Traduction des sens du Noble Coran - La traduction en Kannada - Hamzah Batûr

Numéro de la page:close

external-link copy
31 : 22

حُنَفَآءَ لِلّٰهِ غَیْرَ مُشْرِكِیْنَ بِهٖ ؕ— وَمَنْ یُّشْرِكْ بِاللّٰهِ فَكَاَنَّمَا خَرَّ مِنَ السَّمَآءِ فَتَخْطَفُهُ الطَّیْرُ اَوْ تَهْوِیْ بِهِ الرِّیْحُ فِیْ مَكَانٍ سَحِیْقٍ ۟

ಏಕನಿಷ್ಠರಾಗಿ ಅಲ್ಲಾಹನ ಕಡೆಗೆ ತಿರುಗಿರಿ ಮತ್ತು ಅವನೊಡನೆ ಸಹಭಾಗಿತ್ವ (ಶಿರ್ಕ್) ಮಾಡಬೇಡಿ. ಯಾರು ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾನೋ ಅವನ ಸ್ಥಿತಿಯು ಆಕಾಶದಿಂದ ಕೆಳಗೆ ಬೀಳುವವನಂತೆ. ಹಕ್ಕಿಗಳು ಅವನನ್ನು ಕಸಿದುಕೊಂಡು ಹೋಗಬಹುದು; ಅಥವಾ ಗಾಳಿಯು ಅವನನ್ನು ವಿದೂರ ಸ್ಥಳಕ್ಕೆ ಒಯ್ಯಬಹುದು. info
التفاسير:

external-link copy
32 : 22

ذٰلِكَ ۗ— وَمَنْ یُّعَظِّمْ شَعَآىِٕرَ اللّٰهِ فَاِنَّهَا مِنْ تَقْوَی الْقُلُوْبِ ۟

ಇದು. ಯಾರು ಅಲ್ಲಾಹನ ಧರ್ಮಲಾಂಛನಗಳನ್ನು ಗೌರವಿಸುತ್ತಾರೋ—ನಿಶ್ಚಯವಾಗಿಯೂ ಅದು ಹೃದಯಗಳಲ್ಲಿರುವ ದೇವಭಯದಿಂದಾಗಿದೆ. info
التفاسير:

external-link copy
33 : 22

لَكُمْ فِیْهَا مَنَافِعُ اِلٰۤی اَجَلٍ مُّسَمًّی ثُمَّ مَحِلُّهَاۤ اِلَی الْبَیْتِ الْعَتِیْقِ ۟۠

ನಿಮಗೆ ಅವುಗಳಲ್ಲಿ (ಬಲಿಮೃಗಗಳಲ್ಲಿ) ಒಂದು ನಿಶ್ಚಿತ ಅವಧಿಯ ತನಕ ಪ್ರಯೋಜನಗಳಿವೆ. ನಂತರ ಅವುಗಳನ್ನು ಬಲಿ ನೀಡಬೇಕಾದ ಸ್ಥಳವು ಆ ಪ್ರಾಚೀನ ಭವನವಾಗಿದೆ. info
التفاسير:

external-link copy
34 : 22

وَلِكُلِّ اُمَّةٍ جَعَلْنَا مَنْسَكًا لِّیَذْكُرُوا اسْمَ اللّٰهِ عَلٰی مَا رَزَقَهُمْ مِّنْ بَهِیْمَةِ الْاَنْعَامِ ؕ— فَاِلٰهُكُمْ اِلٰهٌ وَّاحِدٌ فَلَهٗۤ اَسْلِمُوْا ؕ— وَبَشِّرِ الْمُخْبِتِیْنَ ۟ۙ

ನಾವು ಎಲ್ಲಾ ಸಮುದಾಯಗಳಿಗೂ ಬಲಿಕರ್ಮವನ್ನು ನಿಶ್ಚಯಿಸಿದ್ದೇವೆ. ಅವರು ಅಲ್ಲಾಹನ ಹೆಸರು ಉಚ್ಛರಿಸಿ ಅವನು ಅವರಿಗೆ ಆಹಾರವಾಗಿ ಒದಗಿಸಿದ ಜಾನುವಾರುಗಳನ್ನು ಬಲಿ ನೀಡಲೆಂದು. ನಿಮ್ಮ ದೇವನು ಏಕೈಕ ದೇವನು. ಆದ್ದರಿಂದ ಅವನಿಗೆ ಮಾತ್ರ ಶರಣಾಗಿರಿ. ವಿನಮ್ರತೆ ತೋರುವವರಿಗೆ ಸುವಾರ್ತೆಯನ್ನು ತಿಳಿಸಿರಿ. info
التفاسير:

external-link copy
35 : 22

الَّذِیْنَ اِذَا ذُكِرَ اللّٰهُ وَجِلَتْ قُلُوْبُهُمْ وَالصّٰبِرِیْنَ عَلٰی مَاۤ اَصَابَهُمْ وَالْمُقِیْمِی الصَّلٰوةِ ۙ— وَمِمَّا رَزَقْنٰهُمْ یُنْفِقُوْنَ ۟

ಅವರು ಯಾರೆಂದರೆ, ಅವರ ಮುಂದೆ ಅಲ್ಲಾಹನ ಹೆಸರನ್ನು ಹೇಳಲಾದರೆ ಅವರ ಹೃದಯಗಳು ನಡುಗುತ್ತವೆ. ಅವರಿಗೆ ಕೆಡುಕುಗಳು ಸಂಭವಿಸಿದರೆ ಅವರು ತಾಳ್ಮೆಯಿಂದ ಸಹಿಸುತ್ತಾರೆ. ಅವರು ನಮಾಝನ್ನು ಸಂಸ್ಥಾಪಿಸುತ್ತಾರೆ ಮತ್ತು ನಾವು ನೀಡಿದ ಧನದಿಂದ ಖರ್ಚು ಮಾಡುತ್ತಾರೆ. info
التفاسير:

external-link copy
36 : 22

وَالْبُدْنَ جَعَلْنٰهَا لَكُمْ مِّنْ شَعَآىِٕرِ اللّٰهِ لَكُمْ فِیْهَا خَیْرٌ ۖۗ— فَاذْكُرُوا اسْمَ اللّٰهِ عَلَیْهَا صَوَآفَّ ۚ— فَاِذَا وَجَبَتْ جُنُوْبُهَا فَكُلُوْا مِنْهَا وَاَطْعِمُوا الْقَانِعَ وَالْمُعْتَرَّ ؕ— كَذٰلِكَ سَخَّرْنٰهَا لَكُمْ لَعَلَّكُمْ تَشْكُرُوْنَ ۟

ನಾವು ಬಲಿ ಒಂಟೆಗಳನ್ನು ನಿಮಗೋಸ್ಕರ ಅಲ್ಲಾಹನ ಲಾಂಛನಗಳಲ್ಲಿ ಸೇರಿಸಿದ್ದೇವೆ. ನಿಮಗೆ ಅದರಲ್ಲಿ ಒಳಿತಿದೆ. ಆದ್ದರಿಂದ, ಅವುಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮೇಲೆ ಅಲ್ಲಾಹನ ಹೆಸರನ್ನು ಉಚ್ಛರಿಸಿರಿ. ನಂತರ ಅವು ತಮ್ಮ ಪಾರ್ಶ್ವಗಳ ಮೇಲೆ ಬಿದ್ದರೆ, ನೀವೂ ತಿನ್ನಿರಿ ಮತ್ತು ನಿಮ್ಮ ಮುಂದೆ ಕೈಯೊಡ್ಡದ ಬಡವರಿಗೆ ಮತ್ತು ಬೇಡಿ ತಿನ್ನುವವರಿಗೆ ತಿನ್ನಿಸಿರಿ. ಈ ರೀತಿ ನಾವು ಅವುಗಳನ್ನು ನಿಮಗೆ ಅಧೀನಗೊಳಿಸಿದ್ದೇವೆ. ನೀವು ಕೃತಜ್ಞರಾಗುವುದಕ್ಕಾಗಿ. info
التفاسير:

external-link copy
37 : 22

لَنْ یَّنَالَ اللّٰهَ لُحُوْمُهَا وَلَا دِمَآؤُهَا وَلٰكِنْ یَّنَالُهُ التَّقْوٰی مِنْكُمْ ؕ— كَذٰلِكَ سَخَّرَهَا لَكُمْ لِتُكَبِّرُوا اللّٰهَ عَلٰی مَا هَدٰىكُمْ ؕ— وَبَشِّرِ الْمُحْسِنِیْنَ ۟

ಅವುಗಳ ಮಾಂಸ ಅಥವಾ ರಕ್ತ ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ನಿಮ್ಮಲ್ಲಿರುವ ದೇವಭಯವು ಅವನಿಗೆ ತಲುಪುತ್ತದೆ. ಈ ರೀತಿ ಅವನು ಅವುಗಳನ್ನು ನಿಮಗೆ ಅಧೀನಗೊಳಿಸಿದ್ದಾನೆ. ಅಲ್ಲಾಹು ನಿಮಗೆ ಸನ್ಮಾರ್ಗವನ್ನು ತೋರಿಸಿದ್ದಕ್ಕಾಗಿ ನೀವು ಅವನ ಮಹತ್ವವನ್ನು ಕೊಂಡಾಡಲು. ಒಳಿತು ಮಾಡುವವರಿಗೆ ಸುವಾರ್ತೆಯನ್ನು ತಿಳಿಸಿರಿ. info
التفاسير:

external-link copy
38 : 22

اِنَّ اللّٰهَ یُدٰفِعُ عَنِ الَّذِیْنَ اٰمَنُوْا ؕ— اِنَّ اللّٰهَ لَا یُحِبُّ كُلَّ خَوَّانٍ كَفُوْرٍ ۟۠

ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಅವರ ವೈರಿಗಳಿಂದ ರಕ್ಷಿಸುತ್ತಾನೆ. ವಿಶ್ವಾಸದ್ರೋಹ ಮಾಡುವ ಕೃತಘ್ನನನ್ನು ಅಲ್ಲಾಹು ಖಂಡಿತ ಇಷ್ಟಪಡುವುದಿಲ್ಲ. info
التفاسير: