Traducción de los significados del Sagrado Corán - Traducción al Canarés- Hamza Batur

Número de página:close

external-link copy
49 : 34

قُلْ جَآءَ الْحَقُّ وَمَا یُبْدِئُ الْبَاطِلُ وَمَا یُعِیْدُ ۟

ಹೇಳಿರಿ: “ಸತ್ಯವು ಬಂದಿದೆ. ಅಸತ್ಯಕ್ಕೆ (ಈವರೆಗೆ) ಏನೂ ಮಾಡಲು ಸಾಧ್ಯವಾಗಿಲ್ಲ; ಇನ್ನು ಸಾಧ್ಯವಾಗುವುದೂ ಇಲ್ಲ.” info
التفاسير:

external-link copy
50 : 34

قُلْ اِنْ ضَلَلْتُ فَاِنَّمَاۤ اَضِلُّ عَلٰی نَفْسِیْ ۚ— وَاِنِ اهْتَدَیْتُ فَبِمَا یُوْحِیْۤ اِلَیَّ رَبِّیْ ؕ— اِنَّهٗ سَمِیْعٌ قَرِیْبٌ ۟

ಹೇಳಿರಿ: “ನಾನು ದಾರಿತಪ್ಪಿದ್ದರೆ ನಾನು ದಾರಿತಪ್ಪಿದ ದೋಷವು ನನಗೇ ಆಗಿದೆ. ಆದರೆ ನಾನೇನಾದರೂ ಸನ್ಮಾರ್ಗದಲ್ಲಿದ್ದರೆ ಅದು ನನ್ನ ಪರಿಪಾಲಕನು (ಅಲ್ಲಾಹು) ನನಗೆ ನೀಡುತ್ತಿರುವ ದಿವ್ಯಸಂದೇಶದ ಕಾರಣದಿಂದಾಗಿದೆ. ನಿಶ್ಚಯವಾಗಿಯೂ ಅವನು ಕೇಳುವವನು ಮತ್ತು ಬಹಳ ಸಮೀಪದಲ್ಲಿರುವವನಾಗಿದ್ದಾನೆ.” info
التفاسير:

external-link copy
51 : 34

وَلَوْ تَرٰۤی اِذْ فَزِعُوْا فَلَا فَوْتَ وَاُخِذُوْا مِنْ مَّكَانٍ قَرِیْبٍ ۟ۙ

(ಪುನರುತ್ಥಾನ ದಿನದಂದು) ಸತ್ಯನಿಷೇಧಿಗಳು ಭಯದಿಂದ ನಡುಗುವ ದೃಶ್ಯವನ್ನು ನೀವು ನೋಡುತ್ತಿದ್ದರೆ! ಅವರಿಗೆ ತಪ್ಪಿಸಿಕೊಳ್ಳುವ ಯಾವುದೇ ಅವಕಾಶವಿರುವುದಿಲ್ಲ. ಹತ್ತಿರದ ಸ್ಥಳದಿಂದಲೇ ಅವರನ್ನು ಹಿಡಿಯಲಾಗುವುದು. info
التفاسير:

external-link copy
52 : 34

وَّقَالُوْۤا اٰمَنَّا بِهٖ ۚ— وَاَنّٰی لَهُمُ التَّنَاوُشُ مِنْ مَّكَانٍ بَعِیْدٍ ۟ۚ

ಆಗ ಅವರು ಹೇಳುವರು: “ನಾವು ಈ ಕುರ್‌ಆನಿನಲ್ಲಿ ವಿಶ್ವಾಸವಿಟ್ಟಿದ್ದೇವೆ.” ಆದರೆ ವಿದೂರ ಸ್ಥಳದಿಂದ (ಆ ವಿಶ್ವಾಸವನ್ನು) ಹಿಡಿದುಕೊಳ್ಳಲು ಅವರಿಗೆ ಹೇಗೆ ತಾನೇ ಸಾಧ್ಯ?[1] info

[1] ಅಂದರೆ ಪರಲೋಕದ ತಲುಪಿದ ನಂತರ ಅವರು ವಿಶ್ವಾಸವಿಡಲು ಹೇಗೆ ಸಾಧ್ಯ? ಇಹಲೋಕದಲ್ಲಿರುವಾಗ ಅವರು ಸತ್ಯನಿಷೇಧಿಗಳಾಗಿದ್ದರು. ಕೈಗೆಟುಕದಷ್ಟು ವಿದೂರದಲ್ಲಿರುವ ಒಂದು ವಸ್ತುವನ್ನು ಹೇಗೆ ಹಿಡಿದುಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ಪರಲೋಕಕ್ಕೆ ತಲುಪಿದ ನಂತರ ವಿಶ್ವಾಸವಿಟ್ಟು ಏನೂ ಪ್ರಯೋಜನವಿಲ್ಲ.

التفاسير:

external-link copy
53 : 34

وَقَدْ كَفَرُوْا بِهٖ مِنْ قَبْلُ ۚ— وَیَقْذِفُوْنَ بِالْغَیْبِ مِنْ مَّكَانٍ بَعِیْدٍ ۟

ಇದಕ್ಕೆ ಮೊದಲು ಅವರು ಅದನ್ನು ನಿಷೇಧಿಸಿದ್ದ್ದರು. ಅವರು ಅದನ್ನು ಸರಿಯಾಗಿ ತಿಳಿಯುವ ಗೋಜಿಗೆ ಹೋಗದೆ ವಿದೂರ ಸ್ಥಳದಿಂದಲೇ ಆರೋಪವನ್ನು ಹೊರಿಸುತ್ತಿದ್ದರು. info
التفاسير:

external-link copy
54 : 34

وَحِیْلَ بَیْنَهُمْ وَبَیْنَ مَا یَشْتَهُوْنَ كَمَا فُعِلَ بِاَشْیَاعِهِمْ مِّنْ قَبْلُ ؕ— اِنَّهُمْ كَانُوْا فِیْ شَكٍّ مُّرِیْبٍ ۟۠

ಅವರ ಮತ್ತು ಅವರ ಸ್ವೇಚ್ಛೆಗಳ ನಡುವೆ ಪರದೆ ಹಾಕಲಾಗಿದೆ. ಇವರಿಗಿಂತ ಮೊದಲು ಇವರಂತಿರುವ ಜನರಿಗೆ ಹೀಗೆಯೇ ಮಾಡಲಾಗಿತ್ತು. ನಿಶ್ಚಯವಾಗಿಯೂ ಅವರು ಗೊಂದಲಪೂರ್ಣ ಸಂಶಯದಲ್ಲಿದ್ದರು. info
التفاسير: