Traducción de los significados del Sagrado Corán - Traducción al Canarés- Hamza Batur

ಅಲ್ -ಕಿಯಾಮ

external-link copy
1 : 75

لَاۤ اُقْسِمُ بِیَوْمِ الْقِیٰمَةِ ۟ۙ

ನಾನು ಪುನರುತ್ಥಾನದ ದಿನದ ಮೇಲೆ ಆಣೆ ಮಾಡುತ್ತೇನೆ. info
التفاسير:

external-link copy
2 : 75

وَلَاۤ اُقْسِمُ بِالنَّفْسِ اللَّوَّامَةِ ۟

ನಾನು ಆಕ್ಷೇಪಿಸುವ ಮನಸ್ಸಿನ ಮೇಲೆ ಆಣೆ ಮಾಡುತ್ತೇನೆ. info
التفاسير:

external-link copy
3 : 75

اَیَحْسَبُ الْاِنْسَانُ اَلَّنْ نَّجْمَعَ عِظَامَهٗ ۟ؕ

ಮನುಷ್ಯನು ಭಾವಿಸುತ್ತಿದ್ದಾನೆಯೇ ನಾವು ಅವನ ಮೂಳೆಗಳನ್ನು ಜೋಡಿಸಲಾರೆವು ಎಂದು? info
التفاسير:

external-link copy
4 : 75

بَلٰى قٰدِرِیْنَ عَلٰۤی اَنْ نُّسَوِّیَ بَنَانَهٗ ۟

ಹೌದು! ನಮಗೆ ಅವನ ಬೆರಳ ತುದಿಗಳನ್ನು ಕೂಡ ಸರಿಪಡಿಸುವ ಸಾಮರ್ಥ್ಯವಿದೆ. info
التفاسير:

external-link copy
5 : 75

بَلْ یُرِیْدُ الْاِنْسَانُ لِیَفْجُرَ اَمَامَهٗ ۟ۚ

ಆದರೆ ಮನುಷ್ಯನು ಮುಂದೆಯೂ ಕೂಡ ಅವಿಧೇಯನಾಗಿಯೇ ಇರಲು ಬಯಸುತ್ತಾನೆ. info
التفاسير:

external-link copy
6 : 75

یَسْـَٔلُ اَیَّانَ یَوْمُ الْقِیٰمَةِ ۟ؕ

ಅವನು ಕೇಳುತ್ತಾನೆ: “ಪುನರುತ್ಥಾನ ದಿನ ಯಾವಾಗ ಸಂಭವಿಸುತ್ತದೆ?” info
التفاسير:

external-link copy
7 : 75

فَاِذَا بَرِقَ الْبَصَرُ ۟ۙ

ದೃಷ್ಟಿಯು ಕೋರೈಸುವಾಗ. info
التفاسير:

external-link copy
8 : 75

وَخَسَفَ الْقَمَرُ ۟ۙ

ಚಂದ್ರ ಪ್ರಕಾಶ ರಹಿತವಾಗುವಾಗ. info
التفاسير:

external-link copy
9 : 75

وَجُمِعَ الشَّمْسُ وَالْقَمَرُ ۟ۙ

ಸೂರ್ಯ-ಚಂದ್ರರನ್ನು ಜೋಡಿಸಲಾಗುವಾಗ.[1] info

[1] ಅಂದರೆ ಬೆಳಕು ರಹಿತವಾಗುವುದರಲ್ಲಿ ಸೂರ್ಯ ಮತ್ತು ಚಂದ್ರ ಸಮಾನರಾಗುವಾಗ. ಎರಡೂ ಖಗೋಳ ಕಾಯಗಳ ಬೆಳಕು ನಂದಿ ಹೋಗಲಿದೆ ಎಂದರ್ಥ.

التفاسير:

external-link copy
10 : 75

یَقُوْلُ الْاِنْسَانُ یَوْمَىِٕذٍ اَیْنَ الْمَفَرُّ ۟ۚ

ಅಂದು ಮನುಷ್ಯನು ಕೇಳುವನು: “ಪಲಾಯನ ಮಾಡಲು ಸ್ಥಳವೆಲ್ಲಿದೆ?” info
التفاسير:

external-link copy
11 : 75

كَلَّا لَا وَزَرَ ۟ؕ

ಇಲ್ಲ, ಯಾವುದೇ ರಕ್ಷಣೆಯೂ ಇಲ್ಲ. info
التفاسير:

external-link copy
12 : 75

اِلٰى رَبِّكَ یَوْمَىِٕذِ ١لْمُسْتَقَرُّ ۟ؕ

ಅಂದು ನಿನ್ನ ವಾಸ್ತವ್ಯವು ನಿನ್ನ ಪರಿಪಾಲಕನ (ಅಲ್ಲಾಹನ) ಕಡೆಗೇ ಆಗಿದೆ. info
التفاسير:

external-link copy
13 : 75

یُنَبَّؤُا الْاِنْسَانُ یَوْمَىِٕذٍ بِمَا قَدَّمَ وَاَخَّرَ ۟ؕ

ಅಂದು ಮನುಷ್ಯನಿಗೆ ಅವನು ಮುಂದಕ್ಕೆ ಕಳುಹಿಸಿರುವ ಮತ್ತು ಹಿಂದೆ ಬಿಟ್ಟಿರುವ ಕರ್ಮಗಳ ಬಗ್ಗೆ ತಿಳಿಸಲಾಗುವುದು. info
التفاسير:

external-link copy
14 : 75

بَلِ الْاِنْسَانُ عَلٰی نَفْسِهٖ بَصِیْرَةٌ ۟ۙ

ಅಲ್ಲ, ವಾಸ್ತವವಾಗಿ ಮನುಷ್ಯನು ಅವನ ವಿರುದ್ಧವೇ ಸಾಕ್ಷಿಯಾಗಿದ್ದಾನೆ. info
التفاسير:

external-link copy
15 : 75

وَّلَوْ اَلْقٰى مَعَاذِیْرَهٗ ۟ؕ

ಅವನು ಎಷ್ಟೇ ನೆಪಗಳನ್ನು ಒಡ್ಡಿದರೂ ಸಹ. info
التفاسير:

external-link copy
16 : 75

لَا تُحَرِّكْ بِهٖ لِسَانَكَ لِتَعْجَلَ بِهٖ ۟ؕ

(ಪ್ರವಾದಿಯವರೇ) ನೀವು ಕುರ್‌ಆನನ್ನು ಆತುರದಿಂದ ಕಂಠಪಾಠ ಮಾಡಲು ನಿಮ್ಮ ನಾಲಗೆಯನ್ನು ಅಲುಗಾಡಿಸಬೇಡಿ. info
التفاسير:

external-link copy
17 : 75

اِنَّ عَلَیْنَا جَمْعَهٗ وَقُرْاٰنَهٗ ۟ۚۖ

ನಿಶ್ಚಯವಾಗಿಯೂ ಅದನ್ನು ಕ್ರೋಢೀಕರಿಸುವುದು ಮತ್ತು ನೀವು ಅದನ್ನು ಪಠಿಸುವಂತೆ ಮಾಡುವುದು ನಮ್ಮ ಹೊಣೆಯಾಗಿದೆ.[1] info

[1] ದೇವದೂತರು ಕುರ್‌ಆನನ್ನು ಓದಿಕೊಡುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಕಂಠಪಾಠ ಮಾಡಲು ಅವರ ಜೊತೆಗೇ ಓದುತ್ತಿದ್ದರು. ಏಕೆಂದರೆ ಅದರಿಂದ ಏನಾದರೂ ಮರೆತು ಬಿಡಬಹುದೇ ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಆದರೆ ಅಲ್ಲಾಹು ಇಲ್ಲಿ ಅದನ್ನು ವಿರೋಧಿಸುತ್ತಿದ್ದಾನೆ. ಕಂಠಪಾಠ ಮಾಡುವುದಕ್ಕಾಗಿ ನೀವು ಅವರ ಜೊತೆಗೇ ಓದಬೇಡಿ. ಬದಲಿಗೆ ಅದನ್ನು ಗಮನವಿಟ್ಟು ಕೇಳಿ. ಅದನ್ನು ನಿಮ್ಮ ಹೃದಯದಲ್ಲಿ ಸಂಗ್ರಹಿಸಿಡುವುದು ಅಲ್ಲಾಹನ ಹೊಣೆಯಾಗಿದೆ.

التفاسير:

external-link copy
18 : 75

فَاِذَا قَرَاْنٰهُ فَاتَّبِعْ قُرْاٰنَهٗ ۟ۚ

ನಾವು ಅದನ್ನು ಪಠಿಸಿದರೆ ನೀವು ಆ ಪಠಣವನ್ನು ಹಿಂಬಾಲಿಸಿರಿ. info
التفاسير:

external-link copy
19 : 75

ثُمَّ اِنَّ عَلَیْنَا بَیَانَهٗ ۟ؕ

ನಂತರ ಅದನ್ನು ವಿವರಿಸಿಕೊಡುವುದು ನಮ್ಮ ಹೊಣೆಯಾಗಿದೆ. info
التفاسير:

external-link copy
20 : 75

كَلَّا بَلْ تُحِبُّوْنَ الْعَاجِلَةَ ۟ۙ

ಇಲ್ಲ, ನೀವು ಇಹಲೋಕವನ್ನು ಪ್ರೀತಿಸುತ್ತೀರಿ. info
التفاسير:

external-link copy
21 : 75

وَتَذَرُوْنَ الْاٰخِرَةَ ۟ؕ

ಪರಲೋಕವನ್ನು ತೊರೆಯುತ್ತೀರಿ. info
التفاسير:

external-link copy
22 : 75

وُجُوْهٌ یَّوْمَىِٕذٍ نَّاضِرَةٌ ۟ۙ

ಅಂದು ಬಹಳಷ್ಟು ಮುಖಗಳು ಪ್ರಸನ್ನವಾಗಿರುವುವು. info
التفاسير:

external-link copy
23 : 75

اِلٰى رَبِّهَا نَاظِرَةٌ ۟ۚ

ಅದರ ಪರಿಪಾಲಕನ (ಅಲ್ಲಾಹನ) ಕಡೆಗೆ ನೋಡುತ್ತಿರುವುವು. info
التفاسير:

external-link copy
24 : 75

وَوُجُوْهٌ یَّوْمَىِٕذٍ بَاسِرَةٌ ۟ۙ

ಅಂದು ಬಹಳಷ್ಟು ಮುಖಗಳು ವಿಷಣ್ಣವಾಗಿರುವುವು. info
التفاسير:

external-link copy
25 : 75

تَظُنُّ اَنْ یُّفْعَلَ بِهَا فَاقِرَةٌ ۟ؕ

ಅವರೊಡನೆ ಬೆನ್ನು ತುಂಡಾಗಿಸುವ ರೀತಿಯಲ್ಲಿ ವ್ಯವಹರಿಸಲಾಗುವುದೆಂದು ಅವರು ಭಾವಿಸುವರು. info
التفاسير:

external-link copy
26 : 75

كَلَّاۤ اِذَا بَلَغَتِ التَّرَاقِیَ ۟ۙ

ಇಲ್ಲ, ಆತ್ಮವು ಕೊರಳ ಮೂಳೆಗೆ ತಲುಪಿದಾಗ. info
التفاسير:

external-link copy
27 : 75

وَقِیْلَ مَنْ ٚ— رَاقٍ ۟ۙ

“ಮಂತ್ರಿಸುವವರು ಯಾರಾದರೂ ಇದ್ದಾರೆಯೇ?” ಎಂದು ಕೇಳಲಾಗುವಾಗ. info
التفاسير:

external-link copy
28 : 75

وَّظَنَّ اَنَّهُ الْفِرَاقُ ۟ۙ

ಅದು ಅಗಲಿಕೆಯ ಸಮಯವೆಂದು ಅವನಿಗೆ ಖಾತ್ರಿಯಾದಾಗ. info
التفاسير:

external-link copy
29 : 75

وَالْتَفَّتِ السَّاقُ بِالسَّاقِ ۟ۙ

ಕಣಕಾಲು ಕಣಕಾಲಿನೊಂದಿಗೆ ಸುತ್ತುವಾಗ. info
التفاسير:

external-link copy
30 : 75

اِلٰى رَبِّكَ یَوْمَىِٕذِ ١لْمَسَاقُ ۟ؕ۠

ಅಂದು (ಅವನನ್ನು) ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಸಾಗಿಸಲಾಗುವುದು. info
التفاسير:

external-link copy
31 : 75

فَلَا صَدَّقَ وَلَا صَلّٰى ۟ۙ

ಅವನು ವಿಶ್ವಾಸವಿಡಲಿಲ್ಲ, ನಮಾಝ್ ಕೂಡ ಮಾಡಲಿಲ್ಲ. info
التفاسير:

external-link copy
32 : 75

وَلٰكِنْ كَذَّبَ وَتَوَلّٰى ۟ۙ

ಆದರೆ ಅವನು ನಿಷೇಧಿಸಿದನು ಮತ್ತು ಮುಖ ತಿರುಗಿಸಿ ನಡೆದನು. info
التفاسير:

external-link copy
33 : 75

ثُمَّ ذَهَبَ اِلٰۤی اَهْلِهٖ یَتَمَطّٰى ۟ؕ

ನಂತರ ಎದೆಯುಬ್ಬಿಸಿ ತನ್ನ ಮನೆಯವರ ಕಡೆಗೆ ಹೊರಟನು. info
التفاسير:

external-link copy
34 : 75

اَوْلٰى لَكَ فَاَوْلٰى ۟ۙ

ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ. info
التفاسير:

external-link copy
35 : 75

ثُمَّ اَوْلٰى لَكَ فَاَوْلٰى ۟ؕ

ಪುನಃ ನಿನಗೆ ವಿನಾಶ ಕಾದಿದೆ. ನಿನಗೆ ವಿನಾಶ ಕಾದಿದೆ. info
التفاسير:

external-link copy
36 : 75

اَیَحْسَبُ الْاِنْسَانُ اَنْ یُّتْرَكَ سُدًی ۟ؕ

ಮನುಷ್ಯನು ಭಾವಿಸುತ್ತಾನೆಯೇ ಅವನನ್ನು ಸುಮ್ಮನೆ ಬಿಟ್ಟುಬಿಡಲಾಗುವುದೆಂದು? info
التفاسير:

external-link copy
37 : 75

اَلَمْ یَكُ نُطْفَةً مِّنْ مَّنِیٍّ یُّمْنٰى ۟ۙ

ಅವನು ಸ್ರವಿಸಲಾದ ವೀರ್ಯದ ಒಂದು ಬಿಂದುವಾಗಿರಲಿಲ್ಲವೇ? info
التفاسير:

external-link copy
38 : 75

ثُمَّ كَانَ عَلَقَةً فَخَلَقَ فَسَوّٰى ۟ۙ

ನಂತರ ಅವನು ರಕ್ತಪಿಂಡವಾದನು. ನಂತರ ಅಲ್ಲಾಹು ಅವನನ್ನು ಸೃಷ್ಟಿಸಿದನು ಮತ್ತು ಸರಿಪಡಿಸಿದನು. info
التفاسير:

external-link copy
39 : 75

فَجَعَلَ مِنْهُ الزَّوْجَیْنِ الذَّكَرَ وَالْاُ ۟ؕ

ನಂತರ ಅವನಿಂದ ಗಂಡು ಮತ್ತು ಹೆಣ್ಣು ಎಂಬ ಜೋಡಿಯನ್ನು ಮಾಡಿದನು. info
التفاسير:

external-link copy
40 : 75

اَلَیْسَ ذٰلِكَ بِقٰدِرٍ عَلٰۤی اَنْ یُّحْیِ الْمَوْتٰى ۟۠

ಅಂತಹವನು ಸತ್ತವರಿಗೆ ಜೀವ ನೀಡುವ ಸಾಮರ್ಥ್ಯವನ್ನು ಹೊಂದಿಲ್ಲವೇ? info
التفاسير: