ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
47 : 41

اِلَیْهِ یُرَدُّ عِلْمُ السَّاعَةِ ؕ— وَمَا تَخْرُجُ مِنْ ثَمَرٰتٍ مِّنْ اَكْمَامِهَا وَمَا تَحْمِلُ مِنْ اُ وَلَا تَضَعُ اِلَّا بِعِلْمِهٖ ؕ— وَیَوْمَ یُنَادِیْهِمْ اَیْنَ شُرَكَآءِیْ ۙ— قَالُوْۤا اٰذَنّٰكَ ۙ— مَا مِنَّا مِنْ شَهِیْدٍ ۟ۚ

ಪುನರುತ್ಥಾನದ ಜ್ಞಾನವನ್ನು ಅವನೆಡೆಗೇ ಮರಳಿಸಲಾಗುತ್ತದೆ. ಮತ್ತು ಅವನಿಗೆ ಅರಿವಿಲ್ಲದೇ ಯಾವುದೇ ಫಲ ತನ್ನ ಕೋಶದಿಂದ ಹೊರಬರುವುದಿಲ್ಲ ಮತ್ತು ಯಾವ ಹೆಣ್ಣು ಗರ್ಭಧರಿಸುವುದೂ ಇಲ್ಲ. ಹೆರುವುದೂ ಇಲ್ಲ. ಅವನು ನನ್ನ ಸಹಭಾಗಿಗಳೆಲ್ಲಾ ಎಲ್ಲಿ? ಎಂದು ಅವರನ್ನು ಕೇಳುವ ದಿನ ಆಗ ಅವರು: ನಮ್ಮಲ್ಲಿ ಸಾಕ್ಷಿದಾರನಾಗಿ ಯಾರೂ ಇಲ್ಲವೆಂದು ನಾವಾಗಲೇ ಹೇಳಿ ಬಟ್ಟಿದ್ದೇವೆಂದು ಉತ್ತರಿಸುವರು. info
التفاسير:

external-link copy
48 : 41

وَضَلَّ عَنْهُمْ مَّا كَانُوْا یَدْعُوْنَ مِنْ قَبْلُ وَظَنُّوْا مَا لَهُمْ مِّنْ مَّحِیْصٍ ۟

ಇದಕ್ಕೆ ಮೊದಲು ಅವರು ಕರೆದು ಬೇಡುತ್ತಿದ್ದ ದೇವರುಗಳೆಲ್ಲ ಅವರಿಂದ ಕಣ್ಮರೆಯಾಗಿ ಬಿಡುವರು ಮತ್ತು ತಮಗೆ ಯಾವ ಅಭಯ ಸ್ಥಾನವಿಲ್ಲವೆಂದು ಅವರಿಗೆ ಮನದಟ್ಟಾಗುವುದು. info
التفاسير:

external-link copy
49 : 41

لَا یَسْـَٔمُ الْاِنْسَانُ مِنْ دُعَآءِ الْخَیْرِ ؗ— وَاِنْ مَّسَّهُ الشَّرُّ فَیَـُٔوْسٌ قَنُوْطٌ ۟

ಮನುಷ್ಯನು ಒಳಿತನ್ನು ಬೇಡುವುದರಿಂದ ದಣಿಯುವುದಿಲ್ಲ ಅವನಿಗೆ ತೊಂದರೆಯೇನಾದರೂ ಉಂಟಾದರೆ ಅವನು ನಿರಾಶನೂ ಹತಾಶನೂ ಆಗಿ ಬಿಡುತ್ತಾನೆ. info
التفاسير:

external-link copy
50 : 41

وَلَىِٕنْ اَذَقْنٰهُ رَحْمَةً مِّنَّا مِنْ بَعْدِ ضَرَّآءَ مَسَّتْهُ لَیَقُوْلَنَّ هٰذَا لِیْ ۙ— وَمَاۤ اَظُنُّ السَّاعَةَ قَآىِٕمَةً ۙ— وَّلَىِٕنْ رُّجِعْتُ اِلٰی رَبِّیْۤ اِنَّ لِیْ عِنْدَهٗ لَلْحُسْنٰی ۚ— فَلَنُنَبِّئَنَّ الَّذِیْنَ كَفَرُوْا بِمَا عَمِلُوْا ؗ— وَلَنُذِیْقَنَّهُمْ مِّنْ عَذَابٍ غَلِیْظٍ ۟

ಆದರೆ ಅವನಿಗೆ ಬಾಧಿಸಿದ ಕಷ್ಟದ ನಂತರ ನಾವು ಅವನಿಗೆ ನಮ್ಮ ಕೃಪೆಯ ಸವಿಯನ್ನುಣಿಸಿದಾಗ ಅವನೇ ಇದಕ್ಕೆ ನಾನು ಅರ್ಹನಾಗಿದ್ದೆನು. ಪುನರುತ್ಥಾನವು ಸಂಭವಿಸುವುದೆAದು ನಾನು ಭಾವಿಸುವುದಿಲ್ಲ ಒಂದು ವೇಳೆ ನಾನು ನನ್ನ ಪ್ರಭುವಿನೆಡೆಗೆ ಮರಳಿಸಲಾದರೂ ಖಂಡಿತ ನನಗೆ ಅವನ ಬಳಿಯೂ ಅತ್ಯುತ್ತಮವಾದುದೇ ಇರುವುದು ಎಂದು ಹೇಳುತ್ತಾನೆ. ಖಂಡಿತವಾಗಿಯು ನಾವು ಆ ಸತ್ಯನಿಷೇಧಿಗಳಿಗೆ ಅವರ ಕರ್ಮಗಳ ಬಗ್ಗೆ ತಿಳಿಸಲಿದ್ದೇವೆ ಹಾಗೂ ಅವರಿಗೆ ಕಠಿಣಯಾತನೆಯ ಸವಿಯುನ್ನುಣಿಸಲಿದ್ದೇವೆ. info
التفاسير:

external-link copy
51 : 41

وَاِذَاۤ اَنْعَمْنَا عَلَی الْاِنْسَانِ اَعْرَضَ وَنَاٰ بِجَانِبِهٖ ۚ— وَاِذَا مَسَّهُ الشَّرُّ فَذُوْ دُعَآءٍ عَرِیْضٍ ۟

ಮತ್ತು ನಾವು ಮನುಷ್ಯನಿಗೆ ಯಾವುದಾದರು ಅನುಗ್ರಹವನ್ನು ನೀಡಿದರೆ ಅವನು ವಿಮುಖನಾಗುತ್ತಾನೆ ಮತ್ತು ದೂರ ಸರಿದು ಬಿಡುತ್ತಾನೆ ಒಂದು ವೇಳೆ ಅವನಿಗೆನಾದರೂ ಸಂಕಷ್ಟವು ಬಾಧಿಸಿದರೆ ಅವನು ಉದ್ದುದ್ದ ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ. info
التفاسير:

external-link copy
52 : 41

قُلْ اَرَءَیْتُمْ اِنْ كَانَ مِنْ عِنْدِ اللّٰهِ ثُمَّ كَفَرْتُمْ بِهٖ مَنْ اَضَلُّ مِمَّنْ هُوَ فِیْ شِقَاقٍ بَعِیْدٍ ۟

ಓ ಪೈಗಂಬರರೇ ಹೇಳಿರಿ: ಈ ಖುರ್‌ಆನ್ ಅಲ್ಲಾಹನ ಕಡೆಯಿಂದ ಬಂದಿದ್ದು, ನಂತರ ನೀವು ಅದನ್ನು ನಿರಾಕರಿಸಿದ್ದರೆ ಇದರ ವಿರೋಧದಲ್ಲಿ ದೂರ ಸಾಗಿ ಬಿಟ್ಟವನಿಗಿಂತ ದೊಡ್ಡ ಮಾರ್ಗಭ್ರಷ್ಟನು ಇನ್ನಾರಿದ್ದಾನೆಂದು ನೀವು ಆಲೋಚಿಸಿದ್ದೀರಾ? info
التفاسير:

external-link copy
53 : 41

سَنُرِیْهِمْ اٰیٰتِنَا فِی الْاٰفَاقِ وَفِیْۤ اَنْفُسِهِمْ حَتّٰی یَتَبَیَّنَ لَهُمْ اَنَّهُ الْحَقُّ ؕ— اَوَلَمْ یَكْفِ بِرَبِّكَ اَنَّهٗ عَلٰی كُلِّ شَیْءٍ شَهِیْدٌ ۟

ಶೀಘ್ರವೇ ನಾವು ಇವರಿಗೆ ಬಾಹ್ಯಾಕಾಶಗಳಲ್ಲೂ ಸ್ವತಃ ಅವರೊಳಗೂ ಈ ಖುರ್‌ಆನ್ ಸತ್ಯವೆಂದು ಅವರಿಗೆ ಮನದಟ್ಟಾಗುವತನಕ ನಮ್ಮ ದೃಷ್ಟಾಂತಗಳನ್ನು ತೋರಿಸಿಕೊಡಲಿದ್ದೇವೆ. ನಿಮ್ಮ ಪ್ರಭುವು ಪ್ರತಿಯೊಂದು ವಸ್ತುವಿನ ಮೇಲೆ ಸಾಕ್ಷಿಯಾಗಿದ್ದಾನೆಂದು ಸಾಲದೇ? info
التفاسير:

external-link copy
54 : 41

اَلَاۤ اِنَّهُمْ فِیْ مِرْیَةٍ مِّنْ لِّقَآءِ رَبِّهِمْ ؕ— اَلَاۤ اِنَّهٗ بِكُلِّ شَیْءٍ مُّحِیْطٌ ۟۠

ತಿಳಿಯಿರಿ ಖಂಡಿತವಾಗಿಯೂ ಇವರು ತಮ್ಮ ಪ್ರಭುವಿನ ಭೇಟಿಯ ಕುರಿತು ಸಂದೇಹದಲ್ಲಿದ್ದಾರೆ, ತಿಳಿಯಿರಿ. ಖಂಡಿತ ಅಲ್ಲಾಹನು ಸಕಲ ವಸ್ತುಗಳನ್ನೂ ಆವರಿಸಿರುತ್ತಾನೆ. info
التفاسير: