Traduction des sens du Noble Coran - La traduction en Kannada - Hamzah Batûr

ಅಬಸ್

external-link copy
1 : 80

عَبَسَ وَتَوَلّٰۤی ۟ۙ

ಅವರು (ಪ್ರವಾದಿ) ಮುಖ ಸಿಂಡರಿಸಿದರು ಮತ್ತು ವಿಮುಖರಾದರು. info
التفاسير:

external-link copy
2 : 80

اَنْ جَآءَهُ الْاَعْمٰى ۟ؕ

ಒಬ್ಬ ಕುರುಡ ಅವರ ಬಳಿಗೆ ಬಂದರು ಎಂಬ ಕಾರಣದಿಂದ.[1] info

[1] ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರೈಷ್ ಮುಖಂಡರಿಗೆ ಧರ್ಮದ ವಿಷಯಗಳನ್ನು ಹೇಳಿಕೊಟ್ಟು ಇಸ್ಲಾಂಗೆ ಆಮಂತ್ರಿಸುತ್ತಿದ್ದಾಗ, ಅವರ ಅನುಯಾಯಿಗಳಲ್ಲಿ ಒಬ್ಬರಾದ ಇಬ್ನ್ ಉಮ್ಮ್ ಮಕ್ತೂಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಿಗೆ ಬಂದು ಏನೋ ಕೇಳಿದರು. ಅವರು ಕುರುಡರಾಗಿದ್ದರು. ಆದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಡೆಗೆ ಗಮನಹರಿಸದೆ ಕುರೈಷ್ ಮುಖಂಡರಿಗೆ ಆಮಂತ್ರಣ ನೀಡುವುದನ್ನು ಮುಂದುವರಿಸಿದರು. ಇದನ್ನು ಇಲ್ಲಿ ವಿಮರ್ಶಿಸಲಾಗಿದೆ.

التفاسير:

external-link copy
3 : 80

وَمَا یُدْرِیْكَ لَعَلَّهٗ یَزَّ ۟ۙ

(ಪ್ರವಾದಿಯವರೇ!) ನಿಮಗೇನು ಗೊತ್ತು? ಆ ಕುರುಡರು ಪರಿಶುದ್ಧತೆಯನ್ನು ಪಡೆಯಬಹುದು. info
التفاسير:

external-link copy
4 : 80

اَوْ یَذَّكَّرُ فَتَنْفَعَهُ الذِّكْرٰى ۟ؕ

ಅಥವಾ ಉಪದೇಶಕ್ಕೆ ಕಿವಿಗೊಟ್ಟು, ಆ ಉಪದೇಶವು ಅವರಿಗೆ ಪ್ರಯೋಜನವಾಗಬಹುದು. info
التفاسير:

external-link copy
5 : 80

اَمَّا مَنِ اسْتَغْنٰى ۟ۙ

ಆದರೆ ಯಾರು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಪರಿಗಣಿಸುತ್ತಾನೋ, info
التفاسير:

external-link copy
6 : 80

فَاَنْتَ لَهٗ تَصَدّٰى ۟ؕ

ಅವನ ಕಡೆಗೆ ನೀವು ಪೂರ್ಣ ಗಮನ ಹರಿಸಿದಿರಿ.[1] info

[1] ಅಂದರೆ ನೀವು ಕುರೈಷ್ ಮುಖಂಡನ ಕಡೆಗೆ ಪೂರ್ಣ ಗಮನ ಹರಿಸಿದಿರಿ.

التفاسير:

external-link copy
7 : 80

وَمَا عَلَیْكَ اَلَّا یَزَّكّٰى ۟ؕ

ಅವನು ಪರಿಶುದ್ಧತೆಯನ್ನು ಪಡೆಯದಿದ್ದರೆ ನಿಮಗೇನೂ ದೋಷವಿಲ್ಲ. info
التفاسير:

external-link copy
8 : 80

وَاَمَّا مَنْ جَآءَكَ یَسْعٰى ۟ۙ

ಆದರೆ ಯಾರು ನಿಮ್ಮ ಬಳಿಗೆ ಓಡುತ್ತಾ ಬಂದರೋ, info
التفاسير:

external-link copy
9 : 80

وَهُوَ یَخْشٰى ۟ۙ

ಅಲ್ಲಾಹನನ್ನು ಭಯಪಡುವ ಸ್ಥಿತಿಯಲ್ಲಿ, info
التفاسير:

external-link copy
10 : 80

فَاَنْتَ عَنْهُ تَلَهّٰى ۟ۚ

ಅವರ ಬಗ್ಗೆ ನೀವು ಅಸಡ್ಡೆ ತೋರಿದಿರಿ. info
التفاسير:

external-link copy
11 : 80

كَلَّاۤ اِنَّهَا تَذْكِرَةٌ ۟ۚ

ಅಲ್ಲ. ನಿಶ್ಚಯವಾಗಿಯೂ ಇದು (ಕುರ್‌ಆನ್) ಒಂದು ಉಪದೇಶವಾಗಿದೆ. info
التفاسير:

external-link copy
12 : 80

فَمَنْ شَآءَ ذَكَرَهٗ ۟ۘ

ಇಚ್ಛೆಯುಳ್ಳವರು ಅದರಿಂದ ಉಪದೇಶ ಪಡೆಯಲಿ. info
التفاسير:

external-link copy
13 : 80

فِیْ صُحُفٍ مُّكَرَّمَةٍ ۟ۙ

ಅದು ಪ್ರತಿಷ್ಠಿತ ಗ್ರಂಥದಲ್ಲಿದೆ. info
التفاسير:

external-link copy
14 : 80

مَّرْفُوْعَةٍ مُّطَهَّرَةٍ ۟ۙ

ಉನ್ನತವಾದ ಮತ್ತು ಪರಿಶುದ್ಧವಾದ (ಗ್ರಂಥದಲ್ಲಿ). info
التفاسير:

external-link copy
15 : 80

بِاَیْدِیْ سَفَرَةٍ ۟ۙ

ಅದು ದೇವದೂತರುಗಳ ಕೈಗಳಲ್ಲಿವೆ. info
التفاسير:

external-link copy
16 : 80

كِرَامٍ بَرَرَةٍ ۟ؕ

ಗಣ್ಯರು ಮತ್ತು ನೀತಿವಂತರಾದ (ದೇವದೂತರುಗಳು). info
التفاسير:

external-link copy
17 : 80

قُتِلَ الْاِنْسَانُ مَاۤ اَكْفَرَهٗ ۟ؕ

ಮನುಷ್ಯನ ಮೇಲೆ ಅಲ್ಲಾಹನ ಶಾಪವಿರಲಿ! ಅವನು ಎಷ್ಟೊಂದು ಕೃತಜ್ಞತೆಯಿಲ್ಲದವನಾಗಿ ಬಿಟ್ಟಿದ್ದಾನೆ! info
التفاسير:

external-link copy
18 : 80

مِنْ اَیِّ شَیْءٍ خَلَقَهٗ ۟ؕ

ಅಲ್ಲಾಹು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದನು? info
التفاسير:

external-link copy
19 : 80

مِنْ نُّطْفَةٍ ؕ— خَلَقَهٗ فَقَدَّرَهٗ ۟ۙ

ಅವನನ್ನು ವೀರ್ಯದಿಂದ ಸೃಷ್ಟಿಸಿದನು. ನಂತರ ಅವನನ್ನು ನಿರ್ಣಯಿಸಿದನು. info
التفاسير:

external-link copy
20 : 80

ثُمَّ السَّبِیْلَ یَسَّرَهٗ ۟ۙ

ನಂತರ ಅವನಿಗೆ ಮಾರ್ಗವನ್ನು ಸುಗಮಗೊಳಿಸಿದನು. info
التفاسير:

external-link copy
21 : 80

ثُمَّ اَمَاتَهٗ فَاَقْبَرَهٗ ۟ۙ

ನಂತರ ಅವನಿಗೆ ಮರಣವನ್ನು ನೀಡಿ ಸಮಾಧಿಯಲ್ಲಿ ದಫನ ಮಾಡಿಸಿದನು. info
التفاسير:

external-link copy
22 : 80

ثُمَّ اِذَا شَآءَ اَنْشَرَهٗ ۟ؕ

ನಂತರ ಅವನು ಇಚ್ಛಿಸುವಾಗ ಅವನಿಗೆ ಪುನಃ ಜೀವ ನೀಡಿ ಎಬ್ಬಿಸುವನು. info
التفاسير:

external-link copy
23 : 80

كَلَّا لَمَّا یَقْضِ مَاۤ اَمَرَهٗ ۟ؕ

ಇಲ್ಲವೇ ಇಲ್ಲ. ಅವನು ಇಲ್ಲಿಯ ತನಕ ಅಲ್ಲಾಹನ ಆಜ್ಞೆಗಳನ್ನು ಪಾಲಿಸಲಿಲ್ಲ. info
التفاسير:

external-link copy
24 : 80

فَلْیَنْظُرِ الْاِنْسَانُ اِلٰى طَعَامِهٖۤ ۟ۙ

ಮನುಷ್ಯನು ತನ್ನ ಆಹಾರವನ್ನು ನೋಡಲಿ. info
التفاسير:

external-link copy
25 : 80

اَنَّا صَبَبْنَا الْمَآءَ صَبًّا ۟ۙ

ನಾವು ರಭಸವಾಗಿ ಮಳೆಯನ್ನು ಸುರಿಸಿದೆವು. info
التفاسير:

external-link copy
26 : 80

ثُمَّ شَقَقْنَا الْاَرْضَ شَقًّا ۟ۙ

ನಂತರ ಭೂಮಿಯನ್ನು ಸರಿಯಾದ ರೀತಿಯಲ್ಲಿ ಸೀಳಿದೆವು. info
التفاسير:

external-link copy
27 : 80

فَاَنْۢبَتْنَا فِیْهَا حَبًّا ۟ۙ

ನಂತರ ಅದರಲ್ಲಿ ಧಾನ್ಯವನ್ನು ಬೆಳೆಸಿದೆವು. info
التفاسير:

external-link copy
28 : 80

وَّعِنَبًا وَّقَضْبًا ۟ۙ

ದ್ರಾಕ್ಷಿ ಮತ್ತು ತರಕಾರಿಗಳನ್ನು, info
التفاسير:

external-link copy
29 : 80

وَّزَیْتُوْنًا وَّنَخْلًا ۟ۙ

ಆಲಿವ್ ಮತ್ತು ಖರ್ಜೂರ ಮರಗಳನ್ನು, info
التفاسير:

external-link copy
30 : 80

وَّحَدَآىِٕقَ غُلْبًا ۟ۙ

ದಟ್ಟವಾದ ತೋಟಗಳನ್ನು. info
التفاسير:

external-link copy
31 : 80

وَّفَاكِهَةً وَّاَبًّا ۟ۙ

ಹಣ್ಣು-ಹಂಪಲುಗಳನ್ನು ಮತ್ತು ಹುಲ್ಲುಗಾವಲುಗಳನ್ನು. info
التفاسير:

external-link copy
32 : 80

مَّتَاعًا لَّكُمْ وَلِاَنْعَامِكُمْ ۟ؕ

ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ. info
التفاسير:

external-link copy
33 : 80

فَاِذَا جَآءَتِ الصَّآخَّةُ ۟ؗ

ಕಿವಿಯನ್ನು ಕಿವುಡುಗೊಳಿಸುವ ಆ ಸದ್ದು (ಪುನರುತ್ಥಾನ) ಬಂದಾಗ. info
التفاسير:

external-link copy
34 : 80

یَوْمَ یَفِرُّ الْمَرْءُ مِنْ اَخِیْهِ ۟ۙ

ಅಂದು ಮನುಷ್ಯನು ತನ್ನ ಸಹೋದರನಿಂದ ದೂರ ಓಡುವನು. info
التفاسير:

external-link copy
35 : 80

وَاُمِّهٖ وَاَبِیْهِ ۟ۙ

ತನ್ನ ತಂದೆ-ತಾಯಿಗಳಿಂದ. info
التفاسير:

external-link copy
36 : 80

وَصَاحِبَتِهٖ وَبَنِیْهِ ۟ؕ

ತನ್ನ ಮಡದಿ-ಮಕ್ಕಳಿಂದ. info
التفاسير:

external-link copy
37 : 80

لِكُلِّ امْرِئٍ مِّنْهُمْ یَوْمَىِٕذٍ شَاْنٌ یُّغْنِیْهِ ۟ؕ

ಅಂದು ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇತರರ ಕಡೆಗೆ ಗಮನಕೊಡಲಾಗದಷ್ಟು ತನ್ನದೇ ಆದ ಆಲೋಚನೆಗಳಿರುವುವು. info
التفاسير:

external-link copy
38 : 80

وُجُوْهٌ یَّوْمَىِٕذٍ مُّسْفِرَةٌ ۟ۙ

ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು. info
التفاسير:

external-link copy
39 : 80

ضَاحِكَةٌ مُّسْتَبْشِرَةٌ ۟ۚ

ಅವು ಕಿಲಕಿಲ ನಗುತ್ತಿರುವುವು ಮತ್ತು ಸಂತೋಷದಿಂದಿರುವುವು. info
التفاسير:

external-link copy
40 : 80

وَوُجُوْهٌ یَّوْمَىِٕذٍ عَلَیْهَا غَبَرَةٌ ۟ۙ

ಅಂದು ಬಹಳಷ್ಟು ಮುಖಗಳಿಗೆ ಧೂಳು ಮೆತ್ತಿಕೊಂಡಿರುವುದು. info
التفاسير:

external-link copy
41 : 80

تَرْهَقُهَا قَتَرَةٌ ۟ؕ

ಅವುಗಳನ್ನು ಕಾರ್ಗತ್ತಲೆಯು ಕವಿದಿರುವುದು. info
التفاسير:

external-link copy
42 : 80

اُولٰٓىِٕكَ هُمُ الْكَفَرَةُ الْفَجَرَةُ ۟۠

ಅವರೇ ಸತ್ಯನಿಷೇಧಿಗಳು ಮತ್ತು ದುಷ್ಕರ್ಮಿಗಳು. info
التفاسير: