ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
6 : 30

وَعْدَ اللّٰهِ ؕ— لَا یُخْلِفُ اللّٰهُ وَعْدَهٗ وَلٰكِنَّ اَكْثَرَ النَّاسِ لَا یَعْلَمُوْنَ ۟

ಇದು ಅಲ್ಲಾಹನ ವಾಗ್ದಾನವಾಗಿದೆ. ಅಲ್ಲಾಹನು ತನ್ನ ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ. info
التفاسير:

external-link copy
7 : 30

یَعْلَمُوْنَ ظَاهِرًا مِّنَ الْحَیٰوةِ الدُّنْیَا ۖۚ— وَهُمْ عَنِ الْاٰخِرَةِ هُمْ غٰفِلُوْنَ ۟

ಅವರು ಇಹಲೋಕದ ಜೀವನದ ಬಾಹ್ಯ ಸಂಗತಿಯನ್ನು ಅರಿತುಕೊಂಡಿದ್ದಾರೆ ಆದರೆ ಅವರು ಪರಲೋಕದ ಬಗ್ಗೆ ತೀರ ಅಲಕ್ಷö್ಯರಾಗಿದ್ದಾರೆ. info
التفاسير:

external-link copy
8 : 30

اَوَلَمْ یَتَفَكَّرُوْا فِیْۤ اَنْفُسِهِمْ ۫— مَا خَلَقَ اللّٰهُ السَّمٰوٰتِ وَالْاَرْضَ وَمَا بَیْنَهُمَاۤ اِلَّا بِالْحَقِّ وَاَجَلٍ مُّسَمًّی ؕ— وَاِنَّ كَثِیْرًا مِّنَ النَّاسِ بِلِقَآئِ رَبِّهِمْ لَكٰفِرُوْنَ ۟

ಅವರು ತಮ್ಮ ಮನಸ್ಸಿನಲ್ಲಿ ಆಲೋಚಿಸಲಿಲ್ಲವೇ? ಆಕಾಶಗಳನ್ನೂ, ಭೂಮಿಯನ್ನೂ ಮತ್ತು ಅವೆರಡರ ಮಧ್ಯೆಯಿರುವುದನ್ನು ಅಲ್ಲಾಹನು ಸತ್ಯಪೂರ್ಣವಾಗಿ ಒಂದು ನಿಶ್ಚಿತ ಕಾಲಾವಧಿಯವರೆಗೆ ಸೃಷ್ಟಿಸಿರುತ್ತಾನೆ. ಆದರೆ ವಾಸ್ತವದಲ್ಲಿ ಹೆಚ್ಚಿನ ಜನರು ತಮ್ಮ ಪ್ರಭುವಿನ ಭೇಟಿಯನ್ನು ನಿರಾಕರಿಸುವವರಾಗಿದ್ದಾರೆ. info
التفاسير:

external-link copy
9 : 30

اَوَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ مِنْ قَبْلِهِمْ ؕ— كَانُوْۤا اَشَدَّ مِنْهُمْ قُوَّةً وَّاَثَارُوا الْاَرْضَ وَعَمَرُوْهَاۤ اَكْثَرَ مِمَّا عَمَرُوْهَا وَجَآءَتْهُمْ رُسُلُهُمْ بِالْبَیِّنٰتِ ؕ— فَمَا كَانَ اللّٰهُ لِیَظْلِمَهُمْ وَلٰكِنْ كَانُوْۤا اَنْفُسَهُمْ یَظْلِمُوْنَ ۟ؕ

ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚಿನವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚು ಬಲಿಷ್ಠರಾಗಿದ್ದರು. ಮತ್ತು ಅವರೂ ಭೂಮಿಯಲ್ಲಿ ವ್ಯವಸಾಯ ಮಾಡಿ ಫಲ ಪ್ರದಾಯಾವಾಗಿಸಿ ಇವರಿಗಿಂತ ಅಧಿಕವಾಗಿ ಸಂಪನ್ನಗೊಳಿಸಿದರು. ಮತ್ತು ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರಿಗೆ ಅನ್ಯಾಯ ಮಾಡಲಿಲ್ಲ. ಆದರೆ ಅವರು ತಮ್ಮ ಮೇಲೆ ಅನ್ಯಾಯ ಮಾಡುತ್ತಿದ್ದರು. info
التفاسير:

external-link copy
10 : 30

ثُمَّ كَانَ عَاقِبَةَ الَّذِیْنَ اَسَآءُوا السُّوْٓاٰۤی اَنْ كَذَّبُوْا بِاٰیٰتِ اللّٰهِ وَكَانُوْا بِهَا یَسْتَهْزِءُوْنَ ۟۠

ಅನಂತರ ದುಷ್ಕೃತ್ಯ ಮಾಡುತ್ತಿದ್ದವರ ಪರಿಣಾಮವು ಅತ್ಯಂತ ಕೆಟ್ಟದಾಯಿತು. ಇದೇಕೆಂದರೆ ಅವರು ಅಲ್ಲಾಹನ ದೃಷ್ಟಾಂತಗಳನ್ನು ನಿರಾಕರಿಸಿದರು ಮತ್ತು ಅವರು ಅವುಗಳ ಪರಿಹಾಸ್ಯ ಮಾಡುತ್ತಿದ್ದರು. info
التفاسير:

external-link copy
11 : 30

اَللّٰهُ یَبْدَؤُا الْخَلْقَ ثُمَّ یُعِیْدُهٗ ثُمَّ اِلَیْهِ تُرْجَعُوْنَ ۟

ಅಲ್ಲಾಹನೇ ಸೃಷ್ಟಿಯ ಆರಂಭ ಮಾಡುತ್ತಾನೆ. ಅನಂತರ ಅವನೇ ಅದನ್ನು ಪುನರಾವರ್ತಿಸುವನು. ತರುವಾಯ ನೀವೆಲ್ಲರೂ ಅವನೆಡೆಗೇ ಮರಳಿಸಲಾಗುವಿರಿ. info
التفاسير:

external-link copy
12 : 30

وَیَوْمَ تَقُوْمُ السَّاعَةُ یُبْلِسُ الْمُجْرِمُوْنَ ۟

ಮತ್ತು ಅಂತ್ಯ ಗಳಿಗೆ ಬರುವ ದಿನದಂದು ಅಪರಾಧಿಗಳು ನಿರಾಶರಾಗಿ ಬಿಡುವರು. info
التفاسير:

external-link copy
13 : 30

وَلَمْ یَكُنْ لَّهُمْ مِّنْ شُرَكَآىِٕهِمْ شُفَعٰٓؤُا وَكَانُوْا بِشُرَكَآىِٕهِمْ كٰفِرِیْنَ ۟

ಮತ್ತು ಅವರು ಸಹಭಾಗಿಗಳನ್ನಾಗಿ ಮಾಡಿಕೊಂಡ ದೇವರುಗಳ ಪೈಕಿ ಯಾರೂ ಅವರಿಗೆ ಶಿಫಾರಸ್ಸುಗಾರರಾಗಲಾರರು. ಮತ್ತು ಅವರೂ ಸಹ ತಮ್ಮ ಸಹಭಾಗಿ ದೇವರುಗಳ ನಿಷೇಧಿಗಳಾಗಿ ಬಿಡುವರು. info
التفاسير:

external-link copy
14 : 30

وَیَوْمَ تَقُوْمُ السَّاعَةُ یَوْمَىِٕذٍ یَّتَفَرَّقُوْنَ ۟

ಮತ್ತು ಅಂತ್ಯ ಗಳಿಗೆ ಬರುವ ದಿನ ಅಂದು ಅವರು (ಸತ್ಯವಿಶ್ವಾಸಿ ಹಾಗೂ ಸತ್ಯನಿಷೇಧಿಗಳು) ಬೇರೆ ಬೇರೆಯಾಗುವರು. info
التفاسير:

external-link copy
15 : 30

فَاَمَّا الَّذِیْنَ اٰمَنُوْا وَعَمِلُوا الصَّلِحٰتِ فَهُمْ فِیْ رَوْضَةٍ یُّحْبَرُوْنَ ۟

ಆದರೆ ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಳ್ಳುವವರು ಒಂದು ಸ್ವರ್ಗೋದ್ಯಾನದಲ್ಲಿ ಹರ್ಷ ಉಲ್ಲಾಸದಲ್ಲಿರಿಸಲಾಗುವರು. info
التفاسير: