クルアーンの対訳 - カンナダ語対訳 - Hamza Batur

ページ番号:close

external-link copy
257 : 2

اَللّٰهُ وَلِیُّ الَّذِیْنَ اٰمَنُوْا یُخْرِجُهُمْ مِّنَ الظُّلُمٰتِ اِلَی النُّوْرِ ؕ۬— وَالَّذِیْنَ كَفَرُوْۤا اَوْلِیٰٓـُٔهُمُ الطَّاغُوْتُ یُخْرِجُوْنَهُمْ مِّنَ النُّوْرِ اِلَی الظُّلُمٰتِ ؕ— اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟۠

ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನು. ಅವನು ಅವರನ್ನು ಅಂಧಕಾರಗಳಿಂದ ಬೆಳಕಿಗೆ ತರುತ್ತಾನೆ. ಅಲ್ಲಾಹನ ಹೊರತಾದ ದೇವರುಗಳು ಸತ್ಯನಿಷೇಧಿಗಳ ಸಂರಕ್ಷಕರಾಗಿದ್ದಾರೆ. ಅವರು ಅವರನ್ನು ಬೆಳಕಿನಿಂದ ಅಂಧಕಾರಗಳಿಗೆ ಸಾಗಿಸುತ್ತಾರೆ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. info
التفاسير:

external-link copy
258 : 2

اَلَمْ تَرَ اِلَی الَّذِیْ حَآجَّ اِبْرٰهٖمَ فِیْ رَبِّهٖۤ اَنْ اٰتٰىهُ اللّٰهُ الْمُلْكَ ۘ— اِذْ قَالَ اِبْرٰهٖمُ رَبِّیَ الَّذِیْ یُحْیٖ وَیُمِیْتُ ۙ— قَالَ اَنَا اُحْیٖ وَاُمِیْتُ ؕ— قَالَ اِبْرٰهٖمُ فَاِنَّ اللّٰهَ یَاْتِیْ بِالشَّمْسِ مِنَ الْمَشْرِقِ فَاْتِ بِهَا مِنَ الْمَغْرِبِ فَبُهِتَ الَّذِیْ كَفَرَ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟ۚ

ಇಬ್ರಾಹೀಮರೊಡನೆ ಅವರ ಪರಿಪಾಲಕನ (ಅಲ್ಲಾಹನ) ವಿಷಯದಲ್ಲಿ ತರ್ಕಿಸಿದವನನ್ನು ನೀವು ನೋಡಿಲ್ಲವೇ? ಅಲ್ಲಾಹು ಅವನಿಗೆ ಸಾಮ್ರಾಜ್ಯವನ್ನು ದಯಪಾಲಿಸಿದ್ದನು. "ನನ್ನ ಪರಿಪಾಲಕನು (ಅಲ್ಲಾಹು) ಜೀವ ಮತ್ತು ಮರಣವನ್ನು ನೀಡುತ್ತಾನೆ" ಎಂದು ಇಬ್ರಾಹೀಂ ಹೇಳಿದಾಗ, "ನಾನು ಕೂಡ ಜೀವ ಮತ್ತು ಮರಣವನ್ನು ನೀಡುತ್ತೇನೆ" ಎಂದು ಅವನು ಹೇಳಿದನು. ಇಬ್ರಾಹೀಂ ಹೇಳಿದರು: "ಅಲ್ಲಾಹು ಸೂರ್ಯನನ್ನು ಪೂರ್ವದಿಂದ ತರುತ್ತಾನೆ; ನೀವು ಅದನ್ನು ಪಶ್ಚಿಮದಿಂದ ತನ್ನಿರಿ!" ಆಗ ಆ ಸತ್ಯನಿಷೇಧಿ ಮೂಕವಿಸ್ಮಿತನಾದನು. ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. info
التفاسير:

external-link copy
259 : 2

اَوْ كَالَّذِیْ مَرَّ عَلٰی قَرْیَةٍ وَّهِیَ خَاوِیَةٌ عَلٰی عُرُوْشِهَا ۚ— قَالَ اَنّٰی یُحْیٖ هٰذِهِ اللّٰهُ بَعْدَ مَوْتِهَا ۚ— فَاَمَاتَهُ اللّٰهُ مِائَةَ عَامٍ ثُمَّ بَعَثَهٗ ؕ— قَالَ كَمْ لَبِثْتَ ؕ— قَالَ لَبِثْتُ یَوْمًا اَوْ بَعْضَ یَوْمٍ ؕ— قَالَ بَلْ لَّبِثْتَ مِائَةَ عَامٍ فَانْظُرْ اِلٰی طَعَامِكَ وَشَرَابِكَ لَمْ یَتَسَنَّهْ ۚ— وَانْظُرْ اِلٰی حِمَارِكَ۫— وَلِنَجْعَلَكَ اٰیَةً لِّلنَّاسِ وَانْظُرْ اِلَی الْعِظَامِ كَیْفَ نُنْشِزُهَا ثُمَّ نَكْسُوْهَا لَحْمًا ؕ— فَلَمَّا تَبَیَّنَ لَهٗ ۙ— قَالَ اَعْلَمُ اَنَّ اللّٰهَ عَلٰی كُلِّ شَیْءٍ قَدِیْرٌ ۟

ಅಥವಾ ಛಾವಣಿಗಳೊಂದಿಗೆ ಕುಸಿದುಬಿದ್ದ ಒಂದು ಊರಿನ ಬಳಿಯಿಂದ ಸಂಚರಿಸುತ್ತಿದ್ದ ಒಬ್ಬ ವ್ಯಕ್ತಿಯಂತೆ. ಅವರು ಕೇಳಿದರು: “ನಿರ್ಜೀವವಾದ ಬಳಿಕ ಅಲ್ಲಾಹು ಇದಕ್ಕೆ ಜೀವ ನೀಡುವುದು ಹೇಗೆ?” ಆಗ ಅಲ್ಲಾಹು ಅವರನ್ನು ನೂರು ವರ್ಷಗಳ ಕಾಲ ಮೃತ್ಯುವಶಗೊಳಿಸಿದನು. ನಂತರ ಅವರಿಗೆ ಜೀವ ನೀಡಿ ಎಬ್ಬಿಸಿ ಕೇಳಿದನು: “ನೀವು ಎಷ್ಟು ವರ್ಷ ಕಳೆದಿರಿ?” ಅವರು ಉತ್ತರಿಸಿದರು: “ಒಂದು ದಿನ ಅಥವಾ ದಿನದ ಕೆಲವು ತಾಸುಗಳು.” ಅಲ್ಲಾಹು ಹೇಳಿದನು: “ಅಲ್ಲ, ವಾಸ್ತವವಾಗಿ ನೀವು ನೂರು ವರ್ಷ ಕಳೆದಿದ್ದೀರಿ. ನೀವು ನಿಮ್ಮ ಆಹಾರ-ಪಾನೀಯಗಳನ್ನು ನೋಡಿರಿ. ಅವು ಹಾಳಾಗಿಲ್ಲ. ನಿಮ್ಮ ಕತ್ತೆಯನ್ನು ನೋಡಿರಿ. ನಾವು ನಿಮ್ಮನ್ನು ಜನರಿಗೊಂದು ದೃಷ್ಟಾಂತವಾಗಿ ಮಾಡುತ್ತೇವೆ. ನಾವು ಆ ಮೂಳೆಗಳನ್ನು ಹೇಗೆ ಜೋಡಿಸುತ್ತೇವೆ ಮತ್ತು ಅವುಗಳಿಗೆ ಹೇಗೆ ಮಾಂಸವನ್ನು ಹೊದಿಯುತ್ತೇವೆಂದು ನೋಡಿರಿ.” ಅವರಿಗೆ ವಿಷಯವು ಸ್ಪಷ್ಟವಾದಾಗ ಅವರು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹನಿಗೆ ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವಿದೆಯೆಂದು ನನಗೆ ತಿಳಿದಿದೆ.” info
التفاسير: