[1] ವಿದ್ವಾಂಸರು ಎಂದರೆ ಯಹೂದಿಗಳು ಮತ್ತು ಕ್ರೈಸ್ತರಲ್ಲಿರುವ ವಿದ್ವಾಂಸರು. ಈ ಮಾತಿನ ಅರ್ಥವೇನೆಂದರೆ, ಅಲ್ಲಾಹು ಕಳುಹಿಸಿದ ಪ್ರವಾದಿಗಳೆಲ್ಲರೂ ಮನುಷ್ಯರಾಗಿದ್ದರು. ಆದ್ದರಿಂದ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನುಷ್ಯರಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಅವರಿಗಿಂತ ಮೊದಲು ಬಂದ ಸಂದೇಶವಾಹಕರುಗಳು ಮನುಷ್ಯರಾಗಿದ್ದರೋ ಅಲ್ಲವೋ ಎಂದು ನಿಮಗೆ ಸಂಶಯವಿದ್ದರೆ ಯಹೂದಿ-ಕ್ರೈಸ್ತರಲ್ಲಿರುವ ವಿದ್ವಾಂಸರೊಡನೆ ಕೇಳಿ ನೋಡಿ.