クルアーンの対訳 - カンナダ語対訳 - Hamza Batur

ಮರ್ಯಮ್

external-link copy
1 : 19

كٓهٰیٰعٓصٓ ۟

ಕಾಫ್ ಹಾ ಯಾ ಐನ್ ಸ್ವಾದ್. info
التفاسير:

external-link copy
2 : 19

ذِكْرُ رَحْمَتِ رَبِّكَ عَبْدَهٗ زَكَرِیَّا ۟ۖۚ

ಇದು ನಿಮ್ಮ ಪರಿಪಾಲಕನು (ಅಲ್ಲಾಹು) ತನ್ನ ದಾಸ ಝಕರಿಯ್ಯಾರಿಗೆ ದಯಪಾಲಿಸಿದ ದಯೆಯ ಉಲ್ಲೇಖವಾಗಿದೆ. info
التفاسير:

external-link copy
3 : 19

اِذْ نَادٰی رَبَّهٗ نِدَآءً خَفِیًّا ۟

ಅವರು (ಝಕರಿಯ್ಯಾ) ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ರಹಸ್ಯವಾಗಿ ಕರೆದು ಪ್ರಾರ್ಥಿಸಿದ ಸಂದರ್ಭ. info
التفاسير:

external-link copy
4 : 19

قَالَ رَبِّ اِنِّیْ وَهَنَ الْعَظْمُ مِنِّیْ وَاشْتَعَلَ الرَّاْسُ شَیْبًا وَّلَمْ اَكُنْ بِدُعَآىِٕكَ رَبِّ شَقِیًّا ۟

ಅವರು ಹೇಳಿದರು: “ನನ್ನ ಪರಿಪಾಲಕನೇ! ನನ್ನ ಮೂಳೆಗಳು ದುರ್ಬಲವಾಗಿವೆ. ವಯಸ್ಸಾಗಿ ತಲೆಯು ಬೆಳ್ಳಗಾಗಿದೆ. ನನ್ನ ಪರಿಪಾಲಕನೇ! ನಿನ್ನಲ್ಲಿ ಪ್ರಾರ್ಥಿಸಿ ನಾನು ಯಾವತ್ತೂ ನಿರಾಶನಾಗಿಲ್ಲ. info
التفاسير:

external-link copy
5 : 19

وَاِنِّیْ خِفْتُ الْمَوَالِیَ مِنْ وَّرَآءِیْ وَكَانَتِ امْرَاَتِیْ عَاقِرًا فَهَبْ لِیْ مِنْ لَّدُنْكَ وَلِیًّا ۟ۙ

ನಿಶ್ಚಯವಾಗಿಯೂ, ನನ್ನ ಮರಣಾನಂತರ ನನ್ನ ಕುಟುಂಬದವರ ಬಗ್ಗೆ ನಾನು ಭಯವಾಗುತ್ತಿದೆ. ನನ್ನ ಪತ್ನಿ ಬಂಜೆಯಾಗಿದ್ದಾಳೆ. ಆದ್ದರಿಂದ ನನಗೆ ನಿನ್ನ ಕಡೆಯಿಂದ ಒಬ್ಬ ಉತ್ತರಾಧಿಕಾರಿಯನ್ನು ಕರುಣಿಸು. info
التفاسير:

external-link copy
6 : 19

یَّرِثُنِیْ وَیَرِثُ مِنْ اٰلِ یَعْقُوْبَ ۗ— وَاجْعَلْهُ رَبِّ رَضِیًّا ۟

ಅವನು ನನ್ನ ವಾರಸುದಾರ ಮತ್ತು ಯಾಕೂಬ್ ಕುಟುಂಬದ ವಾರಸುದಾರನಾಗಿರಲಿ. ಓ ನನ್ನ ಪರಿಪಾಲಕನೇ! ಅವನನ್ನು ಸಂತೃಪ್ತ ದಾಸನನ್ನಾಗಿ ಮಾಡು.” info
التفاسير:

external-link copy
7 : 19

یٰزَكَرِیَّاۤ اِنَّا نُبَشِّرُكَ بِغُلٰمِ ١سْمُهٗ یَحْیٰی ۙ— لَمْ نَجْعَلْ لَّهٗ مِنْ قَبْلُ سَمِیًّا ۟

“ಓ ಝಕರಿಯ್ಯಾ! ನಿಶ್ಚಯವಾಗಿಯೂ ನಾವು ನಿಮಗೆ ಒಬ್ಬ ಪುತ್ರನ ಜನನದ ಬಗ್ಗೆ ಶುಭವಾರ್ತೆ ನೀಡುತ್ತಿದ್ದೇವೆ. ಅವನ ಹೆಸರು ಯಹ್ಯಾ. ಇದಕ್ಕಿಂತ ಮೊದಲು ನಾವು ಯಾರಿಗೂ ಆ ಹೆಸರನ್ನು ನೀಡಿಲ್ಲ.” info
التفاسير:

external-link copy
8 : 19

قَالَ رَبِّ اَنّٰی یَكُوْنُ لِیْ غُلٰمٌ وَّكَانَتِ امْرَاَتِیْ عَاقِرًا وَّقَدْ بَلَغْتُ مِنَ الْكِبَرِ عِتِیًّا ۟

ಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಬ್ಬ ಪುತ್ರ ಉಂಟಾಗುವುದು ಹೇಗೆ? ನನ್ನ ಪತ್ನಿ ಬಂಜೆಯಾಗಿದ್ದಾಳೆ. ನಾನಂತೂ ವಯೋವೃದ್ಧನಾಗಿ ಬಿಟ್ಟಿದ್ದೇನೆ.” info
التفاسير:

external-link copy
9 : 19

قَالَ كَذٰلِكَ ۚ— قَالَ رَبُّكَ هُوَ عَلَیَّ هَیِّنٌ وَّقَدْ خَلَقْتُكَ مِنْ قَبْلُ وَلَمْ تَكُ شَیْـًٔا ۟

ಅಲ್ಲಾಹು ಹೇಳಿದನು: “ಅದು ಹಾಗೆಯೇ ಆಗಿದೆ. ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳುತ್ತಾನೆ: ಅದು ನನಗೆ ಅತ್ಯಂತ ಸುಲಭವಾಗಿದೆ. ಇದಕ್ಕೆ ಮೊದಲು, ನೀವು ಅಸ್ತಿತ್ವದಲ್ಲೇ ಇರದಿದ್ದಾಗ ನಾನು ನಿಮ್ಮನ್ನು ಸೃಷ್ಟಿಸಿದ್ದೇನೆ.” info
التفاسير:

external-link copy
10 : 19

قَالَ رَبِّ اجْعَلْ لِّیْۤ اٰیَةً ؕ— قَالَ اٰیَتُكَ اَلَّا تُكَلِّمَ النَّاسَ ثَلٰثَ لَیَالٍ سَوِیًّا ۟

ಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಂದು ದೃಷ್ಟಾಂತವನ್ನು ನಿಶ್ಚಯಿಸಿಕೊಡು.” ಅಲ್ಲಾಹು ಹೇಳಿದನು: “ನೀವು ಸರಿಯಾಗಿದ್ದರೂ ಸಹ ಮೂರು ರಾತ್ರಿಗಳವರೆಗೆ ಜನರೊಡನೆ ಮಾತನಾಡಲು ನಿಮಗೆ ಸಾಧ್ಯವಾಗದಿರುವುದು ನಿಮಗಿರುವ ದೃಷ್ಟಾಂತವಾಗಿದೆ.” info
التفاسير:

external-link copy
11 : 19

فَخَرَجَ عَلٰی قَوْمِهٖ مِنَ الْمِحْرَابِ فَاَوْحٰۤی اِلَیْهِمْ اَنْ سَبِّحُوْا بُكْرَةً وَّعَشِیًّا ۟

ನಂತರ ಅವರು ಪ್ರಾರ್ಥನಾ ಕೊಠಡಿಯಿಂದ ಜನರ ಬಳಿಗೆ ತೆರಳಿ, “ನೀವು ಮುಂಜಾನೆ ಮತ್ತು ಸಂಜೆ ಅಲ್ಲಾಹನ ಪರಿಶುದ್ಧತೆಯನ್ನು ಕೊಂಡಾಡಿರಿ” ಎಂದು ಸನ್ನೆ ಮಾಡಿ ಹೇಳಿದರು. info
التفاسير: