ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
16 : 30

وَاَمَّا الَّذِیْنَ كَفَرُوْا وَكَذَّبُوْا بِاٰیٰتِنَا وَلِقَآئِ الْاٰخِرَةِ فَاُولٰٓىِٕكَ فِی الْعَذَابِ مُحْضَرُوْنَ ۟

ಮತ್ತು ಸತ್ಯನಿಷೇಧಿಸಿ, ನಮ್ಮ ಸೂಕ್ತಿಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿರಾಕರಿಸಿದವರು ಯಾತನೆಯಲ್ಲಿ ಹಾಜರುಗೊಳಿಸಲಾಗುವರು. info
التفاسير:

external-link copy
17 : 30

فَسُبْحٰنَ اللّٰهِ حِیْنَ تُمْسُوْنَ وَحِیْنَ تُصْبِحُوْنَ ۟

ಆದ್ದರಿಂದ ನೀವು ಸಾಯಂಕಾಲದಲ್ಲೂ ಪ್ರಾತಃಕಾಲದಲ್ಲೂ ಅಲ್ಲಾಹನ ಪಾವಿತ್ರö್ಯವನ್ನು ಕೊಂಡಾಡಿರಿ. info
التفاسير:

external-link copy
18 : 30

وَلَهُ الْحَمْدُ فِی السَّمٰوٰتِ وَالْاَرْضِ وَعَشِیًّا وَّحِیْنَ تُظْهِرُوْنَ ۟

ಆಕಾಶಗಳಲ್ಲೂ, ಭೂಮಿಯಲ್ಲೂ ಸರ್ವಸ್ತುತಿಗೆ ಅರ್ಹನು ಅವನೇ ಆಗಿದ್ದಾನೆ. ರಾತ್ರಿಯ ಪ್ರಥಮ ಹಂತದಲ್ಲೂ, ನೀವು ಮಧ್ಯಾಹ್ನದ ಹೊತ್ತಿನಲ್ಲೂ, (ಅವನ ಪಾವಿತ್ರö್ಯವನ್ನು ಕೊಂಡಾಡಿರಿ). info
التفاسير:

external-link copy
19 : 30

یُخْرِجُ الْحَیَّ مِنَ الْمَیِّتِ وَیُخْرِجُ الْمَیِّتَ مِنَ الْحَیِّ وَیُحْیِ الْاَرْضَ بَعْدَ مَوْتِهَا ؕ— وَكَذٰلِكَ تُخْرَجُوْنَ ۟۠

(ಅವನೇ) ಸಜೀವಿಯನ್ನು ನಿರ್ಜೀವಿಯಿಂದಲೂ, ನಿರ್ಜೀವಿಯನ್ನು ಸಜೀವಿಯಿಂದಲೂ ಹೊರತೆಗೆಯುತ್ತಾನೆ ಮತ್ತು ಅವನೇ ಭೂಮಿಯನ್ನು ಅದರ ನಿರ್ಜೀವದ ಬಳಿಕ ಸಜೀವಗೊಳಿಸುತ್ತಾನೆ ಮತ್ತು ಇದೇ ಪ್ರಕಾರ ನೀವೂ (ಸಮಾಧಿಗಳಿಂದ) ಹೊರತರಲಾಗುವಿರಿ. info
التفاسير:

external-link copy
20 : 30

وَمِنْ اٰیٰتِهٖۤ اَنْ خَلَقَكُمْ مِّنْ تُرَابٍ ثُمَّ اِذَاۤ اَنْتُمْ بَشَرٌ تَنْتَشِرُوْنَ ۟

ಅವನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿರುವುದು. ಅನಂತರ ನೀವು ಮನುಷ್ಯರಾಗಿ ಭೂಮಿಯಲ್ಲಿ ಹಬ್ಬುತ್ತಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ. info
التفاسير:

external-link copy
21 : 30

وَمِنْ اٰیٰتِهٖۤ اَنْ خَلَقَ لَكُمْ مِّنْ اَنْفُسِكُمْ اَزْوَاجًا لِّتَسْكُنُوْۤا اِلَیْهَا وَجَعَلَ بَیْنَكُمْ مَّوَدَّةً وَّرَحْمَةً ؕ— اِنَّ فِیْ ذٰلِكَ لَاٰیٰتٍ لِّقَوْمٍ یَّتَفَكَّرُوْنَ ۟

ಮತ್ತು ಅವನು ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರಿಂದ ಶಾಂತಿ ಹೊಂದಲೆAದು ಮತ್ತು ಅವನು ನಿಮ್ಮ ನಡುವೆ ಪ್ರೀತಿ ವಾತ್ಸಲ್ಯವನ್ನೂ ನಿಶ್ಚಯಿಸಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ. ನಿಜವಾಗಿಯೂ ಇದರಲ್ಲಿ ಚಿಂತಕರಿಗೆ ಹಲವಾರು ನಿದರ್ಶನಗಳಿವೆ. info
التفاسير:

external-link copy
22 : 30

وَمِنْ اٰیٰتِهٖ خَلْقُ السَّمٰوٰتِ وَالْاَرْضِ وَاخْتِلَافُ اَلْسِنَتِكُمْ وَاَلْوَانِكُمْ ؕ— اِنَّ فِیْ ذٰلِكَ لَاٰیٰتٍ لِّلْعٰلِمِیْنَ ۟

ಆಕಾಶಗಳ ಮತ್ತು ಭೂಮಿಯ ಸೃಷ್ಟಿ ಮತ್ತು ನಿಮ್ಮ ಭಾಷೆ ಹಾಗೂ ವರ್ಣ ವ್ಯತ್ಯಾಸವೂ ಅವನ ನಿದರ್ಶನಗಳಲ್ಲೊಂದಾಗಿದೆ. ಜ್ಞಾನಿಗಳಿಗೆ ಖಂಡಿತವಾಗಿಯು ಇದರಲ್ಲಿ ಹಲವಾರು ನಿದರ್ಶನಗಳಿವೆ. info
التفاسير:

external-link copy
23 : 30

وَمِنْ اٰیٰتِهٖ مَنَامُكُمْ بِالَّیْلِ وَالنَّهَارِ وَابْتِغَآؤُكُمْ مِّنْ فَضْلِهٖ ؕ— اِنَّ فِیْ ذٰلِكَ لَاٰیٰتٍ لِّقَوْمٍ یَّسْمَعُوْنَ ۟

ನಿಮ್ಮ ಹಗಲು ಮತ್ತು ರಾತ್ರಿಯ ನಿದ್ರೆ ಹಾಗೂ ಅವನ ಅನುಗ್ರಹವನ್ನು ಅರಸುವುದೂ ಅವನ ನಿದರ್ಶನಗಳಲ್ಲೊಂದಾಗಿದೆ. ಗಮನವಿಟ್ಟು ಆಲಿಸುವ ಜನರಿಗೆ ನಿಜವಾಗಿಯೂ ಇದರಲ್ಲಿ ಹಲವಾರು ನಿದರ್ಶನಗಳಿವೆ. info
التفاسير:

external-link copy
24 : 30

وَمِنْ اٰیٰتِهٖ یُرِیْكُمُ الْبَرْقَ خَوْفًا وَّطَمَعًا وَّیُنَزِّلُ مِنَ السَّمَآءِ مَآءً فَیُحْیٖ بِهِ الْاَرْضَ بَعْدَ مَوْتِهَا ؕ— اِنَّ فِیْ ذٰلِكَ لَاٰیٰتٍ لِّقَوْمٍ یَّعْقِلُوْنَ ۟

ಅವನು ನಿಮಗೆ ಭಯ ಹಾಗೂ ನಿರೀಕ್ಷೆಯುಂಟಾಗಲು ಮಿಂಚನ್ನು ತೋರಿಸುವುದು ಮತ್ತು ಆಕಾಶದಿಂದ ಮಳೆಯನ್ನು ವರ್ಷಿಸಿ ಅದರ ಮೂಲಕ ಭೂಮಿಯನ್ನು ಅದರ ಮರಣದ ಬಳಿಕ ಸಜೀವಗೊಳಿಸುವುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ಇದರಲ್ಲಿ ಬುದ್ಧಿವಂತರಿಗೆ ಅನೇಕ ನಿದರ್ಶನಗಳಿವೆ. info
التفاسير: