Translation of the Meanings of the Noble Qur'an - Kannada translation - Hamza Butur

external-link copy
9 : 59

وَالَّذِیْنَ تَبَوَّءُو الدَّارَ وَالْاِیْمَانَ مِنْ قَبْلِهِمْ یُحِبُّوْنَ مَنْ هَاجَرَ اِلَیْهِمْ وَلَا یَجِدُوْنَ فِیْ صُدُوْرِهِمْ حَاجَةً مِّمَّاۤ اُوْتُوْا وَیُؤْثِرُوْنَ عَلٰۤی اَنْفُسِهِمْ وَلَوْ كَانَ بِهِمْ خَصَاصَةٌ ۫ؕ— وَمَنْ یُّوْقَ شُحَّ نَفْسِهٖ فَاُولٰٓىِٕكَ هُمُ الْمُفْلِحُوْنَ ۟ۚ

ಅವರಿಗಿಂತ ಮೊದಲೇ ಆ ಮನೆಯಲ್ಲಿ (ಮದೀನದಲ್ಲಿ) ಮತ್ತು ಸತ್ಯವಿಶ್ವಾಸದಲ್ಲಿ ವಾಸ್ತವ್ಯವನ್ನು ಸಿದ್ಧಗೊಳಿಸಿದವರಿಗೂ (ಇರುವುದಾಗಿದೆ). ಅವರು ತಮ್ಮ ಬಳಿಗೆ ವಲಸೆ (ಹಿಜ್ರ) ಮಾಡಿದವರನ್ನು ಪ್ರೀತಿಸುತ್ತಾರೆ.[1] ಮುಹಾಜಿರರಿಗೆ ಏನು ಕೊಡಲಾಗುತ್ತದೋ ಅದರ ಬಗ್ಗೆ ಇವರಿಗೆ ಇವರ ಹೃದಯದಲ್ಲಿ ಯಾವುದೇ ಅಸಮಾಧಾನವು ಉಂಟಾಗುವುದಿಲ್ಲ. ತಮಗೆ ಎಷ್ಟೇ ಅಗತ್ಯವಿದ್ದರೂ ಸಹ ಇವರು ಅವರಿಗೆ ಆದ್ಯತೆಯನ್ನು ನೀಡುತ್ತಾರೆ. ಯಾರನ್ನು ಅವರ ಮನಸ್ಸಿನ ಜಿಪುಣತನದಿಂದ ರಕ್ಷಿಸಲಾಗಿದೆಯೋ ಅವರೇ ಯಶಸ್ವಿಯಾದವರು. info

[1] ಮುಹಾಜಿರ್‌ಗಳೆಂದರೆ ಮಕ್ಕಾದಿಂದ ಮದೀನಕ್ಕೆ ವಲಸೆ ಬಂದವರು. ಅವರಿಗೆ ಸಂರಕ್ಷಣೆ ನೀಡಿ ಸಹಾಯ ಮಾಡಿದ ಮದೀನ ನಿವಾಸಿಗಳಾದ ಮುಸ್ಲಿಮರನ್ನು ಅನ್ಸಾರ್ ಎಂದು ಕರೆಯಲಾಗುತ್ತದೆ.

التفاسير: