Traduzione dei Significati del Sacro Corano - Traduzione canadese - Hamza Batoor

Numero di pagina:close

external-link copy
103 : 16

وَلَقَدْ نَعْلَمُ اَنَّهُمْ یَقُوْلُوْنَ اِنَّمَا یُعَلِّمُهٗ بَشَرٌ ؕ— لِسَانُ الَّذِیْ یُلْحِدُوْنَ اِلَیْهِ اَعْجَمِیٌّ وَّهٰذَا لِسَانٌ عَرَبِیٌّ مُّبِیْنٌ ۟

“ಇವನಿಗೆ (ಪ್ರವಾದಿಗೆ) ಯಾರೋ ಒಬ್ಬ ಮನುಷ್ಯ ಕಲಿಸಿಕೊಡುತ್ತಿದ್ದಾನೆ” ಎಂದು ಅವರು ಹೇಳುತ್ತಿದ್ದಾರೆಂದು ನಮಗೆ ಖಂಡಿತ ತಿಳಿದಿದೆ. ಅವರು ಉಲ್ಲೇಖಿಸುವ ಆ ವ್ಯಕ್ತಿಯದ್ದು ಅಜಮಿ ಭಾಷೆ. ಆದರೆ ಇದು ಸ್ಪಷ್ಟ ಅರಬ್ಬಿ ಭಾಷೆಯಲ್ಲಿದೆ.[1] info

[1] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ತೌರಾತ್ ಇಂಜೀಲ್ ಕಲಿತ ಕೆಲವು ಗುಲಾಮರಿದ್ದರು. ಅವರು ಸ್ಪಷ್ಟ ಮತ್ತು ನಿರರ್ಗಳವಾಗಿ ಅರಬ್ಬಿ ಮಾತನಾಡುತ್ತಿರಲಿಲ್ಲ. ಅವರು ನಂತರ ಇಸ್ಲಾಂ ಸ್ವೀಕರಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇವರಿಂದ ಕಲಿತ ಮಾತುಗಳನ್ನು ಅಲ್ಲಾಹನ ವಚನಗಳಾದ ಕುರ್‌ಆನ್ ಎಂದು ಹೇಳುತ್ತಿದ್ದಾರೆಂದು ಮಕ್ಕಾದ ಸತ್ಯನಿಷೇಧಿಗಳು ಆರೋಪಿಸಿದರು. ಅವರಿಗೆ ಈ ವಚನದಲ್ಲಿ ಉತ್ತರ ನೀಡಲಾಗಿದೆ. ಅದೇನೆಂದರೆ, ನೀವು ಆರೋಪಿಸುವ ಆ ಜನರು ಶುದ್ಧ ಅರಬ್ಬಿ ಭಾಷೆ ಮಾತನಾಡುವವರಲ್ಲ. ಆದರೆ ಈ ಕುರ್‌ಆನ್ ಶುದ್ಧ ಮತ್ತು ಪರಮೋಚ್ಛ ಮಟ್ಟದ ಅರಬ್ಬಿ ಸಾಹಿತ್ಯ ಶೈಲಿಯಲ್ಲಿದೆ. ಇದರಂತಿರುವ ಒಂದು ಅಧ್ಯಾಯವನ್ನು ರಚಿಸಿ ತರಲು ಸಂಪೂರ್ಣ ಅರೇಬಿಯನ್ ಪರ್ಯಾಯ ದ್ವೀಪವೇ ವಿಫಲವಾಗಿದೆ. ಅರಬ್ಬಿ ಭಾಷೆ ಮಾತನಾಡದ ಜನರಿಗೂ, ಅರಬ್ಬಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲಾಗದ ಜನರಿಗೂ ಅಜಮಿ ಎಂದು ಕರೆಯಲಾಗುತ್ತದೆ.

التفاسير:

external-link copy
104 : 16

اِنَّ الَّذِیْنَ لَا یُؤْمِنُوْنَ بِاٰیٰتِ اللّٰهِ ۙ— لَا یَهْدِیْهِمُ اللّٰهُ وَلَهُمْ عَذَابٌ اَلِیْمٌ ۟

ಅಲ್ಲಾಹನ ವಚನಗಳಲ್ಲಿ ವಿಶ್ವಾಸವಿಡದವರು ಯಾರೋ—ಅವರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ. info
التفاسير:

external-link copy
105 : 16

اِنَّمَا یَفْتَرِی الْكَذِبَ الَّذِیْنَ لَا یُؤْمِنُوْنَ بِاٰیٰتِ اللّٰهِ ۚ— وَاُولٰٓىِٕكَ هُمُ الْكٰذِبُوْنَ ۟

ಅಲ್ಲಾಹನ ವಚನಗಳಲ್ಲಿ ವಿಶ್ವಾಸವಿಡದವರೇ ಸುಳ್ಳು ಸುಳ್ಳಾಗಿ ಆರೋಪಿಸುವವರು. ಅವರೇ ನಿಜವಾದ ಸುಳ್ಳುಗಾರರು. info
التفاسير:

external-link copy
106 : 16

مَنْ كَفَرَ بِاللّٰهِ مِنْ بَعْدِ اِیْمَانِهٖۤ اِلَّا مَنْ اُكْرِهَ وَقَلْبُهٗ مُطْمَىِٕنٌّۢ بِالْاِیْمَانِ وَلٰكِنْ مَّنْ شَرَحَ بِالْكُفْرِ صَدْرًا فَعَلَیْهِمْ غَضَبٌ مِّنَ اللّٰهِ ۚ— وَلَهُمْ عَذَابٌ عَظِیْمٌ ۟

ಸತ್ಯವಿಶ್ವಾಸಿಯಾದ ಬಳಿಕವೂ ಅಲ್ಲಾಹನನ್ನು ನಿಷೇಧಿಸುವವರು ಯಾರೋ—ಹೃದಯವು ಸತ್ಯವಿಶ್ವಾಸದಲ್ಲಿ ದೃಢವಾಗಿದ್ದು ಬಲವಂತಕ್ಕೊಳಗಾಗಿ (ಸತ್ಯನಿಷೇಧದ ಮಾತು ಹೇಳುವವರು) ಇದರಿಂದ ಹೊರತಾಗಿದ್ದಾರೆ.[1] ಆದರೆ ಯಾರು ಮುಕ್ತ ಹೃದಯದಿಂದ ನಿಷೇಧಿಸುತ್ತಾರೋ, ಅವರು ಅಲ್ಲಾಹನ ಕೋಪಕ್ಕೆ ತುತ್ತಾಗುತ್ತಾರೆ. ಅವರಿಗೆ ಭಯಾನಕ ಶಿಕ್ಷೆಯೂ ಇದೆ. info

[1] ಮುಸ್ಲಿಂ ವಿದ್ವಾಂಸರ ಒಕ್ಕೊರಳ ಅಭಿಪ್ರಾಯದಂತೆ ಬಲವಂತಕ್ಕೊಳಗಾಗಿ ಸತ್ಯನಿಷೇಧದ ಮಾತು ಹೇಳುವವನು ಅಥವಾ ಸತ್ಯನಿಷೇಧದ ಕೆಲಸ ಮಾಡುವವನು—ಅವನ ಹೃದಯವು ಸತ್ಯವಿಶ್ವಾಸದಲ್ಲಿ ದೃಢವಾಗಿದ್ದರೆ ಅವನು ಸತ್ಯನಿಷೇಧಿಯಾಗುವುದಿಲ್ಲ.

التفاسير:

external-link copy
107 : 16

ذٰلِكَ بِاَنَّهُمُ اسْتَحَبُّوا الْحَیٰوةَ الدُّنْیَا عَلَی الْاٰخِرَةِ ۙ— وَاَنَّ اللّٰهَ لَا یَهْدِی الْقَوْمَ الْكٰفِرِیْنَ ۟

ಅದೇಕೆಂದರೆ, ಅವರು ಪರಲೋಕಕ್ಕಿಂತಲೂ ಇಹಲೋಕವನ್ನೇ ಹೆಚ್ಚು ಇಷ್ಟಪಡುತ್ತಾರೆ. ನಿಶ್ಚಯವಾಗಿಯೂ ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. info
التفاسير:

external-link copy
108 : 16

اُولٰٓىِٕكَ الَّذِیْنَ طَبَعَ اللّٰهُ عَلٰی قُلُوْبِهِمْ وَسَمْعِهِمْ وَاَبْصَارِهِمْ ۚ— وَاُولٰٓىِٕكَ هُمُ الْغٰفِلُوْنَ ۟

ಅವರು ಯಾರೆಂದರೆ, ಅಲ್ಲಾಹು ಅವರ ಹೃದಯಗಳಿಗೆ, ಕಿವಿಗಳಿಗೆ ಮತ್ತು ದೃಷ್ಟಿಗಳಿಗೆ ಮೊಹರು ಹಾಕಿದವರು. ಅವರೇ ನಿರ್ಲಕ್ಷ್ಯರಾಗಿರುವವರು. info
التفاسير:

external-link copy
109 : 16

لَا جَرَمَ اَنَّهُمْ فِی الْاٰخِرَةِ هُمُ الْخٰسِرُوْنَ ۟

ಸಂಶಯವೇ ಇಲ್ಲ. ಪರಲೋಕದಲ್ಲಿ ಅವರು ಸಂಪೂರ್ಣ ನಷ್ಟಹೊಂದಿದವರಾಗಿರುವರು. info
التفاسير:

external-link copy
110 : 16

ثُمَّ اِنَّ رَبَّكَ لِلَّذِیْنَ هَاجَرُوْا مِنْ بَعْدِ مَا فُتِنُوْا ثُمَّ جٰهَدُوْا وَصَبَرُوْۤا ۙ— اِنَّ رَبَّكَ مِنْ بَعْدِهَا لَغَفُوْرٌ رَّحِیْمٌ ۟۠

ಹಿಂಸೆಗೆ ಗುರಿಯಾದ ಬಳಿಕವೂ ವಲಸೆ (ಹಿಜ್ರ) ಮಾಡಿದವರು, ನಂತರ ಯುದ್ಧ ಮಾಡಿದವರು ಮತ್ತು ಸ್ಥೈರ್ಯ ತೋರಿದವರು ಯಾರೋ—ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು ಅವರನ್ನು ಕ್ಷಮಿಸುವನು ಮತ್ತು ಅವರಿಗೆ ದಯೆ ತೋರುವನು. info
التفاسير: