Traduction des sens du Noble Coran - La traduction en Kannada - Bachîr Maisûrî

Numéro de la page:close

external-link copy
128 : 4

وَاِنِ امْرَاَةٌ خَافَتْ مِنْ بَعْلِهَا نُشُوْزًا اَوْ اِعْرَاضًا فَلَا جُنَاحَ عَلَیْهِمَاۤ اَنْ یُّصْلِحَا بَیْنَهُمَا صُلْحًا ؕ— وَالصُّلْحُ خَیْرٌ ؕ— وَاُحْضِرَتِ الْاَنْفُسُ الشُّحَّ ؕ— وَاِنْ تُحْسِنُوْا وَتَتَّقُوْا فَاِنَّ اللّٰهَ كَانَ بِمَا تَعْمَلُوْنَ خَبِیْرًا ۟

ಓರ್ವ ಸ್ತಿçà ತನ್ನ ಪತಿಯಿಂದ ವೈಮನಸ್ಸು ಮತ್ತು ತಿರಸ್ಕಾರದಿಂದ ಭಯಪಟ್ಟರೆ ಅವರು ಸಂಧಾನ ಮಾಡುವುದರಲ್ಲಿ ಯಾವ ದೋಷವಿಲ್ಲ. ಸಂಧಾನವು ಅತ್ಯಂತ ಉತ್ತಮವಾದುದಾಗಿದೆ. ಜಿಪುಣತೆ ಮತ್ತು ವ್ಯಾಮೋಹವು ಪ್ರತಿಯೊಬ್ಬನಲ್ಲೂ ಅಂತರ್ಗತಗೊಳಿಸಲಾಗಿದೆ. ನೀವು ಉತ್ತಮ ರೀತಿಯಲ್ಲಿ ವರ್ತಿಸುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಸೂಕ್ಷö್ಮ ಜ್ಞಾನಿಯಾಗಿದ್ದಾನೆ. info
التفاسير:

external-link copy
129 : 4

وَلَنْ تَسْتَطِیْعُوْۤا اَنْ تَعْدِلُوْا بَیْنَ النِّسَآءِ وَلَوْ حَرَصْتُمْ فَلَا تَمِیْلُوْا كُلَّ الْمَیْلِ فَتَذَرُوْهَا كَالْمُعَلَّقَةِ ؕ— وَاِنْ تُصْلِحُوْا وَتَتَّقُوْا فَاِنَّ اللّٰهَ كَانَ غَفُوْرًا رَّحِیْمًا ۟

ನೀವು ಎಷ್ಟೇ ಬಯಸಿದರೂ, ಪತ್ನಿಯರ ನಡುವೆ ನ್ಯಾಯ ಪಾಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಆದ್ದರಿಂದ ನೀವು ಒಬ್ಬಳ ಕಡೆಗೆ ವಾಲಿಕೊಂಡು ಇನ್ನೊಬ್ಬಳನ್ನು ತೂಗಾಡುತ್ತಿರುವ ಸ್ಥಿತಿಯಲ್ಲಿ ಬಿಟ್ಟುಬಿಡಬೇಡಿರಿ. ನೀವು ಸುಧಾರಣೆ ಮಾಡುವುದಾದರೆ ಮತ್ತು ಭಯಭಕ್ತಿ ಪಾಲಿಸುವುದಾದರೆ ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
130 : 4

وَاِنْ یَّتَفَرَّقَا یُغْنِ اللّٰهُ كُلًّا مِّنْ سَعَتِهٖ ؕ— وَكَانَ اللّٰهُ وَاسِعًا حَكِیْمًا ۟

ಮತ್ತು ಪತಿ-ಪತ್ನಿಯರು ಬೇರ್ಪಡುವುದಾದರೆ ಅಲ್ಲಾಹನು ತನ್ನ ವಿಶಾಲವಾದ ಸಾಮರ್ಥ್ಯದಿಂದ ಅವರಲ್ಲಿ ಪ್ರತಿಯೊಬ್ಬರನ್ನೂ ನಿರಾವಲಂಬಿಯನ್ನಾಗಿ ಮಾಡುವನು. ಅಲ್ಲಾಹನು ವಿಶಾಲ ಸಾಮರ್ಥ್ಯವುಳ್ಳವನೂ ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير:

external-link copy
131 : 4

وَلِلّٰهِ مَا فِی السَّمٰوٰتِ وَمَا فِی الْاَرْضِ ؕ— وَلَقَدْ وَصَّیْنَا الَّذِیْنَ اُوْتُوا الْكِتٰبَ مِنْ قَبْلِكُمْ وَاِیَّاكُمْ اَنِ اتَّقُوا اللّٰهَ ؕ— وَاِنْ تَكْفُرُوْا فَاِنَّ لِلّٰهِ مَا فِی السَّمٰوٰتِ وَمَا فِی الْاَرْضِ ؕ— وَكَانَ اللّٰهُ غَنِیًّا حَمِیْدًا ۟

ಭೂಮಿ ಮತ್ತು ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ಮತ್ತು ಖಂಡಿತವಾಗಿಯೂ ನೀವು ಅಲ್ಲಾಹನನ್ನು ಭಯಪಡಿರಿ ಎಂದು ನಾವು ನಿಮಗಿಂತ ಮುಂಚೆ ಗ್ರಂಥ ನೀಡಲಾದವರಿಗೂ, ನಿಮಗೂ ಇದೇ ಆದೇಶವನ್ನು ನೀಡಿದ್ದೇವೆ. ಇನ್ನು ನೀವು ನಿಷೇಧಿಸುವುದಾದರೆ ಭೂಮಿ ಮತ್ತು ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ ಮತ್ತು ಅಲ್ಲಾಹನು ನಿರಪೇಕ್ಷನೂ ಸ್ತುತರ್ಹ್ಯನೂ ಆಗಿದ್ದಾನೆ. info
التفاسير:

external-link copy
132 : 4

وَلِلّٰهِ مَا فِی السَّمٰوٰتِ وَمَا فِی الْاَرْضِ ؕ— وَكَفٰی بِاللّٰهِ وَكِیْلًا ۟

ಭೂಮಿ, ಆಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನ ಅಧಿಪತ್ಯದಲ್ಲಿವೆ. ಮೇಲ್ವಿಚಾರಕನಾಗಿ ಅಲ್ಲಾಹನೇ ಸಾಕು. info
التفاسير:

external-link copy
133 : 4

اِنْ یَّشَاْ یُذْهِبْكُمْ اَیُّهَا النَّاسُ وَیَاْتِ بِاٰخَرِیْنَ ؕ— وَكَانَ اللّٰهُ عَلٰی ذٰلِكَ قَدِیْرًا ۟

ಓ ಜನರೇ, ಅವನು ಬಯಸಿದರೆ ನಿಮ್ಮನ್ನು ನಾಶಮಾಡಿ ಇತರರನ್ನು ತರುವನು. ಅಲ್ಲಾಹನು ಅದಕ್ಕೆ ಸಂಪೂರ್ಣ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
134 : 4

مَنْ كَانَ یُرِیْدُ ثَوَابَ الدُّنْیَا فَعِنْدَ اللّٰهِ ثَوَابُ الدُّنْیَا وَالْاٰخِرَةِ ؕ— وَكَانَ اللّٰهُ سَمِیْعًا بَصِیْرًا ۟۠

ಯಾರು ಇಹಲೋಕದ ಪ್ರತಿಫಲವನ್ನು ಬಯಸುತ್ತಾನೋ ಅಲ್ಲಾಹನ ಬಳಿಯಂತು ಇಹಲೋಕ ಮತ್ತು ಪರಲೋಕ (ಇವೆರಡರ) ಪ್ರತಿಫಲವು ಇದೆ ಮತ್ತು ಅಲ್ಲಾಹನು ಎಲ್ಲವನ್ನು ಆಲಿಸುವವನೂ, ಚೆನ್ನಾಗಿ ವೀಕ್ಷಿಸುವವನಾಗಿದ್ದಾನೆ. info
التفاسير: