Traducción de los significados del Sagrado Corán - Traducción al Canarés - Bashir Maisuri

external-link copy
7 : 3

هُوَ الَّذِیْۤ اَنْزَلَ عَلَیْكَ الْكِتٰبَ مِنْهُ اٰیٰتٌ مُّحْكَمٰتٌ هُنَّ اُمُّ الْكِتٰبِ وَاُخَرُ مُتَشٰبِهٰتٌ ؕ— فَاَمَّا الَّذِیْنَ فِیْ قُلُوْبِهِمْ زَیْغٌ فَیَتَّبِعُوْنَ مَا تَشَابَهَ مِنْهُ ابْتِغَآءَ الْفِتْنَةِ وَابْتِغَآءَ تَاْوِیْلِهٖ ؔۚ— وَمَا یَعْلَمُ تَاْوِیْلَهٗۤ اِلَّا اللّٰهُ ۘؐ— وَالرّٰسِخُوْنَ فِی الْعِلْمِ یَقُوْلُوْنَ اٰمَنَّا بِهٖ ۙ— كُلٌّ مِّنْ عِنْدِ رَبِّنَا ۚ— وَمَا یَذَّكَّرُ اِلَّاۤ اُولُوا الْاَلْبَابِ ۟

ಓ ಪೈಗಂಬರರೇ ಅವನೇ ನಿಮ್ಮ ಮೇಲೆ ಗ್ರಂಥವನ್ನು ಅವತೀರ್ಣಗೊಳಿಸಿದನು. ಅದರಲ್ಲಿ ಸುಸ್ಪಷ್ಟವಾದ ಸದೃಢ ಸೂಕ್ತಿಗಳಿವೆ ಅವು ಗ್ರಂಥದ ಮೂಲವಾಗಿವೆ ಮತ್ತು ಕೆಲವು ಅಸ್ಪಷ್ಟ (ಬಹು ಅರ್ಥದ) ಸೂಕ್ತಿಗಳಿವೆ ಆದರೆ ಹೃದಯಗಳಲ್ಲಿ ವಕ್ರತೆ ಇರುವವರು ಗೊಂದಲವನ್ನುAಟು ಮಾಡಲು ಮತ್ತು ಅವುಗಳ ದುರ್ವ್ಯಾಖ್ಯಾನದ ಉದ್ದೇಶದಿಂದ ಪರಸ್ಪರ ಅಸ್ಪಷ್ಟವಿರುವ ಸೂಕ್ತಿಗಳನ್ನು ಅನುಸರಿಸುತ್ತಾರೆ. ವಸ್ತುತಃ ಅವುಗಳ ನೈಜ ವ್ಯಾಖ್ಯಾನವು ಅಲ್ಲಾಹನ ಹೊರತು ಇನ್ನಾರಿಗೂ ತಿಳಿದಿಲ್ಲ. ನಿಖರ ಹಾಗೂ ಸದೃಢ ಜ್ಞಾನವುಳ್ಳವರು, ನಾವು ಅವುಗಳಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವು ನಮ್ಮ ಪ್ರಭುವಿನ ಕಡೆಯಿಂದಾಗಿದೆ ಎಂದೇ ಹೇಳುತ್ತಾರೆ. ಮತ್ತು ಕೇವಲ ಬುದ್ಧಿವಂತರು ಮಾತ್ರ ಉಪದೇಶ ಸ್ವೀಕರಿಸುತ್ತಾರೆ. info
التفاسير: