ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
32 : 42

وَمِنْ اٰیٰتِهِ الْجَوَارِ فِی الْبَحْرِ كَالْاَعْلَامِ ۟ؕ

ಸಮುದ್ರದಲ್ಲಿ ಪರ್ವತಗಳಂತೆ ಚಲಿಸುತ್ತಿರುವ ಹಡಗುಗಳು ಅವನ ನಿದರ್ಶನಗಳಲ್ಲಾಗಿವೆ. info
التفاسير:

external-link copy
33 : 42

اِنْ یَّشَاْ یُسْكِنِ الرِّیْحَ فَیَظْلَلْنَ رَوَاكِدَ عَلٰی ظَهْرِهٖ ؕ— اِنَّ فِیْ ذٰلِكَ لَاٰیٰتٍ لِّكُلِّ صَبَّارٍ شَكُوْرٍ ۟ۙ

ಅವನು ಇಚ್ಛಿಸಿದರೆ ಗಾಳಿಯನ್ನು ಸ್ತಬ್ಧಗೊಳಿಸುವನು. ಸಮುದ್ರದ ಮೇಲೆ ಹಡಗುಗಳು ನಿಂತಲ್ಲೇ ನಿಂತುಬಿಡುವುವು. ಖಂಡಿತವಾಗಿಯೂ ಇದರಲ್ಲಿ ಸಹನಾಶೀಲನಾದ ಪ್ರತಿಯೊಬ್ಬ ಕೃತಜ್ಞನಿಗೆ ದೃಷ್ಟಾಂತಗಳಿವೆ. info
التفاسير:

external-link copy
34 : 42

اَوْ یُوْبِقْهُنَّ بِمَا كَسَبُوْا وَیَعْفُ عَنْ كَثِیْرٍ ۟ۙ

ಅಥವಾ ಅವನು ಅವರನ್ನು ಅವರ ಕೃತ್ಯಗಳ ನಿಮಿತ್ತ ಮುಳುಗಿಸಿ ಬಿಡಬಹುದು. ಅವನಂತು ಅನೇಕ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ. info
التفاسير:

external-link copy
35 : 42

وَّیَعْلَمَ الَّذِیْنَ یُجَادِلُوْنَ فِیْۤ اٰیٰتِنَا ؕ— مَا لَهُمْ مِّنْ مَّحِیْصٍ ۟

ಇದು ನಮ್ಮ ದೃಷ್ಟಾಂತಗಳಲ್ಲಿ ತರ್ಕಿಸು ವವರಿಗೆ ತಮಗೆ ಎಲ್ಲೂ ಅಭಯ ಸ್ಥಾನವಿಲ್ಲವೆಂದು ಮನದಟ್ಟಾಗಲೆಂದಾಗಿದೆ. info
التفاسير:

external-link copy
36 : 42

فَمَاۤ اُوْتِیْتُمْ مِّنْ شَیْءٍ فَمَتَاعُ الْحَیٰوةِ الدُّنْیَا ۚ— وَمَا عِنْدَ اللّٰهِ خَیْرٌ وَّاَبْقٰی لِلَّذِیْنَ اٰمَنُوْا وَعَلٰی رَبِّهِمْ یَتَوَكَّلُوْنَ ۟ۚ

ನಿಮಗೆ ನೀಡಲಾಗಿರುವುದೆಲ್ಲವೂ ಕೇವಲ ಐಹಿಕ ಜೀವನದ ತಾತ್ಕಾಲಿಕ ಜೀವನಾನುಕೂಲತೆಗಳಾಗಿವೆ ಮತ್ತು ಅಲ್ಲಾಹನ ಬಳಿಯಿರುವುದೆಲ್ಲವೂ ಅತ್ಯುತ್ತಮವೂ, ಶಾಶ್ವತವೂ ಆಗಿರುತ್ತದೆ. ಅದು ಸತ್ಯವಿಶ್ವಾಸವಿರಿಸಿ, ತಮ್ಮ ಪ್ರಭುವಿನ ಮೇಲೆಯೇ ಭರವಸೆಯಿಡುವರಿಗೆ ಮಾತ್ರವಿರುವುದು. info
التفاسير:

external-link copy
37 : 42

وَالَّذِیْنَ یَجْتَنِبُوْنَ كَبٰٓىِٕرَ الْاِثْمِ وَالْفَوَاحِشَ وَاِذَا مَا غَضِبُوْا هُمْ یَغْفِرُوْنَ ۟ۚ

ಅವರು ಮಹಾಪಾಪ ಗಳಿಂದ ಮತ್ತು ನಿರ್ಲಜ್ಜೆಯ ಕೃತ್ಯಗಳಿಂದ ದೂರವಿರುವವರು ಮತ್ತು ಸಿಟ್ಟು ಬಂದಾಗ ಕ್ಷಮಿಸುವವರಾಗಿದ್ದಾರೆ. info
التفاسير:

external-link copy
38 : 42

وَالَّذِیْنَ اسْتَجَابُوْا لِرَبِّهِمْ وَاَقَامُوا الصَّلٰوةَ ۪— وَاَمْرُهُمْ شُوْرٰی بَیْنَهُمْ ۪— وَمِمَّا رَزَقْنٰهُمْ یُنْفِقُوْنَ ۟ۚ

ಅವರು ತಮ್ಮ ಪ್ರಭುವಿನ ಆಜ್ಞೆಯನ್ನು ಪಾಲಿಸುತ್ತಾರೆ, ನಮಾಝನ್ನು ಸಂಸ್ಥಾಪಿಸುತ್ತಾರೆ ಅವರ ವ್ಯವಹಾರವು ಪರಸ್ಪರ ಸಮಾಲೋಚನೆಯಿಂದ ನಡೆಯುತ್ತದೆ. ಮತ್ತು ನಾವು ಅವರಿಗೆ ನೀಡಿರುವುದರಿಂದ ನಮ್ಮ ಮಾರ್ಗದಲ್ಲಿ ಖರ್ಚು ಮಾಡುತ್ತಾರೆ. info
التفاسير:

external-link copy
39 : 42

وَالَّذِیْنَ اِذَاۤ اَصَابَهُمُ الْبَغْیُ هُمْ یَنْتَصِرُوْنَ ۟

ಅವರ ಮೇಲೆ ದುಷ್ಟರ ದೌರ್ಜನ್ಯ ನಡೆದರೆ ಅವರು ಅವನಿಂದ ಪ್ರತಿಕಾರ ಪಡೆಯುತ್ತಾರೆ. info
التفاسير:

external-link copy
40 : 42

وَجَزٰٓؤُا سَیِّئَةٍ سَیِّئَةٌ مِّثْلُهَا ۚ— فَمَنْ عَفَا وَاَصْلَحَ فَاَجْرُهٗ عَلَی اللّٰهِ ؕ— اِنَّهٗ لَا یُحِبُّ الظّٰلِمِیْنَ ۟

ಕೆಡುಕಿನ ಪ್ರತಿಫಲವು ಅದಕ್ಕೆ ಸಮಾನವಾಗಿರುವ ಕೆಡುಕಾಗಿದೆ. ಇನ್ನು ಯಾರಾದರೂ ಕ್ಷಮಿಸಿ ಸುಧಾರಿಸಿಕೊಂಡರೆ ಅವನ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ. ಖಂಡಿತವಾಗಿಯೂ ಅವನು ಅಕ್ರಮಿಗಳನ್ನು ಮೆಚ್ಚುವುದಿಲ್ಲ. info
التفاسير:

external-link copy
41 : 42

وَلَمَنِ انْتَصَرَ بَعْدَ ظُلْمِهٖ فَاُولٰٓىِٕكَ مَا عَلَیْهِمْ مِّنْ سَبِیْلٍ ۟ؕ

ಯಾರಾದರು ತಾನು ದೌರ್ಜನ್ಯಕ್ಕೊಳಗಾದ ನಂತರ ಪ್ರತಿಕಾರ ಕೈಗೊಂಡರೆ ಅವರ ಮೇಲೆ ಅಪವಾದವಿಲ್ಲ. info
التفاسير:

external-link copy
42 : 42

اِنَّمَا السَّبِیْلُ عَلَی الَّذِیْنَ یَظْلِمُوْنَ النَّاسَ وَیَبْغُوْنَ فِی الْاَرْضِ بِغَیْرِ الْحَقِّ ؕ— اُولٰٓىِٕكَ لَهُمْ عَذَابٌ اَلِیْمٌ ۟

ವಾಸ್ತವದಲ್ಲಿ ಇತರರ ಮೇಲೆ ಅಕ್ರಮವೆಸಗುತ್ತಾ ಭೂಮಿಯಲ್ಲಿ ಅನ್ಯಾಯವಾಗಿ ಕ್ಷೆÆÃಭೆ ಹರಡುವವರ ಮೇಲೆ ಅಪವಾದವಿರುವುದು. ಅವರಿಗೆ ವೇದನಾಜನಕ ಶಿಕ್ಷೆಯಿರುವುದು. info
التفاسير:

external-link copy
43 : 42

وَلَمَنْ صَبَرَ وَغَفَرَ اِنَّ ذٰلِكَ لَمِنْ عَزْمِ الْاُمُوْرِ ۟۠

ಇನ್ನು ಯಾರಾದರೂ ಸಹನೆ ಪಾಲಿಸುತ್ತಾ ಕ್ಷಮಿಸಿದರೆ ಖಂಡಿತವಾಗಿಯು ಇದು ಮಹಾ ಧೈರ್ಯದ ಕಾರ್ಯಗಳಲ್ಲಿ ಸೇರಿದೆ. info
التفاسير:

external-link copy
44 : 42

وَمَنْ یُّضْلِلِ اللّٰهُ فَمَا لَهٗ مِنْ وَّلِیٍّ مِّنْ بَعْدِهٖ ؕ— وَتَرَی الظّٰلِمِیْنَ لَمَّا رَاَوُا الْعَذَابَ یَقُوْلُوْنَ هَلْ اِلٰی مَرَدٍّ مِّنْ سَبِیْلٍ ۟ۚ

ಯಾರನ್ನು ಅಲ್ಲಾಹನು ಪಥಭ್ರಷ್ಟಗೊಳಿಸುತ್ತಾನೋ ಅನಂತರ ಅವನಿಗೆ ಯಾವ ರಕ್ಷಕನೂ ಇಲ್ಲ. ಮತ್ತು ಅಕ್ರಮಿಗಳು ಶಿಕ್ಷೆಯನ್ನು ಕಂಡು “ಮರಳಿ ಹೋಗಲು ಯಾವುದಾದರೂ ದಾರಿಯಿದೆಯೇ” ಎಂದು ಹೇಳುತ್ತಿರುವುದನ್ನು ನೀವು ಕಾಣುವಿರಿ. info
التفاسير: