ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
46 : 5

وَقَفَّیْنَا عَلٰۤی اٰثَارِهِمْ بِعِیْسَی ابْنِ مَرْیَمَ مُصَدِّقًا لِّمَا بَیْنَ یَدَیْهِ مِنَ التَّوْرٰىةِ ۪— وَاٰتَیْنٰهُ الْاِنْجِیْلَ فِیْهِ هُدًی وَّنُوْرٌ ۙ— وَّمُصَدِّقًا لِّمَا بَیْنَ یَدَیْهِ مِنَ التَّوْرٰىةِ وَهُدًی وَّمَوْعِظَةً لِّلْمُتَّقِیْنَ ۟ؕ

ಮತ್ತು ನಾವು ಆ ಪೈಗಂಬರರ ನಂತರ ಮರ್ಯಮರ ಪುತ್ರರಾದ ಈಸಾರನ್ನು ತಮಗಿಂತ ಮುಂಚೆಯಿರುವ ತೌರಾತನ್ನು ಸತ್ಯವೆಂದು ದೃಢಿಕರಿಸುವವರಾಗಿ ನಿಯೋಗಿಸದೆವು. ಮತ್ತು ಸನ್ಮಾರ್ಗದರ್ಶನ ಮತ್ತು ಪ್ರಕಾಶವನ್ನು ಹೊಂದಿದ್ದ ಇಂಜೀಲನ್ನು ನಾವು ಅವರಿಗೆ ದಯಪಾಲಿಸಿದೆವು. ಅದು ತನ್ನ ಮುಂಚಿರುವ ತೌರಾತನ್ನು ಸತ್ಯವೆಂದು ದೃಢೀಕರಿಸುವಂತದ್ದೂ ಭಯಭಕ್ತಿ ಪಾಲಿಸುವವರಿಗೆ ಮಾರ್ಗದರ್ಶನ ಮತ್ತು ಸದುಪದೇಶವೂ ಆಗಿತ್ತು. info
التفاسير:

external-link copy
47 : 5

وَلْیَحْكُمْ اَهْلُ الْاِنْجِیْلِ بِمَاۤ اَنْزَلَ اللّٰهُ فِیْهِ ؕ— وَمَنْ لَّمْ یَحْكُمْ بِمَاۤ اَنْزَلَ اللّٰهُ فَاُولٰٓىِٕكَ هُمُ الْفٰسِقُوْنَ ۟

ಮತ್ತು ಇಂಜೀಲಿನ ಅನುಯಾಯಿಗಳು ಅಲ್ಲಾಹನು ಇಂಜೀಲ್‌ನಲ್ಲಿ ಅವತೀರ್ಣಗೊಳಿಸಿರುವ ಪ್ರಕಾರ ತೀರ್ಪು ನೀಡಲಿ ಮತ್ತು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಅನುಸಾರವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಧಿಕ್ಕಾರಿಗಳಾಗಿದ್ದಾರೆ. info
التفاسير:

external-link copy
48 : 5

وَاَنْزَلْنَاۤ اِلَیْكَ الْكِتٰبَ بِالْحَقِّ مُصَدِّقًا لِّمَا بَیْنَ یَدَیْهِ مِنَ الْكِتٰبِ وَمُهَیْمِنًا عَلَیْهِ فَاحْكُمْ بَیْنَهُمْ بِمَاۤ اَنْزَلَ اللّٰهُ وَلَا تَتَّبِعْ اَهْوَآءَهُمْ عَمَّا جَآءَكَ مِنَ الْحَقِّ ؕ— لِكُلٍّ جَعَلْنَا مِنْكُمْ شِرْعَةً وَّمِنْهَاجًا ؕ— وَلَوْ شَآءَ اللّٰهُ لَجَعَلَكُمْ اُمَّةً وَّاحِدَةً وَّلٰكِنْ لِّیَبْلُوَكُمْ فِیْ مَاۤ اٰتٰىكُمْ فَاسْتَبِقُوا الْخَیْرٰتِ ؕ— اِلَی اللّٰهِ مَرْجِعُكُمْ جَمِیْعًا فَیُنَبِّئُكُمْ بِمَا كُنْتُمْ فِیْهِ تَخْتَلِفُوْنَ ۟ۙ

ಓ ಪೈಗಂಬರರೇ, ನಾವು ನಿಮ್ಮ ಕಡೆಗೆ ಸತ್ಯದೊಂದಿಗೆ ಈ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಇದು ತನಗಿಂತ ಮುಂಚಿನ ಗ್ರಂಥವನ್ನು ಸತ್ಯವೆಂದು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ ಆದ್ದರಿಂದ ನೀವು ಅವರ ನಡುವೆ ಅಲ್ಲಾಹನಿಂದ ಅವತೀರ್ಣಗೊಂಡಿರುವ ಗ್ರಂಥದ ಪ್ರಕಾರ ತೀರ್ಪು ನೀಡಿರಿ. ಈ ಸತ್ಯವನ್ನು ತೊರೆದು ನೀವು ಅವರ ಇಚ್ಛೆಗಳನ್ನು ಹಿಂಬಾಲಿಸಬಾರದು. ನಿಮ್ಮಲ್ಲಿನ ಪ್ರತಿಯೊಂದು ಸಮುದಾಯಕ್ಕೂ ಒಂದೊAದು ನಿಯಮ ಸಂಹಿತೆ ಮತ್ತು ಕರ್ಮ ಮಾರ್ಗವನ್ನು ನಾವು ನಿಶ್ಚಯಿಸಿದ್ದೇವೆ. ಅಲ್ಲಾಹನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನು ಒಂದೇ ಸಮುದಾಯವನ್ನಾಗಿಸುತ್ತಿದ್ದನು. ಆದರೆ ಅವನು ನಿಮಗೆ ದಯಪಾಲಿಸುವುದರಲ್ಲಿ ನಿಮ್ಮನ್ನು ಪರೀಕ್ಷಿಸಲು ಇಚ್ಛಿಸುತ್ತಾನೆ. ನೀವು ಸತ್ಕರ್ಮಗಳೆಡೆಗೆ ಸ್ಪರ್ಧಿಸಿರಿ. ನಿಮ್ಮೆಲ್ಲರ ಮರಳುವಿಕೆಯು ಅಲ್ಲಾಹನ ಕಡೆಗೇ ಆಗಿದೆ ಮತ್ತು ಅವನು ನೀವು ಭಿನ್ನತೆ ಹೊಂದಿರುವ ಸಕಲ ವಿಷಯಗಳ ಕುರಿತು ನಿಮಗೆ ತಿಳಿಸಿಕೊಡುವನು. info
التفاسير:

external-link copy
49 : 5

وَاَنِ احْكُمْ بَیْنَهُمْ بِمَاۤ اَنْزَلَ اللّٰهُ وَلَا تَتَّبِعْ اَهْوَآءَهُمْ وَاحْذَرْهُمْ اَنْ یَّفْتِنُوْكَ عَنْ بَعْضِ مَاۤ اَنْزَلَ اللّٰهُ اِلَیْكَ ؕ— فَاِنْ تَوَلَّوْا فَاعْلَمْ اَنَّمَا یُرِیْدُ اللّٰهُ اَنْ یُّصِیْبَهُمْ بِبَعْضِ ذُنُوْبِهِمْ ؕ— وَاِنَّ كَثِیْرًا مِّنَ النَّاسِ لَفٰسِقُوْنَ ۟

ಅಲ್ಲಾಹನು ಅವತೀರ್ಣಗೊಳಿಸಿರುವ ನಿಯಮಕ್ಕನುಸಾರವಾಗಿಯೇ ನೀವು ಅವರ ನಡುವೆ ತೀರ್ಪು ನೀಡಿರಿ ಮತ್ತು ಅವರ ಇಚ್ಛೆಗಳನ್ನು ಹಿಂಬಾಲಿಸಬೇಡಿರಿ ಮತ್ತು ಅಲ್ಲಾಹನು ನಿಮ್ಮ ಮೇಲೆ ಅವತೀರ್ಣಗೊಳಿಸಿರುವ ಯಾವುದಾದರೂ ಆದೇಶದಿಂದ ಅವರು ನಿಮ್ಮನ್ನು ದಾರಿ ತಪ್ಪಿಸಿದಂತೆ ಎಚ್ಚರ ವಹಿಸಿರಿ. ಇನ್ನು ಅವರು ವಿಮುಖರಾಗುವುದಾದರೆ ಅಲ್ಲಾಹನು ಅವರ ಪಾಪಗಳ ನಿಮಿತ್ತ ಅವರಿಗೆ ಶಿಕ್ಷಿಸಲಿಚ್ಚಿಸುತ್ತಾನೆಂದು ತಿಳಿದುಕೊಳ್ಳಿರಿ. ಮತ್ತು ಹೆಚ್ಚಿನ ಜನರು ಧಿಕ್ಕಾರಿಗಳೇ ಆಗಿರುತ್ತಾರೆ. info
التفاسير:

external-link copy
50 : 5

اَفَحُكْمَ الْجَاهِلِیَّةِ یَبْغُوْنَ ؕ— وَمَنْ اَحْسَنُ مِنَ اللّٰهِ حُكْمًا لِّقَوْمٍ یُّوْقِنُوْنَ ۟۠

ಅವರು ಅಜ್ಞಾನ ಕಾಲದ ತೀರ್ಪನ್ನು ಬಯಸುತ್ತಿದಾರೆಯೇ? ದೃಢವಿಶ್ವಾಸಿಗಳಾದ ಜನರಿಗೆ ಅಲ್ಲಾಹನಿಗಿಂತಲೂ ಉತ್ತಮನಾದ ತೀರ್ಪುಗಾರ ಇನ್ನಾರಿದ್ದಾನೆ? info
التفاسير: