ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
39 : 41

وَمِنْ اٰیٰتِهٖۤ اَنَّكَ تَرَی الْاَرْضَ خَاشِعَةً فَاِذَاۤ اَنْزَلْنَا عَلَیْهَا الْمَآءَ اهْتَزَّتْ وَرَبَتْ ؕ— اِنَّ الَّذِیْۤ اَحْیَاهَا لَمُحْیِ الْمَوْتٰی ؕ— اِنَّهٗ عَلٰی كُلِّ شَیْءٍ قَدِیْرٌ ۟

ಅಲ್ಲಾಹನ ದೃಷ್ಟಾಂತಗಳ ಪೈಕಿ ನೀವು ಭೂಮಿಯನ್ನು ಒಣಗಿರುವುದಾಗಿ ಕಾಣುತ್ತೀರಿ. ಅನಂತರ ನಾವು ಅದರ ಮೇಲೆ ಮಳೆ ಸುರಿಸಿದಾಗ ಅದುಗರಿಗೆದರಿ ಮೊಳೆಯತೊಡಗುತ್ತದೆ. ಅದನ್ನು ಜೀವಂತಗೊಳಿಸಿದವನೇ ಖಂಡಿತ ಮೃತರನ್ನೂ ಪುನಃ ಜೀವಂತಗೊಳಿಸುವನು. ನಿಸ್ಸಂಶವಾಗಿಯು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
40 : 41

اِنَّ الَّذِیْنَ یُلْحِدُوْنَ فِیْۤ اٰیٰتِنَا لَا یَخْفَوْنَ عَلَیْنَا ؕ— اَفَمَنْ یُّلْقٰی فِی النَّارِ خَیْرٌ اَمْ مَّنْ یَّاْتِیْۤ اٰمِنًا یَّوْمَ الْقِیٰمَةِ ؕ— اِعْمَلُوْا مَا شِئْتُمْ ۙ— اِنَّهٗ بِمَا تَعْمَلُوْنَ بَصِیْرٌ ۟

ನಿಸ್ಸಂದೇಹವಾಗಿಯೂ ನಮ್ಮ ಸೂಕ್ತಿಗಳಲ್ಲಿ ವಕ್ರತೆಯನ್ನು ಉಂಟು ಮಾಡುವವರು ನಮ್ಮಿಂದ ಮರೆಯಾಗಿಲ್ಲ. ಇನ್ನು ನರಕದಲ್ಲಿ ಹಾಕಲಾಗುವವನು ಉತ್ತಮನೋ ಅಥವಾ ಪುನರುತ್ಥಾನದ ದಿನದಂದು ನಿರ್ಭಯನಾಗಿ ಬರುವವನೋ? ನೀವಿಚ್ಛಿಸುವುದನ್ನು ಮಾಡುತ್ತಿರಿ. ಅವನು ನೀವು ಮಾಡುತ್ತಿರುವುದೆಲ್ಲ ವನ್ನು ನೋಡುತ್ತಿದ್ದಾನೆ. info
التفاسير:

external-link copy
41 : 41

اِنَّ الَّذِیْنَ كَفَرُوْا بِالذِّكْرِ لَمَّا جَآءَهُمْ ۚ— وَاِنَّهٗ لَكِتٰبٌ عَزِیْزٌ ۟ۙ

ಬೋಧನೆಯು ತಮ್ಮ ಬಳಿ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದರೆ ಇದು ಪ್ರತಾಪಶಾಲಿ ಗ್ರಂಥವಾಗಿದೆ. info
التفاسير:

external-link copy
42 : 41

لَّا یَاْتِیْهِ الْبَاطِلُ مِنْ بَیْنِ یَدَیْهِ وَلَا مِنْ خَلْفِهٖ ؕ— تَنْزِیْلٌ مِّنْ حَكِیْمٍ حَمِیْدٍ ۟

ಅದರ ಮುಂದಿನಿAದಾಗಲಿ, ಹಿಂದಿನಿAದಾಗಲಿ ಮಿಥ್ಯವು ಸುಳಿಯದು. ಇದು ಸುಜ್ಞಾನಿಯೂ, ಸ್ತುತ್ಯರ್ಹನೂ ಆದ ಅಲ್ಲಾಹನಿಂದ ಅವತೀರ್ಣಗೊಂಡಿದ್ದಾಗಿದೆ. info
التفاسير:

external-link copy
43 : 41

مَا یُقَالُ لَكَ اِلَّا مَا قَدْ قِیْلَ لِلرُّسُلِ مِنْ قَبْلِكَ ؕ— اِنَّ رَبَّكَ لَذُوْ مَغْفِرَةٍ وَّذُوْ عِقَابٍ اَلِیْمٍ ۟

ನಿಮಗಿಂತ ಮುಂಚೆ ಗತಿಸಿದ ಸಂದೇಶವಾಹಕರೊAದಿಗೆ ಹೇಳಲಾಗಿದ್ದ ವಿಷಯವನ್ನೇ ನಿಮ್ಮೊಂದಿಗೂ ಹೇಳಲಾಗುತ್ತಿದೆ. ಖಂಡಿತವಾಗಿಯು ನಿಮ್ಮ ಪ್ರಭುವು ಕ್ಷಮೆಯುಳ್ಳವನೂ, ಮತ್ತು ವೇದನಾಜನಕ ಶಿಕ್ಷೆ ಕೊಡುವವನೂ ಆಗಿದ್ದಾನೆ. info
التفاسير:

external-link copy
44 : 41

وَلَوْ جَعَلْنٰهُ قُرْاٰنًا اَعْجَمِیًّا لَّقَالُوْا لَوْلَا فُصِّلَتْ اٰیٰتُهٗ ؕ— ءَاَؔعْجَمِیٌّ وَّعَرَبِیٌّ ؕ— قُلْ هُوَ لِلَّذِیْنَ اٰمَنُوْا هُدًی وَّشِفَآءٌ ؕ— وَالَّذِیْنَ لَا یُؤْمِنُوْنَ فِیْۤ اٰذَانِهِمْ وَقْرٌ وَّهُوَ عَلَیْهِمْ عَمًی ؕ— اُولٰٓىِٕكَ یُنَادَوْنَ مِنْ مَّكَانٍ بَعِیْدٍ ۟۠

ಮತ್ತು ನಾವಿದನ್ನು ಅರಬೇತರ ಭಾಷೆಯ ಖುರ್‌ಆನನ್ನಾಗಿ ಮಾಡಿ ಅವತೀರ್ಣಗೊಳಿಸಿರುತ್ತಿದ್ದರೆ ಅವರು ಹೀಗೆ ಹೇಳುತ್ತಿದ್ದರು: ಇದರ ಸೂಕ್ತಿಗಳನ್ನು ಸ್ಪಷ್ಟವಾಗಿ ಏಕೆ ವಿವರಿಸಿಲ್ಲ? ಇದು ಅರಬೇತರ ಗ್ರಂಥ ಹಾಗೂ ಅರಬ್ ಸಂದೇಶವಾಹಕ!? ಹೇಳಿರಿ: ಇದು ಸತ್ಯವಿಶ್ವಾಸವಿರಿಸಿದವರಿಗೆ ಸನ್ಮಾರ್ಗವು ಉಪಶಮನವು ಆಗಿದೆ ಮತ್ತು ವಿಶ್ವಾಸವಿಡದವರ ಕಿವಿಗಳಲ್ಲಿ (ಕಿವುಡುತನ ಹಾಗೂ) ಅವರ ಮೇಲೆ ಅಂಧತೆಯಿದೆ ಇಂತಹವರು. ಬಹುದೂರ ಪ್ರದೇಶದಿಂದ ಕರೆಯಲಾಗುವಂತಹ ಜನರಾಗಿದ್ದಾರೆ. info
التفاسير:

external-link copy
45 : 41

وَلَقَدْ اٰتَیْنَا مُوْسَی الْكِتٰبَ فَاخْتُلِفَ فِیْهِ ؕ— وَلَوْلَا كَلِمَةٌ سَبَقَتْ مِنْ رَّبِّكَ لَقُضِیَ بَیْنَهُمْ وَاِنَّهُمْ لَفِیْ شَكٍّ مِّنْهُ مُرِیْبٍ ۟

ನಿಸ್ಸಂದೇಹವಾಗಿಯೂ ನಾವು ಮೂಸಾರವರಿಗೆ ಗ್ರಂಥವನ್ನು ನೀಡಿದೆವು. ಅನಂತರ ಅದರಲ್ಲೂ ಭಿನ್ನಾಭಿಪ್ರಾಯ ತೋರಲಾಯಿತು ನಮ್ಮ ಪ್ರಭುವಿನಿಂದ ಮೊದಲೇ ನಿಶ್ಚಿತಗೊಂಡ ಮಾತು ಇಲ್ಲದಿರುತ್ತಿದ್ದರೆ (ಯಾವಾಗಲೋ )ಅವರ ನಡುವೆ ತೀರ್ಪು ಮಾಡಿಬಿಡಲಾಗುತ್ತಿತ್ತು ವಾಸ್ತವದಲ್ಲಿ ಇವರು ಅದರ (ಕುರ್‌ಆನಿನ) ಕುರಿತು ತೀವ್ರ ಸಂದೇಹದಲ್ಲಿದ್ದಾರೆ. info
التفاسير:

external-link copy
46 : 41

مَنْ عَمِلَ صَالِحًا فَلِنَفْسِهٖ ۚ— وَمَنْ اَسَآءَ فَعَلَیْهَا ؕ— وَمَا رَبُّكَ بِظَلَّامٍ لِّلْعَبِیْدِ ۟

ಯಾರು ಸತ್ಕರ್ಮವನ್ನು ಮಾಡುತ್ತಾನೋ ಅವನು ತನ್ನ ಹಿತಕ್ಕಾಗಿಯೇ ಮಾಡುತ್ತಾನೆ. ಹಾಗೂ ಯಾರು ಕೆಡುಕನ್ನು ಮಾಡುತ್ತಾನೋ ಅದರ ದುಷ್ಟರಿಣಾಮವು ಅವನ ಮೇಲೆಯೇ ಇರುತ್ತದೆ ನಮ್ಮ ಪ್ರಭುವು ತನ್ನದಾಸರ ಪಾಲಿಗೆ ಅಕ್ರಮಿಯಲ್ಲ. info
التفاسير: