೀ ಮನುಕುಲವನ್ನೇ ಕೊಂದAತೆ. ಮತ್ತು ಯಾರಾದರು ಒಂದು ಜೀವವನ್ನು ರಕ್ಷಿದರೆ ಅದು ಇಡೀ ಮನುಕುಲವನ್ನು ರಕ್ಷಿಸಿದಂತೆ. ನಮ್ಮ ಅನೇಕ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೆ ಅದರ ನಂತರವೂ ಅವರ ಪೈಕಿ ಹೆಚ್ಚಿನ ಮಂದಿ ಭೂಮಿಯಲ್ಲಿ ಅನ್ಯಾಯವಾಗಿ ಅಕ್ರಮವೆಸಗುವವರಾಗಿದ್ದರು. info
التفاسير:

external-link copy
33 : 5

اِنَّمَا جَزٰٓؤُا الَّذِیْنَ یُحَارِبُوْنَ اللّٰهَ وَرَسُوْلَهٗ وَیَسْعَوْنَ فِی الْاَرْضِ فَسَادًا اَنْ یُّقَتَّلُوْۤا اَوْ یُصَلَّبُوْۤا اَوْ تُقَطَّعَ اَیْدِیْهِمْ وَاَرْجُلُهُمْ مِّنْ خِلَافٍ اَوْ یُنْفَوْا مِنَ الْاَرْضِ ؕ— ذٰلِكَ لَهُمْ خِزْیٌ فِی الدُّنْیَا وَلَهُمْ فِی الْاٰخِرَةِ عَذَابٌ عَظِیْمٌ ۟ۙ

ಯಾರು ಅಲ್ಲಾಹನೊಂದಿಗೆ ಮತ್ತು ಅವನ ಸಂದೇಶವಾಹಕರೊAದಿಗೆ ಯುದ್ಧ ಮಾಡುತ್ತಾರೋ ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನುಂಟು ಮಾಡುತ್ತಾರೋ ಅವರ ಶಿಕ್ಷೆಯು ಅವರನ್ನು ವಧಿಸಲಾಗುವುದು, ಅಥವಾ ಶಿಲುಬೆಗೇರಿಸಲಾಗುವುದು, ಅಥವಾ ಅವರ ಕೈ ಕಾಲುಗಳನ್ನು ಪರಸ್ಪರ ವಿರುದ್ಧ ದಿಕ್ಕಿನಿಂದ ಕತ್ತರಿಸಲಾಗುವುದು ಅಥವಾ ಅವರನ್ನು ಗಡಿಪಾರುಗೊಳಿಸಲಾಗುವುದು. ಇದು ಅವರಿಗೆ ಇಹಲೋಕದಲ್ಲಿರುವ ಅಪಮಾನವಾಗಿದೆ. ಮತ್ತು ಪರಲೋಕದಲ್ಲಿ ಅವರಿಗೆ ಮಹಾ ಕಠಿಣವಾದ ಶಿಕ್ಷೆಯಿರುವುದು. info
التفاسير:

external-link copy
34 : 5

اِلَّا الَّذِیْنَ تَابُوْا مِنْ قَبْلِ اَنْ تَقْدِرُوْا عَلَیْهِمْ ۚ— فَاعْلَمُوْۤا اَنَّ اللّٰهَ غَفُوْرٌ رَّحِیْمٌ ۟۠

ಆದರೆ, ಅವರ ವಿರುದ್ಧ ನಿಂಯತ್ರಣ ಸಾಧಿಸುವ ಮುನ್ನ ಅವರು ಪಶ್ಚಾತ್ತಾಪ ಪಟ್ಟು ಮರಳಿದರೆ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ ಎಂಬುದನ್ನು ನೀವು ಅರಿತುಕೊಳ್ಳಿರಿ. info
التفاسير:

external-link copy
35 : 5

یٰۤاَیُّهَا الَّذِیْنَ اٰمَنُوا اتَّقُوا اللّٰهَ وَابْتَغُوْۤا اِلَیْهِ الْوَسِیْلَةَ وَجَاهِدُوْا فِیْ سَبِیْلِهٖ لَعَلَّكُمْ تُفْلِحُوْنَ ۟

ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಅವನೆಡೆÀಗೆ ಸಾಮಿಪ್ಯ ಮಾರ್ಗವನ್ನು ಹುಡುಕಿರಿ ಹಾಗೂ ಅವನ ಮಾರ್ಗದಲ್ಲಿ ಹೋರಾಡಿರಿ. ಇದು ನೀವು ಯಶಸ್ಸು ಸಾಧಿಸಲೆಂದಾಗಿದೆ. info
التفاسير:

external-link copy
36 : 5

اِنَّ الَّذِیْنَ كَفَرُوْا لَوْ اَنَّ لَهُمْ مَّا فِی الْاَرْضِ جَمِیْعًا وَّمِثْلَهٗ مَعَهٗ لِیَفْتَدُوْا بِهٖ مِنْ عَذَابِ یَوْمِ الْقِیٰمَةِ مَا تُقُبِّلَ مِنْهُمْ ۚ— وَلَهُمْ عَذَابٌ اَلِیْمٌ ۟

ಖಂಡಿತವಾಗಿಯು ಪುನರುತ್ಥಾನ ದಿನದ ಶಿಕ್ಷೆಯಿಂದ ಪಾರಾಗಲಿಕ್ಕಾಗಿ ಸತ್ಯನಿಷೇಧಿಗಳ ವಶದಲ್ಲಿ ಭೂಮಿಯಲ್ಲಿರುವುದೆಲ್ಲವೂ ಅದರಷ್ಟೇ ಬೇರೆಯೂ ಇದ್ದೂ ಅವೆಲ್ಲವನ್ನೂ ಪರಿಹಾರ ಧನವನ್ನಾಗಿ ನೀಡಲು ಅವರು ಇಚ್ಛಿಸಿದರೂ ಅದನ್ನು ಅವರಿಂದ ಸ್ವೀಕರಿಸಲಾಗದು ಮತ್ತು ಅವರಿಗೆ ವೇದನಾಜನಕ ಶಿಕ್ಷೆಯಿದೆ. info
التفاسير: