クルアーンの対訳 - カンナダ語対訳 - Bashir Mysore

ページ番号:close

external-link copy
17 : 8

فَلَمْ تَقْتُلُوْهُمْ وَلٰكِنَّ اللّٰهَ قَتَلَهُمْ ۪— وَمَا رَمَیْتَ اِذْ رَمَیْتَ وَلٰكِنَّ اللّٰهَ رَمٰی ۚ— وَلِیُبْلِیَ الْمُؤْمِنِیْنَ مِنْهُ بَلَآءً حَسَنًا ؕ— اِنَّ اللّٰهَ سَمِیْعٌ عَلِیْمٌ ۟

ನೀವು ಅವರನ್ನು ಕೊಂದಿಲ್ಲ. ವಾಸ್ತವದಲ್ಲಿ ಅವರನ್ನು ಕೊಂದಿದ್ದು ಅಲ್ಲಾಹನು, ನೀವು (ಬಾಣಗಳನ್ನು) ಎಸೆಯಲಿಲ್ಲ, ವಾಸ್ತವದಲ್ಲಿ ಅದನ್ನು ಎಸೆದಿದ್ದು ಅಲ್ಲಾಹನಾಗಿದ್ದಾನೆ. ಇದು ಆ ಮೂಲಕ ವಿಶ್ವಾಸಿಗಳಿಗೆ ಉತ್ತಮ ಪರೀಕ್ಷೆಗೊಳಪಡಿಸಲೆಂದಾಗಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಚೆನ್ನಾಗಿ ಆಲಿಸುವವನೂ, ಸರ್ವವನ್ನು ಅರಿಯುವವನೂ ಅಗಿದ್ದಾನೆ. info
التفاسير:

external-link copy
18 : 8

ذٰلِكُمْ وَاَنَّ اللّٰهَ مُوْهِنُ كَیْدِ الْكٰفِرِیْنَ ۟

ಇದಾಯಿತು ಇದರ ನಂತರ ಅಲ್ಲಾಹನು ಸತ್ಯನಿಷೇಧಿಗಳ ತಂತ್ರವನ್ನು ದುರ್ಬಲಗೊಳಿಸುವವನಾಗಿದ್ದನು. info
التفاسير:

external-link copy
19 : 8

اِنْ تَسْتَفْتِحُوْا فَقَدْ جَآءَكُمُ الْفَتْحُ ۚ— وَاِنْ تَنْتَهُوْا فَهُوَ خَیْرٌ لَّكُمْ ۚ— وَاِنْ تَعُوْدُوْا نَعُدْ ۚ— وَلَنْ تُغْنِیَ عَنْكُمْ فِئَتُكُمْ شَیْـًٔا وَّلَوْ كَثُرَتْ ۙ— وَاَنَّ اللّٰهَ مَعَ الْمُؤْمِنِیْنَ ۟۠

ಓ ಸತ್ಯ ನಿಷೇಧಿ ಖುರೈಷರೇ, ನೀವು ಸತ್ಯ ಅಸತ್ಯದ ವಿಜಯವನ್ನು ಬೇಡುವುದಾದರೆ ಇಗೋ ಸತ್ಯದ ವಿಜಯವು ನಿಮ್ಮ ಮುಂದಿದೆ. ಮತ್ತು ನೀವು ಹಿಂದೆ ಸರಿಯುವುದಾದರೆ ಅದು ನಿಮ್ಮ ಪಾಲಿಗೆ ಅತ್ಯುತ್ತಮವಾಗಿದೆ. ನೀವು ಪುನಃ ಅದೇ ಕೃತ್ಯವನ್ನು ಮಾಡುವುದಾದರೆ ನಾವೂ ಸಹ ಅದನ್ನು ಪುನರಾವರ್ತಿಸುವೆವು ಮತ್ತು ನಿಮ್ಮ ಸಂಖ್ಯಾಬಲವು ಎಷ್ಟು ಅಧಿಕವಿದ್ದರು ನಿಮ್ಮ ಯಾವ ಪ್ರಯೋಜನಕ್ಕೂ ಬರಲಾರದು. ವಾಸ್ತವದಲ್ಲಿ ಅಲ್ಲಾಹನು ಸತ್ಯವಿಶ್ವಾಸಿಗಳ ಜೊತೆಗಿದ್ದಾನೆ. info
التفاسير:

external-link copy
20 : 8

یٰۤاَیُّهَا الَّذِیْنَ اٰمَنُوْۤا اَطِیْعُوا اللّٰهَ وَرَسُوْلَهٗ وَلَا تَوَلَّوْا عَنْهُ وَاَنْتُمْ تَسْمَعُوْنَ ۟

ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿರಿ ಮತ್ತು ಸತ್ಯಸಂದೇಶವನ್ನು ಆಲಿಸುತ್ತಲೂ, ನೀವು ಅವರಿಂದ ವಿಮುಖರಾಗಬೇಡಿರಿ. info
التفاسير:

external-link copy
21 : 8

وَلَا تَكُوْنُوْا كَالَّذِیْنَ قَالُوْا سَمِعْنَا وَهُمْ لَا یَسْمَعُوْنَ ۟ۚ

(ಯಹೂದಿಗಳು) ಆಲಿಸದೇ ನಾವು ಆಲಿಸಿದ್ದೇವೆ ಎಂದು ವಾದಿಸುವವರಂತೆ ನೀವಾಗಬೇಡಿರಿ. info
التفاسير:

external-link copy
22 : 8

اِنَّ شَرَّ الدَّوَآبِّ عِنْدَ اللّٰهِ الصُّمُّ الْبُكْمُ الَّذِیْنَ لَا یَعْقِلُوْنَ ۟

ನಿಸ್ಸಂದೇಹವಾಗಿಯೂ ಅಲ್ಲಾಹನ ಬಳಿ ಅತ್ಯಂತ ನಿಕೃಷ್ಟ ಜೀವಿಗಳು ಚಿಂತಿಸಿ ಗ್ರಹಿಸದ ಕಿವುಡರೂ, ಮೂಕರು ಆಗಿದ್ದಾರೆ. info
التفاسير:

external-link copy
23 : 8

وَلَوْ عَلِمَ اللّٰهُ فِیْهِمْ خَیْرًا لَّاَسْمَعَهُمْ ؕ— وَلَوْ اَسْمَعَهُمْ لَتَوَلَّوْا وَّهُمْ مُّعْرِضُوْنَ ۟

ಮತ್ತು ಅಲ್ಲಾಹನು ಅವರಲ್ಲೇನಾದರೂ ಒಳಿತು ಕಂಡಿದ್ದರೆ ಅವರಿಗೆ ಆಲಿಸುವಂತೆ ಮಾಡುತ್ತಿದ್ದನು. ಇನ್ನು ಅವರಿಗೆ ಆಲಿಸುವಂತೆ ಮಾಡುತ್ತಿದ್ದರು ಅವರು ನಿರ್ಲಕ್ಷಿಸುತ್ತಾ ವಿಮುಖರಾಗುತ್ತಿದ್ದರು. info
التفاسير:

external-link copy
24 : 8

یٰۤاَیُّهَا الَّذِیْنَ اٰمَنُوا اسْتَجِیْبُوْا لِلّٰهِ وَلِلرَّسُوْلِ اِذَا دَعَاكُمْ لِمَا یُحْیِیْكُمْ ۚ— وَاعْلَمُوْۤا اَنَّ اللّٰهَ یَحُوْلُ بَیْنَ الْمَرْءِ وَقَلْبِهٖ وَاَنَّهٗۤ اِلَیْهِ تُحْشَرُوْنَ ۟

ಓ ಸತ್ಯವಿಶ್ವಾಸಿಗಳೇ, ಅಲ್ಲಾಹ್ ಮತ್ತು ಸಂದೇಶವಾಹಕರು ನಿಮಗೆ ಜೀವಚೈತನ್ಯ ನೀಡುವ ವಿಷಯದೆಡೆಗೆ ನಿಮ್ಮನ್ನು ಕರೆದಾಗ ನೀವು ಅವರಿಗೆ ಓಗೊಡಿರಿ, ಮನುಷ್ಯನ ಮತ್ತು ಅವನ ಹೃದಯದ ನಡುವೆ ಅಲ್ಲಾಹು ಅಡ್ಡವಾಗಿ ಬಿಡುತ್ತನೆಂದು ನೀವು ಅಲ್ಲಾಹನ ಬಳಿಗೇ ಒಟ್ಟುಗೂಡಿಸಲಾಗುವಿರಿ ಎಂದು ಅರಿತುಕೊಳ್ಳಿರಿ. info
التفاسير:

external-link copy
25 : 8

وَاتَّقُوْا فِتْنَةً لَّا تُصِیْبَنَّ الَّذِیْنَ ظَلَمُوْا مِنْكُمْ خَآصَّةً ۚ— وَاعْلَمُوْۤا اَنَّ اللّٰهَ شَدِیْدُ الْعِقَابِ ۟

ಮತ್ತು ನಿಮ್ಮಲ್ಲಿರುವ ಪಾಪಿಗಳಿಗೆ ಮಾತ್ರ ಸೀಮಿತವಾಗಿರದ ವಿಪತ್ತನ್ನು ನೀವು ಭಯಪಡಿರಿ. ಮತ್ತು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನೆಂಬುದನ್ನು ಅರಿತುಕೊಳ್ಳಿರಿ. info
التفاسير: