Traducción de los significados del Sagrado Corán - Traducción al Canarés - Bashir Maisuri

Número de página:close

external-link copy
39 : 19

وَاَنْذِرْهُمْ یَوْمَ الْحَسْرَةِ اِذْ قُضِیَ الْاَمْرُ ۘ— وَهُمْ فِیْ غَفْلَةٍ وَّهُمْ لَا یُؤْمِنُوْنَ ۟

(ಓ ಪೈಗಂಬರರೇ)ನೀವು ಅವರಿಗೆ ವ್ಯಥೆ ಪಡುವ ದಿನದ ಎಚ್ಚರಿಕೆಯನ್ನು ನೀಡಿರಿ. ಆಗ ಸಂಗತಿಗಳ ವಿಷಯ ತೀರ್ಮಾನ ಮಾಡಲಾಗುವುದು. ಆದರೆ ಅವರು ಅಲಕ್ಷö್ಯತೆಯಲ್ಲಿದ್ದಾರೆ ಮತ್ತು ಅವರು ವಿಶ್ವಾಸವಿಡುವುದಿಲ್ಲ. info
التفاسير:

external-link copy
40 : 19

اِنَّا نَحْنُ نَرِثُ الْاَرْضَ وَمَنْ عَلَیْهَا وَاِلَیْنَا یُرْجَعُوْنَ ۟۠

ನಿಶ್ಚಯವಾಗಿಯೂ ಈ ಭೂಮಿ ಮತ್ತು ಅದರ ಮೇಲಿರುವ ಸಕಲರ ವಾರೀಸುದಾರರು ನಾವೇ ಆಗಿದ್ದೇವೆ ಮತ್ತು ಅವರೆಲ್ಲರೂ ನಮ್ಮೆಡೆಗೇ ಮರಳಿಸಲಾಗುವರು. info
التفاسير:

external-link copy
41 : 19

وَاذْكُرْ فِی الْكِتٰبِ اِبْرٰهِیْمَ ؕ۬— اِنَّهٗ كَانَ صِدِّیْقًا نَّبِیًّا ۟

ನೀವು ಈ ಗ್ರಂಥದಲ್ಲಿ ಇಬ್ರಾಹೀಮರ ವಿಷಯವನ್ನು ಪ್ರಸ್ತಾಪಿಸಿರಿ. ನಿಸ್ಸಂಶಯವಾಗಿಯೂ ಅವರು ಮಹಾ ಸತ್ಯಸಂಧ ಪೈಗಂಬರ್ ಆಗಿದ್ದರು. info
التفاسير:

external-link copy
42 : 19

اِذْ قَالَ لِاَبِیْهِ یٰۤاَبَتِ لِمَ تَعْبُدُ مَا لَا یَسْمَعُ وَلَا یُبْصِرُ وَلَا یُغْنِیْ عَنْكَ شَیْـًٔا ۟

ಅವರು ತಮ್ಮ ತಂದೆಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಓ ನನ್ನ ಪ್ರಿಯ ತಂದೆಯೇ, ಕೇಳಲಾಗದ, ನೋಡಲಾಗದ ಮತ್ತು ನಿಮಗೆ ಒಂದಿಷ್ಟೂ ಪ್ರಯೋಜನವನ್ನು ನೀಡಲಾಗದ ವಸ್ತುವನ್ನು ನೀವೇಕೆ ಆರಾಧಿಸುತ್ತಿದ್ದೀರಿ. info
التفاسير:

external-link copy
43 : 19

یٰۤاَبَتِ اِنِّیْ قَدْ جَآءَنِیْ مِنَ الْعِلْمِ مَا لَمْ یَاْتِكَ فَاتَّبِعْنِیْۤ اَهْدِكَ صِرَاطًا سَوِیًّا ۟

ಓ ನನ್ನ ಪ್ರಿಯ ತಂದೆಯೇ ನಿಮಗೆ ಬಂದಿರದAತಹ ಜ್ಞಾನ ನನಗೆ ಬಂದಿದೆ. ಆದ್ದರಿಂದ ನೀವು ನನ್ನನ್ನು ಅನುಸರಿಸಿರಿ.ನಾನು ನಿಮಗೆ ಅತ್ಯಂತ ನೇರಮಾರ್ಗದೆಡೆಗೆ ಮುನ್ನಡೆಸುವೆನು. info
التفاسير:

external-link copy
44 : 19

یٰۤاَبَتِ لَا تَعْبُدِ الشَّیْطٰنَ ؕ— اِنَّ الشَّیْطٰنَ كَانَ لِلرَّحْمٰنِ عَصِیًّا ۟

ಓ ನನ್ನ ಪ್ರಿಯ ತಂದೆಯೆ, ನೀವು ಶೈತಾನನನ್ನು ಆರಾಧಿಸಬೇಡಿರಿ. ಶೈತಾನನು ಪರಮ ದಯಾಮಯನಾದ ಅಲ್ಲಾಹನ ಧಿಕ್ಕಾರಿಯಾಗಿದ್ದಾನೆ. info
التفاسير:

external-link copy
45 : 19

یٰۤاَبَتِ اِنِّیْۤ اَخَافُ اَنْ یَّمَسَّكَ عَذَابٌ مِّنَ الرَّحْمٰنِ فَتَكُوْنَ لِلشَّیْطٰنِ وَلِیًّا ۟

ಓ ನನ್ನ ಪ್ರಿಯ ತಂದೆಯೇ, ಪರಮದಯಾಮಯನಾದ ಅಲ್ಲಾಹನಿಂದ ಯಾವುದದರೊಂದು ಯಾತನೆಯು ನಿಮಗೆ ತಗಲಿ ನೀವು ಶೈತಾನನ ಮಿತ್ರರಾಗಿ ಬಿಡುವಿರೆಂದು ನಾನು ಭಯಪಡುತ್ತೇನೆ. info
التفاسير:

external-link copy
46 : 19

قَالَ اَرَاغِبٌ اَنْتَ عَنْ اٰلِهَتِیْ یٰۤاِبْرٰهِیْمُ ۚ— لَىِٕنْ لَّمْ تَنْتَهِ لَاَرْجُمَنَّكَ وَاهْجُرْنِیْ مَلِیًّا ۟

ಅವನು (ತಂದೆ) ಉತ್ತರಿಸಿದನು: ಓ ಇಬ್ರಾಹೀಮ್, ನೀನು ನನ್ನ ಆರಾಧ್ಯರಿಂದ ವಿಮುಖನಾದೆಯಾ? ಕೇಳು, ನೀನು ಈ ನಿಲುವನ್ನು ತೊರೆಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಕೊಂದುಬಿಡುತ್ತೇನೆ. ಹೋಗು, ನೀನು ಒಂದು ದೀರ್ಘ ಕಾಲ ನನ್ನಿಂದ ದೂರವಾಗು. info
التفاسير:

external-link copy
47 : 19

قَالَ سَلٰمٌ عَلَیْكَ ۚ— سَاَسْتَغْفِرُ لَكَ رَبِّیْ ؕ— اِنَّهٗ كَانَ بِیْ حَفِیًّا ۟

ಇಬ್ರಾಹೀಮ್ ಹೇಳಿದರು: ನಿಮ್ಮ ಮೇಲೆ ಶಾಂತಿಯಿರಲಿ. ನಾನು ನಿಮಗಾಗಿ ನನ್ನ ಪ್ರಭುವಿನಲ್ಲಿ ಕ್ಷಮೆಯಾಚಿಸುತ್ತಲಿರುವೆನು. ಅವನು ನನ್ನ ಮೇಲೆ ತುಂಬಾ ಕೃಪೆಯುಳ್ಳವನಾಗಿದ್ದಾನೆ. info
التفاسير:

external-link copy
48 : 19

وَاَعْتَزِلُكُمْ وَمَا تَدْعُوْنَ مِنْ دُوْنِ اللّٰهِ وَاَدْعُوْا رَبِّیْ ۖؗ— عَسٰۤی اَلَّاۤ اَكُوْنَ بِدُعَآءِ رَبِّیْ شَقِیًّا ۟

ನಾನು ನಿಮ್ಮನ್ನು ಮತ್ತು ನೀವು ಅಲ್ಲಾಹನ ಹೊರತು ಕರೆದು ಪ್ರಾರ್ಥಿಸುತ್ತಿರುವುಗಳಿಂದ ಬಿಟ್ಟಗಲಿ ಹೋಗುತ್ತೇನೆ. ನಾನು ನನ್ನ ಪ್ರಭುವನ್ನು ಪ್ರಾರ್ಥಿಸಿ ನಿರಾಶನಾಗಲಾರೆ ಎಂದು ನಂಬಿದ್ದೇನೆ. info
التفاسير:

external-link copy
49 : 19

فَلَمَّا اعْتَزَلَهُمْ وَمَا یَعْبُدُوْنَ مِنْ دُوْنِ اللّٰهِ ۙ— وَهَبْنَا لَهٗۤ اِسْحٰقَ وَیَعْقُوْبَ ؕ— وَكُلًّا جَعَلْنَا نَبِیًّا ۟

ಇಬ್ರಾಹೀಮ್‌ರವರು ಅವರೆಲ್ಲರನ್ನು ಮತ್ತು ಅವರು ಅಲ್ಲಾಹನ ಹೊರತು ಆರಾಧಿಸುತ್ತಿದ್ದಂತಹ ಸಕಲ ಅರಾಧ್ಯರನ್ನು ಬಿಟ್ಟಗಲಿದಾಗ ನಾವು ಅವರಿಗೆ ಇಸ್‌ಹಾಕ್ ಮತ್ತು ಯಾಕೂಬ್‌ರನ್ನು ದಯಪಾಲಿಸಿದೆವು ಮತ್ತು ನಾವು ಅವರೆಲ್ಲರನ್ನು ಪ್ರವಾದಿಯನ್ನಾಗಿ ಮಾಡಿದೆವು. info
التفاسير:

external-link copy
50 : 19

وَوَهَبْنَا لَهُمْ مِّنْ رَّحْمَتِنَا وَجَعَلْنَا لَهُمْ لِسَانَ صِدْقٍ عَلِیًّا ۟۠

ಮತ್ತು ನಾವು ಅವರಿಗೆ ನಮ್ಮ ಕೃಪೆಯನ್ನು ದಯಪಾಲಿಸಿದೆವು ಮತ್ತು ಅವರ ಕೀರ್ತಿಯನ್ನು ಉನ್ನತಗೊಳಿಸಿದೆವು. info
التفاسير:

external-link copy
51 : 19

وَاذْكُرْ فِی الْكِتٰبِ مُوْسٰۤی ؗ— اِنَّهٗ كَانَ مُخْلَصًا وَّكَانَ رَسُوْلًا نَّبِیًّا ۟

(ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮೂಸಾರವರ ವಿಷಯವನ್ನು ಪ್ರಸ್ತಾಪಿಸಿರಿ. ನಿಶ್ಚಯವಾಗಿಯೂ ಅವರು ಆಯ್ದ ವ್ಯಕ್ತಿಯಾಗಿ ಮತ್ತು ಸಂದೇಶÀವಾಹಕರೂ ಹಾಗೂ ಪೈಗಂಬರರಾಗಿದ್ದರು. info
التفاسير: