કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર

પેજ નંબર:close

external-link copy
56 : 22

اَلْمُلْكُ یَوْمَىِٕذٍ لِّلّٰهِ ؕ— یَحْكُمُ بَیْنَهُمْ ؕ— فَالَّذِیْنَ اٰمَنُوْا وَعَمِلُوا الصّٰلِحٰتِ فِیْ جَنّٰتِ النَّعِیْمِ ۟

ಅಂದು ಸಾರ್ವಭೌಮತ್ವವು ಸಂಪೂರ್ಣವಾಗಿ ಅಲ್ಲಾಹನಿಗಾಗಿದೆ. ಅವನು ಅವರ ಮಧ್ಯೆ ತೀರ್ಪು ನೀಡುವನು. ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಸುಖಸಮೃದ್ಧವಾದ ಸ್ವರ್ಗಗಳಲ್ಲಿರುವರು. info
التفاسير:

external-link copy
57 : 22

وَالَّذِیْنَ كَفَرُوْا وَكَذَّبُوْا بِاٰیٰتِنَا فَاُولٰٓىِٕكَ لَهُمْ عَذَابٌ مُّهِیْنٌ ۟۠

ಸತ್ಯನಿಷೇಧಿಗಳು ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಯಾರೋ—ಅವರಿಗೆ ಅವಮಾನಕರ ಶಿಕ್ಷೆಯಿದೆ. info
التفاسير:

external-link copy
58 : 22

وَالَّذِیْنَ هَاجَرُوْا فِیْ سَبِیْلِ اللّٰهِ ثُمَّ قُتِلُوْۤا اَوْ مَاتُوْا لَیَرْزُقَنَّهُمُ اللّٰهُ رِزْقًا حَسَنًا ؕ— وَاِنَّ اللّٰهَ لَهُوَ خَیْرُ الرّٰزِقِیْنَ ۟

ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡಿದವರು, ನಂತರ ಹುತಾತ್ಮರಾದವರು ಅಥವಾ ನಿಧನರಾದವರು ಯಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರಿಗೆ ಅತ್ಯುತ್ತಮ ಉಪಜೀವನವನ್ನು ಒದಗಿಸುವನು. ನಿಶ್ಚಯವಾಗಿಯೂ ಉಪಜೀವನ ಒದಗಿಸುವವರಲ್ಲಿ ಅಲ್ಲಾಹು ಅತಿಶ್ರೇಷ್ಠನಾಗಿದ್ದಾನೆ. info
التفاسير:

external-link copy
59 : 22

لَیُدْخِلَنَّهُمْ مُّدْخَلًا یَّرْضَوْنَهٗ ؕ— وَاِنَّ اللّٰهَ لَعَلِیْمٌ حَلِیْمٌ ۟

ನಿಶ್ಚಯವಾಗಿಯೂ ಅವರಿಗೆ ಸಂತೃಪ್ತಿ ನೀಡುವ ಸ್ಥಳಕ್ಕೆ ಅಲ್ಲಾಹು ಅವರನ್ನು ಪ್ರವೇಶ ಮಾಡಿಸುವನು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ. info
التفاسير:

external-link copy
60 : 22

ذٰلِكَ ۚ— وَمَنْ عَاقَبَ بِمِثْلِ مَا عُوْقِبَ بِهٖ ثُمَّ بُغِیَ عَلَیْهِ لَیَنْصُرَنَّهُ اللّٰهُ ؕ— اِنَّ اللّٰهَ لَعَفُوٌّ غَفُوْرٌ ۟

ಅದು.[1] ಒಬ್ಬನು ತನ್ನ ಮೇಲೆ ನಡೆದ ದಬ್ಬಾಳಿಕೆಗೆ ಸಮಾನವಾದ ಪ್ರತೀಕಾರವನ್ನು ಪಡೆದಾಗ, ದಬ್ಬಾಳಿಕೆ ಮಾಡಿದವನು ಅವನ ಮೇಲೆ ಪುನಃ ಅತಿರೇಕವೆಸಗಿದರೆ ಅಲ್ಲಾಹು ಖಂಡಿತ ಅವನಿಗೆ ಸಹಾಯ ಮಾಡುವನು. ನಿಶ್ಚಯವಾಗಿಯೂ ಅಲ್ಲಾಹು ಮನ್ನಿಸುವವನು ಮತ್ತು ಕ್ಷಮಿಸುವವನಾಗಿದ್ದಾನೆ. info

[1] ಅಂದರೆ ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡಿ ನಂತರ ಹುತಾತ್ಮರಾದವರು ಅಥವಾ ಸ್ವಾಭಾವಿಕ ರೀತಿಯಲ್ಲಿ ನಿಧನರಾದವರು ಯಾರೋ ಅವರಿಗೆ ನಾವು ನೀಡಿದ ವಾಗ್ದಾನವು ಖಂಡಿತವಾಗಿಯೂ ನೆರವೇರುತ್ತದೆ.

التفاسير:

external-link copy
61 : 22

ذٰلِكَ بِاَنَّ اللّٰهَ یُوْلِجُ الَّیْلَ فِی النَّهَارِ وَیُوْلِجُ النَّهَارَ فِی الَّیْلِ وَاَنَّ اللّٰهَ سَمِیْعٌ بَصِیْرٌ ۟

ಅದೇಕೆಂದರೆ ಅಲ್ಲಾಹು ರಾತ್ರಿಯನ್ನು ಹಗಲಿನಲ್ಲಿ ಪ್ರವೇಶ ಮಾಡಿಸುತ್ತಾನೆ ಮತ್ತು ಹಗಲನ್ನು ರಾತ್ರಿಯಲ್ಲಿ ಪ್ರವೇಶ ಮಾಡಿಸುತ್ತಾನೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ. info
التفاسير:

external-link copy
62 : 22

ذٰلِكَ بِاَنَّ اللّٰهَ هُوَ الْحَقُّ وَاَنَّ مَا یَدْعُوْنَ مِنْ دُوْنِهٖ هُوَ الْبَاطِلُ وَاَنَّ اللّٰهَ هُوَ الْعَلِیُّ الْكَبِیْرُ ۟

ಅದೇಕೆಂದರೆ ಅಲ್ಲಾಹನೇ ಸತ್ಯ. ಅವನನ್ನು ಬಿಟ್ಟು ಅವರು ಕರೆದು ಪ್ರಾರ್ಥಿಸುತ್ತಿರುವ ದೇವರುಗಳೆಲ್ಲವೂ ಮಿಥ್ಯ. ಅಲ್ಲಾಹು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ. info
التفاسير:

external-link copy
63 : 22

اَلَمْ تَرَ اَنَّ اللّٰهَ اَنْزَلَ مِنَ السَّمَآءِ مَآءً ؗ— فَتُصْبِحُ الْاَرْضُ مُخْضَرَّةً ؕ— اِنَّ اللّٰهَ لَطِیْفٌ خَبِیْرٌ ۟ۚ

ಅಲ್ಲಾಹು ಆಕಾಶದಿಂದ ಮಳೆಯನ್ನು ಸುರಿಸಿ, ಅದರಿಂದ ಭೂಮಿಯು ಹಸಿರಾಗಿ ಕಂಗೊಳಿಸುವುದನ್ನು ನೀವು ನೋಡಿಲ್ಲವೇ? ನಿಶ್ಚಯವಾಗಿಯೂ ಅಲ್ಲಾಹು ಸಹಾನುಭೂತಿಯುಳ್ಳವನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ. info
التفاسير:

external-link copy
64 : 22

لَهٗ مَا فِی السَّمٰوٰتِ وَمَا فِی الْاَرْضِ ؕ— وَاِنَّ اللّٰهَ لَهُوَ الْغَنِیُّ الْحَمِیْدُ ۟۠

ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ನಿಶ್ಚಯವಾಗಿಯೂ ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ. info
التفاسير: