クルアーンの対訳 - カンナダ語対訳 - Hamza Batur

ページ番号:close

external-link copy
119 : 16

ثُمَّ اِنَّ رَبَّكَ لِلَّذِیْنَ عَمِلُوا السُّوْٓءَ بِجَهَالَةٍ ثُمَّ تَابُوْا مِنْ بَعْدِ ذٰلِكَ وَاَصْلَحُوْۤا اِنَّ رَبَّكَ مِنْ بَعْدِهَا لَغَفُوْرٌ رَّحِیْمٌ ۟۠

ಯಾರು ಅಜ್ಞಾನದಿಂದ ಪಾಪ ಮಾಡಿ ನಂತರ ಪಶ್ಚಾತ್ತಾಪಪಟ್ಟು ಸ್ವಯಂ ಸುಧಾರಿಸಿಕೊಳ್ಳುತ್ತಾರೋ—ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು ಅದರ ಬಳಿಕವೂ ಅವರನ್ನು ಕ್ಷಮಿಸುವನು ಮತ್ತು ಅವರಿಗೆ ದಯೆ ತೋರುವನು. info
التفاسير:

external-link copy
120 : 16

اِنَّ اِبْرٰهِیْمَ كَانَ اُمَّةً قَانِتًا لِّلّٰهِ حَنِیْفًا ؕ— وَلَمْ یَكُ مِنَ الْمُشْرِكِیْنَ ۟ۙ

ನಿಶ್ಚಯವಾಗಿಯೂ ಇಬ್ರಾಹೀಮರು ಒಬ್ಬ ಮುಖಂಡರಾಗಿದ್ದರು. ಅವರು ಅಲ್ಲಾಹನಿಗೆ ವಿಧೇಯತೆ ತೋರುವವರು ಮತ್ತು ಏಕನಿಷ್ಠರಾಗಿದ್ದರು. ಅವರು ಬಹುದೇವವಿಶ್ವಾಸಿಗಳಲ್ಲಿ ಸೇರಿದವರಾಗಿರಲಿಲ್ಲ. info
التفاسير:

external-link copy
121 : 16

شَاكِرًا لِّاَنْعُمِهٖ ؕ— اِجْتَبٰىهُ وَهَدٰىهُ اِلٰی صِرَاطٍ مُّسْتَقِیْمٍ ۟

ಅವರು ಅಲ್ಲಾಹನ ಅನುಗ್ರಹಗಳಿಗೆ ಆಭಾರಿಯಾಗಿದ್ದರು. ಅಲ್ಲಾಹು ಅವರನ್ನು ಆರಿಸಿದ್ದನು ಮತ್ತು ನೇರಮಾರ್ಗಕ್ಕೆ ಸೇರಿಸಿದ್ದನು. info
التفاسير:

external-link copy
122 : 16

وَاٰتَیْنٰهُ فِی الدُّنْیَا حَسَنَةً ؕ— وَاِنَّهٗ فِی الْاٰخِرَةِ لَمِنَ الصّٰلِحِیْنَ ۟ؕ

ನಾವು ಅವರಿಗೆ ಇಹಲೋಕದಲ್ಲೇ ಒಳಿತನ್ನು ದಯಪಾಲಿಸಿದ್ದೇವೆ. ಪರಲೋಕದಲ್ಲಿ ಅವರು ನಿಶ್ಚಯವಾಗಿಯೂ ನೀತಿವಂತರಲ್ಲಿ ಸೇರುವರು. info
التفاسير:

external-link copy
123 : 16

ثُمَّ اَوْحَیْنَاۤ اِلَیْكَ اَنِ اتَّبِعْ مِلَّةَ اِبْرٰهِیْمَ حَنِیْفًا ؕ— وَمَا كَانَ مِنَ الْمُشْرِكِیْنَ ۟

ನಂತರ, ನಾವು ನಿಮಗೆ, “ಏಕನಿಷ್ಠರಾದ ಇಬ್ರಾಹೀಮರ ಧರ್ಮವನ್ನು ಹಿಂಬಾಲಿಸಿರಿ” ಎಂದು ದೇವವಾಣಿಯನ್ನು ನೀಡಿದೆವು. ಅವರು ಬಹುದೇವವಿಶ್ವಾಸಿಗಳಲ್ಲಿ ಸೇರಿದವರಾಗಿರಲಿಲ್ಲ. info
التفاسير:

external-link copy
124 : 16

اِنَّمَا جُعِلَ السَّبْتُ عَلَی الَّذِیْنَ اخْتَلَفُوْا فِیْهِ ؕ— وَاِنَّ رَبَّكَ لَیَحْكُمُ بَیْنَهُمْ یَوْمَ الْقِیٰمَةِ فِیْمَا كَانُوْا فِیْهِ یَخْتَلِفُوْنَ ۟

ಸಬ್ಬತ್‌ನ ವಿಷಯದಲ್ಲಿ ಭಿನ್ನಮತ ತಳೆದವರ ಮೇಲೆಯೇ ಅದನ್ನು ಗೌರವಿಸಬೇಕೆಂದು ನಾವು ವಿಧಿಸಿದೆವು. ಅವರು ಯಾವ ವಿಷಯದಲ್ಲಿ ಭಿನ್ನಮತ ತಳೆದರೋ ಆ ವಿಷಯದಲ್ಲಿ ನಿಮ್ಮ ಪರಿಪಾಲಕನು (ಅಲ್ಲಾಹು) ಪುನರುತ್ಥಾನ ದಿನದಂದು ಅವರ ಮಧ್ಯೆ ಖಂಡಿತ ತೀರ್ಪು ನೀಡುವನು. info
التفاسير:

external-link copy
125 : 16

اُدْعُ اِلٰی سَبِیْلِ رَبِّكَ بِالْحِكْمَةِ وَالْمَوْعِظَةِ الْحَسَنَةِ وَجَادِلْهُمْ بِالَّتِیْ هِیَ اَحْسَنُ ؕ— اِنَّ رَبَّكَ هُوَ اَعْلَمُ بِمَنْ ضَلَّ عَنْ سَبِیْلِهٖ وَهُوَ اَعْلَمُ بِالْمُهْتَدِیْنَ ۟

ವಿವೇಚನೆ ಮತ್ತು ಅತ್ಯುತ್ತಮ ಉಪದೇಶದ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಮಾರ್ಗಕ್ಕೆ ಜನರನ್ನು ಕರೆಯಿರಿ. ಅವರೊಡನೆ ಅತ್ಯುತ್ತಮ ರೀತಿಯಲ್ಲಿ ತರ್ಕಿಸಿರಿ. ತನ್ನ ಮಾರ್ಗದಿಂದ ತಪ್ಪಿಹೋದವರು ಯಾರೆಂದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಸನ್ಮಾರ್ಗದಲ್ಲಿರುವವರು ಯಾರೆಂದೂ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ. info
التفاسير:

external-link copy
126 : 16

وَاِنْ عَاقَبْتُمْ فَعَاقِبُوْا بِمِثْلِ مَا عُوْقِبْتُمْ بِهٖ ؕ— وَلَىِٕنْ صَبَرْتُمْ لَهُوَ خَیْرٌ لِّلصّٰبِرِیْنَ ۟

ನೀವು ಪ್ರತೀಕಾರ ಪಡೆಯುವುದಾದರೆ ನಿಮ್ಮ ವಿರುದ್ಧ (ವೈರಿಗಳಿಂದ) ಎಷ್ಟು ಅತಿರೇಕ ನಡೆದಿದೆಯೋ ಅಷ್ಟೇ ಪ್ರತೀಕಾರ ಪಡೆಯಿರಿ. ನೀವು ತಾಳ್ಮೆ ತೋರುವುದಾದರೆ, ತಾಳ್ಮೆಯುಳ್ಳವರಿಗೆ ಖಂಡಿತವಾಗಿಯೂ ಅದೇ ಅತ್ಯುತ್ತಮವಾಗಿದೆ. info
التفاسير:

external-link copy
127 : 16

وَاصْبِرْ وَمَا صَبْرُكَ اِلَّا بِاللّٰهِ وَلَا تَحْزَنْ عَلَیْهِمْ وَلَا تَكُ فِیْ ضَیْقٍ مِّمَّا یَمْكُرُوْنَ ۟

(ಪ್ರವಾದಿಯವರೇ) ತಾಳ್ಮೆ ತೋರಿರಿ. ಅಲ್ಲಾಹನ ಕೃಪೆಯಿಂದಲೇ ನೀವು ತಾಳ್ಮೆ ತೋರುತ್ತೀರಿ. ಅವರ ಬಗ್ಗೆ ನೊಂದುಕೊಳ್ಳಬೇಡಿ. ಅವರು ಮಾಡುವ ಪಿತೂರಿಗಳನ್ನು ನೋಡಿ ಸಂಕಟಪಡಬೇಡಿ. info
التفاسير:

external-link copy
128 : 16

اِنَّ اللّٰهَ مَعَ الَّذِیْنَ اتَّقَوْا وَّالَّذِیْنَ هُمْ مُّحْسِنُوْنَ ۟۠

ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಮತ್ತು ನೀತಿವಂತರೊಡನೆ ಇದ್ದಾನೆ. info
التفاسير: