ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
16 : 42

وَالَّذِیْنَ یُحَآجُّوْنَ فِی اللّٰهِ مِنْ بَعْدِ مَا اسْتُجِیْبَ لَهٗ حُجَّتُهُمْ دَاحِضَةٌ عِنْدَ رَبِّهِمْ وَعَلَیْهِمْ غَضَبٌ وَّلَهُمْ عَذَابٌ شَدِیْدٌ ۟

ಮತ್ತು ಯಾರು ಅಲ್ಲಾಹನ ಧರ್ಮವು ಸ್ವೀಕೃತಗೊಂಡ ಬಳಿಕ ಅದರಲ್ಲಿ ತರ್ಕಿಸುತ್ತಾರೋ ಅವರ ತರ್ಕ ಅಲ್ಲಾಹನ ಬಳಿ ನಿರರ್ಥಕವಾಗಿದೆ. ಅವರ ಮೇಲೆ ಕ್ರೋಧವಿದೆ ಮತ್ತು ಅವರಿಗೆ ಕಠಿಣ ಶಿಕ್ಷೆಯಿರುವುದು. info
التفاسير:

external-link copy
17 : 42

اَللّٰهُ الَّذِیْۤ اَنْزَلَ الْكِتٰبَ بِالْحَقِّ وَالْمِیْزَانَ ؕ— وَمَا یُدْرِیْكَ لَعَلَّ السَّاعَةَ قَرِیْبٌ ۟

ಸತ್ಯದೊಂದಿಗೆ ಗ್ರಂಥವನ್ನು ಮತ್ತು ತಕ್ಕಡಿಯನ್ನು ಇಳಿಸಿದವನು ಅಲ್ಲಾಹನೇ. ನಿಮಗೇನು ಗೊತ್ತು? ಆ ಅಂತ್ಯಗಳಿಗೆಯು ಸಮೀಪದಲ್ಲೇ ಇರಬಹುದು. info
التفاسير:

external-link copy
18 : 42

یَسْتَعْجِلُ بِهَا الَّذِیْنَ لَا یُؤْمِنُوْنَ بِهَا ۚ— وَالَّذِیْنَ اٰمَنُوْا مُشْفِقُوْنَ مِنْهَا ۙ— وَیَعْلَمُوْنَ اَنَّهَا الْحَقُّ ؕ— اَلَاۤ اِنَّ الَّذِیْنَ یُمَارُوْنَ فِی السَّاعَةِ لَفِیْ ضَلٰلٍۢ بَعِیْدٍ ۟

ಅದರಲ್ಲಿ ಪ್ರಳಯದಿನದಲ್ಲಿ ವಿಶ್ವಾಸವಿಡದವರು ಅದರ ಕುರಿತು ಆತುರಪಡುತ್ತಿದ್ದಾರೆ. ಆದರೆ ಅದನ್ನು ನಂಬುವವರು ಅದರ ಕುರಿತು ಭಯಪಡುತ್ತಾರೆ ಮತ್ತು ಅದು ಸತ್ಯವೆಂದು ಅರಿತಿದ್ದಾರೆ. ತಿಳಿಯಿರಿ! ಯಾರು ಅಂತ್ಯಗಳಿಗೆಯ ವಿಷಯದಲ್ಲಿ ತರ್ಕಿಸುವರೋ ಅವರು ಬಹುದೂರದ ಪಥಭ್ರಷ್ಟತೆಯಲ್ಲಿದ್ದಾರೆ. info
التفاسير:

external-link copy
19 : 42

اَللّٰهُ لَطِیْفٌ بِعِبَادِهٖ یَرْزُقُ مَنْ یَّشَآءُ ۚ— وَهُوَ الْقَوِیُّ الْعَزِیْزُ ۟۠

ಅಲ್ಲಾಹನು ತನ್ನ ದಾಸರ ಮೇಲೆ ಮಹಾ ಕರುಣೆಯುಳ್ಳವನಾಗಿದ್ದಾನೆ. ಅವನು ತಾನಿಚ್ಛಿಸುವವರಿಗೆ ಜೀವನಾಧಾರವನ್ನು ನೀಡುತ್ತಾನೆ. ಅವನು ಬಲಿಷ್ಠನೂ, ಪ್ರತಾಪಶಾಲಿಯೂ ಆಗಿದ್ದಾನೆ. info
التفاسير:

external-link copy
20 : 42

مَنْ كَانَ یُرِیْدُ حَرْثَ الْاٰخِرَةِ نَزِدْ لَهٗ فِیْ حَرْثِهٖ ۚ— وَمَنْ كَانَ یُرِیْدُ حَرْثَ الدُّنْیَا نُؤْتِهٖ مِنْهَا ۙ— وَمَا لَهٗ فِی الْاٰخِرَةِ مِنْ نَّصِیْبٍ ۟

ಯಾರು ಪರಲೋಕದ ಕೃಷಿಯನ್ನು ಬಯಸುತ್ತಾನೋ ಅವನ ಕೃಷಿಯಲ್ಲಿ ನಾವು ಅವನಿಗಾಗಿ ಅಭಿವೃದ್ಧಿಯನ್ನು ನೀಡುತ್ತೇವೆ ಯಾರು ಲೌಕಿಕ ಕೃಷಿಯನ್ನು ಬಯಸುತ್ತಾನೋ ಅವನಿಗೆ ನಾವು ಅದರಿಂದ ಸ್ವಲ್ಪ ಭಾಗ ನೀಡುತ್ತೇವೆ. ಆದರೆ ಪರಲೋಕದಲ್ಲಿ ಅವನಿಗೆ ಯಾವ ಪಾಲೂ ಇರುವುದಿಲ್ಲ.. info
التفاسير:

external-link copy
21 : 42

اَمْ لَهُمْ شُرَكٰٓؤُا شَرَعُوْا لَهُمْ مِّنَ الدِّیْنِ مَا لَمْ یَاْذَنْ بِهِ اللّٰهُ ؕ— وَلَوْلَا كَلِمَةُ الْفَصْلِ لَقُضِیَ بَیْنَهُمْ ؕ— وَاِنَّ الظّٰلِمِیْنَ لَهُمْ عَذَابٌ اَلِیْمٌ ۟

ಅಲ್ಲಾಹನು ಅನುಮತಿಸದೇ ಇರುವಂತಹ ಧರ್ಮಶಾಸನಗಳನ್ನು ಅವರಿಗೆ ನಿಶ್ಚಯಿಸಿರುವ ಸಹಭಾಗಿಗಳು ಇದ್ದಾರೆಯೇ? ತೀರ್ಪಿನ ದಿನದ ವಾಗ್ದಾನವು ಇಲ್ಲದಿರುತ್ತಿದ್ದರೆ ಅವರ ಮಧ್ಯೆ ತೀರ್ಮಾನ ಮಾಡಿಬಿಡಲಾಗುತ್ತಿತ್ತು. ಖಂಡಿತವಾಗಿಯೂ ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿರುವುದು. info
التفاسير:

external-link copy
22 : 42

تَرَی الظّٰلِمِیْنَ مُشْفِقِیْنَ مِمَّا كَسَبُوْا وَهُوَ وَاقِعٌ بِهِمْ ؕ— وَالَّذِیْنَ اٰمَنُوْا وَعَمِلُوا الصّٰلِحٰتِ فِیْ رَوْضٰتِ الْجَنّٰتِ ۚ— لَهُمْ مَّا یَشَآءُوْنَ عِنْدَ رَبِّهِمْ ؕ— ذٰلِكَ هُوَ الْفَضْلُ الْكَبِیْرُ ۟

ಓ ಸಂದೇಶವಾಹಕರೇ, ಅಕ್ರಮಿಗಳು ತಮ್ಮ ಕರ್ಮಗಳ ಕುರಿತು ಭಯಭೀತರಾಗಿರುವುದಾಗಿ ನೀವು ಕಾಣುವಿರಿ. ಅದರ ವಿಪತ್ತು ಅವರಿಗೆ ಸಂಭವಿಸೇ ತೀರುವುದು. ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರು ಸ್ವರ್ಗೋದ್ಯಾನಗಳಲ್ಲಿರುವರು. ಅವರು ಬಯಸಿದ್ದೆಲ್ಲವನ್ನೂ ತಮ್ಮ ಪ್ರಭುವಿನ ಬಳಿ ಪಡೆಯುವರು. ಇದುವೇ ಮಹಾ ಅನುಗ್ರಹವಾಗಿದೆ. info
التفاسير: